Sleeping Hanuman : ಮಲಗಿದ ರೂಪದಲ್ಲಿದ್ದಾನೆ ಹನುಮಂತ ; ಭಕ್ತನ ಕೋರಿಕೆಗಾಗಿ ಈ ರೂಪ

Sleeping Hanuman : ಆಂಜನೇಯ, ವಿಶಾಲ ದೇಹಿ. ಈತ ಭಗವಂತನೂ ಹೌದು ಭಕ್ತನೂ ಹೌದು . ಭಕ್ತರ ಪಾಲಿಗಂತೂ ವಾಯುಪುತ್ರ ಬಿಗ್ ಬಾಸ್ . ಗದೆಯನ್ನು ಹಿಡಿದು ನಿಂತ ಗಾಂಭೀರ್ಯವನ್ನು ನೋಡಿದ್ರೆ ಎಂಥವರಿಗಾದರೂ ಮೈ ಜುಂ ಅನಿಸದೇ ಇರದು . ಅವನು ಒಂದು ಬಾರಿ ಒಲಿದ್ರೆ ಅಲ್ಲಿ ದುಷ್ಟ ಶಕ್ತಿಗಳಿಗೆ ಜಾಗವಿಲ್ಲ. ಆದ್ರೆ ಈ ದೇವಾಲಯದಲ್ಲಿ ಮಾತ್ರ ಅಂಜನೀಪುತ್ರ ಈ ಗಾಂಭೀರ್ಯದ ರೂಪವನ್ನು ಬಿಟ್ಟು ಶಾಂತ ರೀತಿಯಲ್ಲಿ ಮಲಗಿದ್ದಾನೆ.

ಹೌದು, ಸಾಮಾನ್ಯವಾಗಿ ನಮ್ಮ ದೇವಾಲಯದಲ್ಲಿ ಕಾಣೋ ಹನುಮಂತನ ರೂಪ ಅಂದ್ರೆ ಅದು ಗದೆಯನ್ನು ಹಿಡಿದು ನಿಂತಿರುವ ವಿರಾಟ ರೂಪವನ್ನು. ಆದ್ರೆ ಈ ದೇವಾಲಯದಲ್ಲಿ ಮಾತ್ರ ನಿಂತಿರುವ ವಿಗ್ರಹದ ಬದಲಾಗಿ ಮಲಗಿದ ರೂಪದಲ್ಲಿ ವಾಯುಪುತ್ರ ನಮಗೆ ದರ್ಶನ ನೀಡುತ್ತಾನೆ. ಕೇವಲ ಭಾರತದ ಮೂರು ದೇವಾಲಯದಲ್ಲಿ ಈ ರೂಪದ ಹನುಮನ ವಿಗ್ರಹವನ್ನು ಕಾಣಬಹುದು.

ಇಲ್ಲಿ ಹನುಮಂತ ಶಿಲಾರೂಪದಲ್ಲಿ ನೆಲೆ ನಿಂತಿದ್ದಾನೆ. ಇಲ್ಲಿ ಸ್ವತಹ ಹನುಮಂತನೇ ಮಲಗಿದ್ದಾನೆ (Sleeping Hanuman) ಎಂಬ ನಂಬಿಕೆ ಇದೆ. ಹೀಗಾಗಿ ಭಕ್ತರು ತಮ್ಮ ಕಷ್ಟವನ್ನು ನಿವಾರಿಕೊಳ್ಳಲು ಇಲ್ಲಿಗೆ ಬರುತ್ತಾರೆ . ಇನ್ನು ಈ ಉದ್ಬವ ಶಿಲೆಯನ್ನು ಹನುಂತನೇ ಅಂದು ಕೊಳ್ಳಲು ಕೂಡಾ ಒಂದು ಕಾರಣವಿದೆ . ಪೌರಾಣಿಕ ಕಥೆಗಳ ಪ್ರಕಾರ ಈ ದೇವಾಲಯ ವಿರೊ ಮಹಾರಾಷ್ಟ್ರದ ಕುಲ್ಹಬಾದ್ ನಗರ ಮೊದಲು ಭದ್ರಾವತಿ ಎಂದು ಕರೆಸಿಕೊಳ್ಳುವ ರಾಜ್ಯವಾಗಿತ್ತಂತೆ . ಇಲ್ಲಿ ಭದ್ರಸೇನಾ ಅನೋ ರಾಜ ಆಳುತ್ತಿದ್ದ . ಅವನು ರಾಮ ನ ಪರಮ ಭಕ್ತನಾಗಿದ್ದ, ಜೊತೆಗೆ ಆತ ಪ್ರತಿ ದಿನ ರಾಮನ ಕುರಿತು ಹಾಡುಗಳನ್ನು ಹಾಡುತ್ತಿದ್ದ.

