India Beat Ireland : ಐಸಿಸಿ ಮಹಿಳಾ ಟಿ20 ವಿಶ್ವಕಪ್: ಸೆಮಿಫೈನಲ್’ಗೆ ಲಗ್ಗೆ ಇಟ್ಟ ಟೀಮ್ ಇಂಡಿಯಾ

ಜೊಹಾನ್ಸ್’ಬರ್ಗ್: ( India Beat Ireland): ಹರ್ಮನ್ ಪ್ರೀತ್ ಕೌರ್ ಸಾರಥ್ಯದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಸೇಂಟ್ ಜಾರ್ಜ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 5 ರನ್’ಗಳಿಂದ ಸೋಲಿಸಿದ ಭಾರತ (India Beat Ireland) ಲೀಗ್ ಹಂತದಲ್ಲಿ 3ನೇ ಗೆಲುವು ದಾಖಲಿಸಿತು. ಇದರೊಂದಿಗೆ ಅಂಕ ಗಳಿಕೆಯನ್ನು ಒಟ್ಟಾರೆ ಆರಕ್ಕೇರಿಸಿಕೊಂಡ ಟೀಮ್ ಇಂಡಿಯಾ ಗ್ರೂಪ್ ‘ಬಿ’ನಿಂದ 2ನೇ ಸ್ಥಾನಿಯಾಗಿ ಸೆಮಿಫೈನಲ್’ಗೆ ಲಗ್ಗೆ ಇಟ್ಟಿತು. ಇಂಗ್ಲೆಂಡ್ ತಂಡ ಬಿ ಗುಂಪಿನಿಂದ ಮೊದಲ ತಂಡವಾಗಿ ಅಂತಿಮ 4ರ ಘಟ್ಟಕ್ಕೆ ಅರ್ಹತೆ ಪಡೆದಿತ್ತು.

ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 155 ರನ್ ಕಲೆ ಹಾಕಿತು. ಉಪನಾಯಕಿ ಸ್ಮೃತಿ ಮಂಧನ ಕೇವಲ 56 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್’ಗಳ ನೆರವಿನಿಂದ 87 ರನ್ ಸಿಡಿಸಿದರು.

ನಂತರ ಗುರಿ ಬೆನ್ನಟ್ಟಿದ ಐರ್ಲೆಂಡ್ 8.4 ಓವರ್’ಗಳಲ್ಲಿ 2 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿದ್ದಾಗ ಸುರಿದ ಮಳೆ ನಂತರ ಪಂದ್ಯ ಮುಂದುವರಿಯಲು ಅವಕಾಶ ನೀಡಲಿಲ್ಲ. ಹೀಗಾಗಿ ಫಲಿತಾಂಶಕ್ಕಾಗಿ ಡಕ್ವರ್ತ್ ಲೂಯಿಸ್ ನಿಯಮದ ಮೊರೆ ಹೋಗಲಾಯಿತುೆ ಈ ವೇಳೆ ಭಾರತ 5 ರನ್’ಗಳ ಮುನ್ನಡೆಯಲ್ಲಿದ್ದರಿಂದ ಭಾರತವನ್ನು ವಿಜಯಿ ಎಂದು ಘೋಷಿಸಲಾಯಿತು.

ICC ಮಹಿಳಾ T20 ವಿಶ್ವಕಪ್ 2023 ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (wk), ರಿಚಾ ಘೋಷ್ (wk) ಜೆಮಿಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ರಾಧಾ ಯಾದವ್, ರೇಣುಕಾ ಠಾಕೂರ್, ಅಂಜಲಿ ಸರ್ವಾಣಿ, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್ ಮತ್ತು ಶಿಖಾ ಪಾಂಡೆ.

ಐಸಿಸಿ ಮಹಿಳಾ T20 ವಿಶ್ವಕಪ್ 2023 ಐರ್ಲೆಂಡ್ ತಂಡ: ಲಾರಾ ಡೆಲಾನಿ (ನಾಯಕ), ಜಾರ್ಜಿನಾ ಡೆಂಪ್ಸೆ, ಆಮಿ ಹಂಟರ್, ಶೌನಾ ಕವನಾಗ್, ಅರ್ಲೀನ್ ಕೆಲ್ಲಿ, ಗ್ಯಾಬಿ ಲೆವಿಸ್, ಲೂಯಿಸ್ ಲಿಟಲ್, ಸೋಫಿ ಮ್ಯಾಕ್‌ಮಹೋನ್, ಜೇನ್ ಮ್ಯಾಗೈರ್, ಮೇರಿ ವಾಲ್ಡ್ರಾನ್ (ಮೇರಿ ವಾಲ್ಡ್ರಾನ್ (ಕ್ಯಾಪ್ಟನ್), ಪಾಲ್, ಓರ್ಲಾ ಪ್ರೆಂಡರ್‌ಗಾಸ್ಟ್, ಎಮಿಯರ್ ರಿಚರ್ಡ್‌ಸನ್ ಮತ್ತು ರೆಬೆಕಾ ಸ್ಟೋಕೆಲ್.

ಇದನ್ನೂ ಓದಿ : Smriti Mandhana RCB captain : ಮಹಿಳಾ ಪ್ರೀಮಿಯರ್ ಲೀಗ್: ರಾಯಲ್ ಚಾಲೆಂಜರ್ಸ್ ತಂಡದ ನಾಯಕಿಯ ಹೆಸರನ್ನು ಘೋಷಿಸಿದ ವಿರಾಟ್ ಕೊಹ್ಲಿ

ಇದನ್ನೂ ಓದಿ : Virat Kohli world record : ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತಿ ವೇಗದ 25 ಸಾವಿರ ರನ್; ಸಚಿನ್ ವಿಶ್ವದಾಖಲೆ ಪುಡಿಗಟ್ಟಿದ ಕಿಂಗ್ ಕೊಹ್ಲಿ

Comments are closed.