ಇಲ್ಲಿ ಮನೆ, ಅಂಗಡಿಗೆ ಬಾಗಿಲಿಲ್ಲ, ಕಳ್ಳತನದಿಂದ ಕಾಯ್ತಾನೆ ಶನಿ ಮಹಾತ್ಮ; ಪೂಜಿಸಿದ್ರೆ ಶನಿ ದೋಷ ಮಾಯ

Shani Shingnapur Temple : ಮನೆಗೆ ಬಾಗಿಲಿಡೋದು ಯಾಕೆ ಹೇಳಿ ? ಭದ್ರವಾಗಿ ಮುಚ್ಚಿ ಮಲಗಿದ್ರೆ ಕಳ್ಳರು ಕಾಕರ ಭಯ ಇರಲ್ಲ ಅಂತ ಹೇಳಿ . ಆದ್ರೆ ಈ ಊರಿನಲ್ಲಿ ಮನೆಗಳಿಗೆ, ಅಂಗಡಿಗಳಿಗೆ ಬಾಗಿಲೇ ಇಲ್ಲ. ಹಾಗಾದ್ರೆ ಅಲ್ಲಿ ಯಾವುದೇ ಅಮೂಲ್ಯವಾದದನ್ನು ಇಡಲ್ವೇನೋ ಅಂತ ನೀವು ಅಂದು ಕೊಂಡಿರಬಹುದು . ಇಲ್ಲ ಅಲ್ಲೂ ನಮ್ಮಂತೆ ನಿಮ್ಮಂತೆ ಮನೆಗೆ ಬೇಕಾದ ಅಮೂಲ್ಯವಾದ ವಸ್ತು ಗಳು ಇರುತ್ತೆ. ಆದರೆ ಅವರಿಗೆ ಕಳ್ಳ ಕಾಕರ ಭಯ ಮಾತ್ರ ಇರಲ್ಲ . ಬಾಗಿಲು ತೆರೆದೇ ಮಲಗಿದ್ರೂ ಅಲ್ಲಿಗೆ ಕಳ್ಳ ಕಾಕರು ಬರಲ್ಲ. ಹೌದು ಅಲ್ಲಿ ಕಳ್ಳ ಕಾಕರ ಭಯವಿಲ್ಲ. ಅಲ್ಲಿ ಕಳ್ಳತನ ಮಾಡಿದ್ರೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಅನ್ನೋದು ಕಳ್ಳರಿಗೂ ಗೊತ್ತು. ಅದ್ರೆ ಶಿಕ್ಷೆ ಕೊಡೋರು ಯಾರು ಗೊತ್ತಾ ? ಪೋಲೀಸರಲ್ಲ ಬದಲಾಗಿ ಅಲ್ಲಿ ಊರ ಕಾಯೋಕೆ ನಿಂತಿರುವ ದೇವತೆ ಶನಿ ಮಾಹಾರಾಜ.

ಹೌದು ಇಲ್ಲಿ ನೆಲೆಸಿರು ಶನಿ ಊರನ್ನು ಜನರನ್ನು ಕಾಯುತ್ತಾನೆ . ಮನೆಯಲ್ಲಿ ಒಡವೆ ವಸ್ತ್ರವನ್ನು ಎದುರಿಗೆ ಇಟ್ಟು ಹೋದರೂ ಯಾರೂ ತೆಗೆದುಕೊಂಡು ಹೋಗೋದಿಲ್ಲ. ಅಕಸ್ಮಾತ್ ಆಗಿ ಕದ್ದರೆ ಆತನಿಗೆ ಶನಿ ಹೆಗಲೇರಿ ಬಿಡ್ತಾನೆ ಅನ್ನೋದು ಇಲ್ಲಿನ ಜನರ ನಂಬಿಕೆ.ಈ ಊರಿನಲ್ಲಿ ಇರುವ ಶನಿ ದೇವಾಲಯದ ಬಗ್ಗೆ ಹೇಳೋದಾದ್ರೆ ಈ ದೇವಾಲಯ ಎಲ್ಲಾ ಶನಿ ದೇವಾಲಯದಂತಲ್ಲ. ಬದಲಾಗಿ ಈ ದೇವಾಲಯಕ್ಕೆ ಹೋಗೋಕೆ ಕೆಲವು ರೂಲ್ಸ್ ಅಥವಾ ನಿಯಮಗಳಿವೆ. ಇಲ್ಲಿ ಹೋಗೋವಾಗ ವಾಚ್, ಬೆಲ್ಟ್ , ಅಥವಾ ಲಾಕ್ ಮಾಡಲಾಗುವ ಯಾವುದೇ ವಸ್ತುಗಳನ್ನು ಒಯ್ಯುವಂತಿಲ್ಲ . ಒಂದು ವೇಳೆ ತೆಗೆದುಕೊಂಡು ಹೋದರೂ ದೇವಾಲಯದ ಹೊರಗಿರುವ ಅಂಗಡಿಗಳಲ್ಲಿ ಇಡಬೇಕಾಗುತ್ತೆ. ಇಲ್ಲಿ ನಿಮ್ಮ ವಸ್ತುಗಳು ಕೂಡಾ ಇಲ್ಲಿ ಕಳ್ಳತನ ಆಗೋದಿಲ್ಲ.

