Raksha Bandhan 2022 : ರಕ್ಷಾ ಬಂಧನವನ್ನು ಎಂದು ಆಚರಿಸಬೇಕು, ರಾಖಿ ಕಟ್ಟುವಾಗ ಎಷ್ಟು ಗಂಟು ಹಾಕಬೇಕು ಇಲ್ಲಿದೆ ಮಾಹಿತಿ

Raksha Bandhan 2022 : ಸಹೋದರ ಹಾಗೂ ಸಹೋದರಿ ನಡುವಿನ ಬಂಧವನ್ನು ಸಾರುವ ರಕ್ಷಾ ಬಂಧನದ ಹಬ್ಬ ಇನ್ನೇನು ಸಮೀಪಿಸುತ್ತಿದೆ. ರಕ್ಷಾ ಬಂಧನವನ್ನು ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಆಚರಿಸುತ್ತಾರೆ. ಈ ದಿನದಂದು ಸಹೋದರಿಯು ತನ್ನ ಸಹೋದರನ ಕೈಗೆ ರಾಖಿಯನ್ನು ಕಟ್ಟುವ ಮೂಲಕ ಆತನ ಆರೋಗ್ಯ ಹಾಗೂ ಸಂತೋಷಕ್ಕಾಗಿ ಪ್ರಾರ್ಥಿಸುತ್ತಾಳೆ. ಇದಕ್ಕೆ ಪ್ರತಿಯಾಗಿ ಸಹೋದರನು ಜೀವನದುದ್ದಕ್ಕೂ ತಾನು ಅವಳನ್ನು ಬೆಂಬಲಿಸುವುದಾಗಿ ಹಾಗೂ ರಕ್ಷಣೆಯನ್ನು ನೀಡುವುದಾಗಿ ಭರವಸೆ ನೀಡುತ್ತಾರೆ.

ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ ರಕ್ಷಾ ಬಂಧನದ ಹಬ್ಬವು ಆಗಸ್ಟ್​ 11ರ ಸಂಜೆಯಂದು ಆರಂಭವಾಗುತ್ತದೆ. ಹಾಗೂ ಆಗಸ್ಟ್​ 12ರ ಶುಕ್ರವಾರ ಬೆಳಗ್ಗೆಯವರೆಗೆ ಮುಂದುವರಿಯುತ್ತದೆ. ರಕ್ಷಾ ಬಂಧನದ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಬ್ಬದ ಬಗ್ಗೆ ಕೆಲವು ಪ್ರಮುಖ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳೋಣ :
ರಕ್ಷಾ ಬಂಧನದ ದಿನದಂದು ಸಹೋದರಿಯು ತನ್ನ ಸಹೋದರನ ಮಣಿಕಟ್ಟಿನ ಮೇಲೆ ರಾಖಿಯನ್ನು ಕಟ್ಟುವಾಗ ಮೂರು ಗಂಟುಗಳನ್ನೇ ಹಾಕಬೇಕು. ಧಾರ್ಮಿಕ ನಂಬಿಕೆಯ ಪ್ರಕಾರ,ರಾಖಿ ಕಟ್ಟುವಾಗ ಮೂರು ಗಂಟುಗಳನ್ನು ಹಾಕುವುದು ಮಂಗಳಕರ ಎಂದು ಪರಿಗಣಿಸಲಾಗಿದೆ. ಏಕೆಂದರೆ ಮೂರು ಗಂಟು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರನಿಗೆ ಸಂಭವಿಸಿದೆ .

ರಾಖಿಯ ಮೊದಲ ಗಂಟು ಸಹೋದರನ ದೀರ್ಘಾಯುಷ್ಯಕ್ಕಾಗಿ, ಎರಡನೇ ಗಂಟು ತನ್ನ ದೀರ್ಘಾಯುಷ್ಯಕ್ಕಾಗಿ ಹಾಗೂ ಮೂರನೇ ಗಂಟು ಸಹೋದರ ಮತ್ತು ಸಹೋದರಿಯ ನಡುವಿನ ಬಲವಾದ ಬಂಧವನ್ನು ರಕ್ಷಿಸಲು ಕಟ್ಟಲಾಗುತ್ತದೆ ಎಂದು ಹೇಳಲಾಗಿದೆ.

ರಾಖಿಯನ್ನು(Raksha Bandhan 2022) ಕಟ್ಟಲು ಶುಭ ಮುಹೂರ್ತ :

ಗುರುವಾರ, ಆಗಸ್ಟ್ 11, ರಂದು, ಹುಣ್ಣಿಮೆಯು ಬೆಳಗ್ಗೆ 09:35 ಕ್ಕೆ ಪ್ರಾರಂಭವಾಗುತ್ತದೆ. ಆಗಸ್ಟ್ 11 ರ ಗುರುವಾರದಂದು ಶುಭ ಮುಹೂರ್ತವು ರಾತ್ರಿ 08:51 ರಿಂದ 09:12 ರವರೆಗೆ ಇರುತ್ತದೆ. ಆಗಸ್ಟ್ 12 ರಂದು ಪೂರ್ಣಿಮಾ ತಿಥಿಯೂ ಆಗಿರುವುದರಿಂದ, ಆ ದಿನದಂದು ಯಾವುದೇ ಸಮಯದಲ್ಲಿ ರಾಖಿ ಹಬ್ಬವನ್ನು ಆಚರಿಸಬಹುದು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಅಲ್ಲದೇ ರಾಖಿಯನ್ನು ಕಟ್ಟುವಾಗ ಸಹೋದರನ ಮುಖ ಪೂರ್ವದ ಕಡೆಗೂ ಹಾಗೂ ಸಹೋದರಿಯ ಮುಖ ಪಶ್ಚಿಮದ ಕಡೆಯೂ ಇರಬೇಕು ಎನ್ನಲಾಗಿದೆ .

ಇದನ್ನು ಓದಿ : MS Dhoni Menton CSA T20 League : ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಸಿಎಸ್‌ಕೆ ತಂಡಕ್ಕೆ ಎಂ.ಎಸ್ ಧೋನಿ ಮೆಂಟರ್

ಇದನ್ನೂ ಓದಿ : Mukesh Ambani Ravi Shastri : ರವಿಶಾಸ್ತ್ರಿ ಜೊತೆ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡ ಮುಕೇಶ್ ಅಂಬಾನಿ, ಏನಿದರ ಗುಟ್ಟು?

Raksha Bandhan 2022 : Why You Should Tie 3 Knots of Rakhi

Comments are closed.