ಒಂದು ದಿನ ಅದೇ ದಾರಿಯಲ್ಲಿ ತೆರಳುತ್ತಿದ್ದ ಹನುಮಂತ ಆತನ ಹಾಡಿಗೆ ಮನಸೋತು ನಿದ್ರಾಭಂಗಿಯಲ್ಲಿ ಭಾವ ಸಮಾಧಿಗೆ ಇಳಿದನಂತೆ . ಆಗ ಭದ್ರಸೇನನು ಆಂಜನೇಯ ಸ್ವಾಮಿಯ ಬಳಿ ಇಲ್ಲಿ ನೆಲೆಸಿ ಭಕ್ತರು ಹಾಗೂ ರಾಜ್ಯವನ್ನು ಕಾಯವಂತೆ ಕೇಳಿಕೊಂಡನಂತೆ . ಅಂದಿನಿಂದ ಈ ಶೀಲಾರೂಪದಲ್ಲಿ ಹನುಮಂತ ಇಲ್ಲೇ ನೆಲೆಸಿದ ಅನ್ನೋ ನಂಬಿಕೆ ಭಕ್ತರದು.

ಇನ್ನು ಈ ದೇವಾಲಯವು ಹಳೆಯ ದೇವಾಲಯ ವಾಗಿದ್ದರೂ , ಇದಕ್ಕೆ ಜೀರ್ಣೋಧಾರ ಮಾಡಿ ಹೊಸ ರೂಪ ನೀಡಲಾಗಿದೆ. ಇಲ್ಲಿಯ ಛಾವಣಿಗೆ ಬಣ್ಣದ ಹರಳುಗಳನ್ನು ಅಳವಡಿಸಲಾಗಿದ್ದು, ಛಾವಣಿಯ ತುಂಬೆಲ್ಲಾ ಹನುಮಾನ್ ಚಾಲೀಸ ದ ಬರಹಗಳನ್ನು ಕೆತ್ತಲಾಗಿದೆ. ಇದು ಭಕ್ತರನು ಮಂತ್ರಮಗ್ದ ಗೊಳಿಸುತ್ತದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಇಲ್ಲಿ ಹನುಮಜಯಂತಿ, ರಾಮ ನವಮಿ ಹಾಗೂ ಶನಿವಾರದಂದು ಹೆಚ್ಚಾಗಿ ಜನರು ಬರುತ್ತಾರೆ.

ಇನ್ನು ಈ ದೇವಾಲಯವು ಗೃಷ್ಣೇಶ್ವರ ಜೋತಿರ್ಲಿಂಗದ ಬಳಿ ಇರೋದ್ರಿಂದ ಅಲ್ಲಿಗೆ ಬರೋ ಭಕ್ತರು ತಪ್ಪದೇ ಇಲ್ಲಿಗೂ ಬಂದು ಹೋಗುತ್ತಾರೆ .ಇಲ್ಲಿಂದ ಗೃಷ್ಣೇಶ್ವರ ಜೋತಿರ್ಲಿಂಗ ಸುಮಾರು 4 ಕಿಲೋ ಮೀಟರದ ದೂರದಲ್ಲಿದೆ. ಇನ್ನು ಇದರ ಪಕ್ಕವೇ ಎಲ್ಲೋರ ಗುಹೆಗಳು ಕೂಡಾ ಇದ್ದು ಅದು ಕೂಡಾ 4 ಕಿಮೀ ನಷ್ಟು ದೂರದಲ್ಲಿದೆ. ನೀವು ಇಲ್ಲಿಗೆ ಬಂದ್ರೆ 4 ಸ್ಥಳಗಳನ್ನು ಒಟ್ಟಿಗೆ ಸಂದರ್ಶಿಸಬಹುದು.

ಇದನ್ನೂ ಓದಿ : ಶಿವರಾತ್ರಿಯ ರಾತ್ರಿ ಜಾಗರಣೆಯಿಂದ ಮೋಕ್ಷ ಪ್ರಾಪ್ತಿ

ಇದನ್ನೂ ಓದಿ : Halu Rameshwara Temple : ಪುರಾಣ ಪ್ರಸಿದ್ಧ ತಾಣ ಹಾಲು ರಾಮೇಶ್ವರ

Sleeping Hanuman Temple At Khuldabad Maharashtra

Comments are closed.