ಇನ್ನು ಈ ದೇವಾಲಯದಲ್ಲಿ ಯಾರೂ ಅರ್ಚಕರಿರೋದಿಲ್ಲ. ಬದಲಾಗಿ ದೇವಾಲಯದಿಂದ ನೂರು ಮೀಟರ್ ದೂರದಲ್ಲಿರುವ ಅಂಗಡಿಗಳ ಮಾಲೀಕರು ದೇವಾಲಯದಲ್ಲಿ ಹೇಗೆ ಪೂಜೆ ಮಾಡಬೇಕು. ಯಾವುದನ್ನು ಮಾಡ ಬಾರದು ಅನ್ನೋ ಮಾಹಿತಿಯನ್ನು ನೀಡುತ್ತಾರೆ . ಅವರಲ್ಲಿ ಮಾಹಿತಿ ಅರಿತ ಮೇಲಷ್ಟೆ ದೇವರ ದರ್ಶನ ಮಾಡುವುದು ಉತ್ತಮ. ಇಲ್ಲಿ ಶನಿ ದೇವನನ್ನು ದರ್ಶನ ಮಾಡಿದ್ರೆ ಶನಿ ದೋಷಗಳು ಪರಿಹಾರ ಆಗುತ್ತೆ ಅನ್ನೋ ನಂಬಿಕೆ ಇದೆ. ಇಲ್ಲಿನ ಮತ್ತೊಂದು ನಿಯಮ ಅಂದ್ರೆ ಇಲ್ಲಿ ಶನಿ ದೇವನನ್ನು ದರ್ಶಿಸಿದ ನಂತರ ತಿರುಗಿ ನೋಡುವಂತಿಲ್ಲ. ಒಂದು ವೇಳೆ ತಿರುಗಿ ನೋಡಿದ್ರೆ ಮತ್ತೆ ಶನಿ ಹೆಗಲು ಏರುತ್ತಾನೆ ಅನ್ನೋದು ಇಲ್ಲಿನ ಸ್ಥಳೀಯರ ನಂಬಿಕೆ . ಹೀಗಾಗಿ ಅಲ್ಲಿಗೆ ತೆರಳುವ ಮುನ್ನವೇ ಈ ಬಗ್ಗೆ ಅವರು ಮಾಹಿತಿ ನೀಡುತ್ತಾರೆ. ಇನ್ನು ಇಲ್ಲಿ ಸಿಗುವ ಯಂತ್ರವೊಂದನ್ನು ತಂದು ನಮ್ಮ ಮನೆಗಳಿಗೆ ಕಟ್ಟಿದ್ರೆ ಕಳ್ಳತನ ಭಯವಿರೋದಿಲ್ಲ ಅನ್ನೋದು ಭಕ್ತರ ನಂಬಿಕೆ.

ಇನ್ನು ಬಾಗಿಲಿನ ವಿಷಯಕ್ಕೆ ಬರೋದಾದ್ರೆ, ಇಲ್ಲಿ ಯಾವುದೇ ಮನೆ ಅಥವಾ ಅಂಗಡಿ ಒಪನ್ ಆದ್ರೆ ಅಲ್ಲಿ ಬಾಗಿಲನ್ನು ಹಾಕುವಂತಿಲ್ಲ. ಅಂಗಡಿಗಳಿಗೆ , ಮನೆಗಳಿಗೆ ಮುಖ್ಯ ದ್ವಾರದ ಬಾಗಿಲು ಇರೋದೆ ಇಲ್ಲ. ಒಂದು ವೇಳೆ ಇಲ್ಲಿ ಬಾಗಿಲನ್ನು ;ಹಾಕಿಸಿದ್ರೆ ಶನಿದೇವ ಮುನಿಯುತ್ತಾನೆ ಅನ್ನೋದು ಇಲ್ಲಿನ ಜನರ ನಂಬಿಕೆ.ಇಂತಹಾ ವಿಶಿಷ್ಟ ದೇವಾಲಯ ಇರೋದು ಎಲ್ಲಿ ಅಂದ್ರೆ ಮಹಾರಾಷ್ಟ್ರದಲ್ಲಿರೋ ಶನಿ ಶಿಂಗಾಪುರದಲ್ಲಿ (Shani Shingnapur Temple) . ಇಲ್ಲಿ ಶನಿ ದೇವರು ನೆಲೆಸಿರೋದ್ರಿಂದಲೇ ಅಲ್ಲಿಗೆ ಈ ಹೆಸರು ಬಂದಿರೋದು. ಇದು ಶಿರಡಿಯಿಂದ ಸುಮಾರು 72 ಕಿಮೀ ದೂರದಲ್ಲಿದೆ. ಶಿರಡಿಯಿಂದ ಅಲ್ಲಿಗೆ ತೆರಳೋಕೆ ಸಾರಿಗೆ ವ್ಯವಸ್ಥೆ ಖಾಸಗಿ ಕಾರು ಆಟೋ ಸೌಲಭ್ಯಗಳಿವೆ . ವಿಮಾನ ಸಾರಿಗೆಯನ್ನು ಬಯಸುವವರಿಗೆ ಶಿರಡಿಯ ತನಕ ವಿಮಾನದಲ್ಲಿ ಬರಬಹುದು . ಸಾಧ್ಯವಾದರೆ ಒಮ್ಮೆ ಇಲ್ಲಿಗೆ ಭೇಟಿಕೊಟ್ಟು  ನೋಡಿ

ಇದನ್ನೂ ಓದಿ : Chaya Someshwar temple : ಕಂಬದ ನೆರಳು ಸದಾ ಶಿವಲಿಂಗದ ಮೇಲೆ : ಅಪರೂಪದ ಛಾಯಾ ಸೋಮೇಶ್ವರ ದೇವಾಲಯದ ವಿಶೇಷತೆ ನಿಮಗೆ ಗೊತ್ತಾ..?

ಇದನ್ನೂ ಓದಿ : Biccavolu Ganesha Temple : ನಿಮ್ಮ ಕೋರಿಕೆಗಳನ್ನು ಕೇಳಿಸಿಕೊಳ್ಳುತ್ತಾನೆ ಈ ಗಣಪ

Comments are closed.