Raksha Bandhan 2022 : ರಕ್ಷಾ ಬಂಧನ ಆಚರಣೆಯ ಹಿಂದಿನ ಇತಿಹಾಸ ಹಾಗೂ ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

Raksha Bandhan 2022 Date History : ಸಹೋದರ ಹಾಗೂ ಸಹೋದರಿಯ ನಡುವಿನ ಬಾಂಧವ್ಯ ಅತ್ಯಂತ ಅಮೂಲ್ಯವಾದದ್ದು. ಹಿಂದೂ ಧರ್ಮದಲ್ಲಿಯೂ ಈ ಸಂಬಂಧಕ್ಕೆಂದೇ ವಿಶೇಷ ಸ್ಥಾನಮಾನಗಳನ್ನು ನೀಡಲಾಗಿದೆ. ಪ್ರತಿ ವರ್ಷ ಹಿಂದೂ ಜನತೆ ಅತ್ಯಂತ ಉತ್ಸಾಹದಿಂದ ರಕ್ಷಾ ಬಂಧನವನ್ನು ಆಚರಿಸುತ್ತಾರೆ. ಸಹೋದರಿಯರು ತಮ್ಮ ಸಹೋದರನ ಕೈಗೆ ರಾಖಿಯನ್ನು ಕಟ್ಟುವ ಮೂಲಕ ಆತನ ಆರೋಗ್ಯ ಹಾಗೂ ಆಯಸ್ಸಿಗಾಗಿ ಪ್ರಾರ್ಥಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಸಹೋದರರು ಜೀವಮಾನವಿಡೀ ಸಹೋದರಿಗೆ ರಕ್ಷಣೆಯಾಗಿ ನಿಲ್ಲುವ ಪ್ರತಿಜ್ಞೆಯನ್ನು ಮಾಡುತ್ತಾರೆ. ಈ ವರ್ಷ ಆಗಸ್ಟ್​ 11ರಂದು ರಕ್ಷಾ ಬಂಧನವನ್ನು ಆಚರಿಸಲಾಗುತ್ತಿದೆ.

ಹಿಂದೂ ಕ್ಯಾಲೆಂಡರ್​ನ ಪ್ರಕಾರ ಶ್ರಾವಣದ ಕೊನೆಯ ದಿನದಂದು ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. ಸಂಸ್ಕೃತ ಭಾಷೆಯಲ್ಲಿ ರಕ್ಷಾ ಬಂಧನವೆಂದರೆ ರಕ್ಷಣೆ, ಬಾಧ್ಯತೆ ಅಥವಾ ಕಾಳಜಿಯ ಬಂಧ ಎಂದು ಅರ್ಥವಾಗಿದೆ. ರಕ್ಷಾ ಬಂಧನವೆಂಬ ಹಬ್ಬವು ಯಾವ ದಿನದಂದು ಹುಟ್ಟಿಕೊಂಡಿತು ಎಂಬುದಕ್ಕೆ ಪುರಾಣಗಳಲ್ಲಿ ನಿಖರವಾದ ಉಲ್ಲೇಖಗಳು ಇಲ್ಲವಾದರೂ ಸಹ ಹಬ್ಬದ ಪ್ರಾಮುಖ್ಯತೆಯನ್ನು ಉಲ್ಲೇಖಿಸುವ ಹಲವಾರು ಕತೆಗಳು ಇವೆ. ಇವುಗಳಲ್ಲಿ ಒಂದು ಬಲಿರಾಜ ಹಾಗೂ ಲಕ್ಷ್ಮೀ ದೇವಿಯ ನಡುವಿನ ನಂಬಿಕೆಯ ಬಂಧದ ಬಗ್ಗೆ. ಬಲಿ ರಾಜ ಮೂರು ಬಾರಿ ವಿಷ್ಣುವನ್ನು ಸೋಲಿಸಿ ಆತನನ್ನು ತನ್ನ ಮನೆಯಲ್ಲಿ ಬಂಧಿಸಿ ಇಟ್ಟಿದ್ದನು. ಆದರೆ ಲಕ್ಷ್ಮೀಯು ತನ್ನ ಪತಿಯನ್ನು ಮರಳಿ ಪಡೆದುಕೊಳ್ಳಲು ಬಲಿ ರಾಜನ ಮಣಿಕಟ್ಟಿನ ಸುತ್ತ ದಾರವನ್ನು ಕಟ್ಟಿದಳು.ಇದನ್ನು ನಂಬಿಕೆಯ ಬಂಧವೆಂದು ಭಾವಿಸುವಂತೆ ಬೇಡಿಕೊಂಡಳು.ಇದಕ್ಕೆ ನಿರಾಕರಿಸಲು ಸಾಧ್ಯವಾಗದೇ ಬಲಿ ರಾಜನು ವಿಷ್ಣುವನ್ನು ಲಕ್ಷ್ಮೀಯ ಬಳಿಗೆ ಕಳುಹಿಸಿಕೊಟ್ಟನು.

ಮತ್ತೊಂದು ಕತೆಯ ಪ್ರಕಾರ, ಶ್ರೀಕೃಷ್ಣನು ಒಮ್ಮೆ ಗಾಳಿಪಟವನ್ನು ಹಾರಿಸುತ್ತಿದ್ದ ಸಂದರ್ಭದಲ್ಲಿ ಕೈ ಬೆರಳಿಗೆ ಗಾಯ ಮಾಡಿಕೊಂಡನು. ಶ್ರೀಕೃಷ್ಣನ ಬೆರಳಲ್ಲಿ ರಕ್ತವನ್ನು ನೋಡಿದ ದ್ರೌಪದಿಯು ಓಡಿ ಹೋಗಿ ತನ್ನ ಸೀರೆಯನ್ನು ಹರಿದು ಆ ಬಟ್ಟೆಯ ತುಂಡನ್ನು ಕೃಷ್ಣನ ಬೆರಳಿಗೆ ಕಟ್ಟಿದಳು. ಭಗವಾನ್ ಶ್ರೀಕೃಷ್ಣನು ಇದರಿಂದ ಸಂತುಷ್ಟನಾಗಿ ಎಂತಹ ಸಂದರ್ಭ ದಲ್ಲಿಯೂ ದುಷ್ಟರಿಂದ ನಿನ್ನನ್ನು ರಕ್ಷಿಸುತ್ತೇನೆಂದು ದ್ರೌಪದಿಗೆ ಅಭಯವಿತ್ತನು. ಅಂತೆಯೇ ಅವನು ದ್ರೌಪದಿ ಮಾನಾಪಹರಣ ಸಂದರ್ಭದಲ್ಲಿ ಕೌರವರಿಂದ ಆಕೆಯನ್ನು ಬಚಾವ್​ ಮಾಡಿದ್ದನು.

ಇದನ್ನು ಓದಿ : Raksha Bandhan 2022 : ರಕ್ಷಾ ಬಂಧನವನ್ನು ಎಂದು ಆಚರಿಸಬೇಕು, ರಾಖಿ ಕಟ್ಟುವಾಗ ಎಷ್ಟು ಗಂಟು ಹಾಕಬೇಕು ಇಲ್ಲಿದೆ ಮಾಹಿತಿ

ಇದನ್ನೂ ಓದಿ : MS Dhoni Menton CSA T20 League : ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಸಿಎಸ್‌ಕೆ ತಂಡಕ್ಕೆ ಎಂ.ಎಸ್ ಧೋನಿ ಮೆಂಟರ್

Raksha Bandhan 2022 Date History, Importance, and Significance

Comments are closed.