ಕಲಿಯುಗದ ಶ್ರವಣ ಕುಮಾರ : ಪೋಷಕರನ್ನು 7 ದಿನಗಳ ಕಾಲ ಹೊತ್ತು ಬಾಂಗ್ಲಾದೇಶಕ್ಕೆ ಸಾಗಿದ ಪುತ್ರ

ನವದೆಹಲಿ : ಶ್ರವಣ ಕುಮಾರನ ಕತೆ ಎಲ್ಲರಿಗೂ ತಿಳಿದಿದೆ. ತನ್ನ ವಯಸ್ಸಾದ ಕುರುಡು ತಂದೆ ತಾಯಿಯರನ್ನು ಭುಜದ ಮೇಲೆ ಹೊತ್ತು ಸಾಗಿದ್ದ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳೇ ತಂದೆ ತಾಯಿಯನ್ನು ವೃಧಾಶ್ರಮಕ್ಕೆ ಹೋಗಿ ಬಿಟ್ಟು ಬರುತ್ತಾರೆ ಆದರೆ ಪೋಷಕರನ್ನು ಹೊತ್ತು ತಿರುಗುವ ಮಕ್ಖಳು ಅತೀ ಕಡಿಮೆ. ಆದರೆ ಕಲಿಯುಗದಲ್ಲೂ ಶ್ರವಣ ಕುಮಾರಂತ ಮಕ್ಕಳು ಇರುವುದು ವಿಶೇಷ ಆದ್ರೂ ನಿಜ.

ಇದೀಗ ಅಂತಹುದೇ ಒಂದು ಘಟನೆ ನಿಜವಾಗಿಯೂ ನಡೆದಿದೆ. ಮ್ಯಾನ್ಮಾರ್ ನ ಒಬ್ಬ ವ್ಯಕ್ತಿಯು ತನ್ನ ವಯಸ್ಸಾದ ಹೆತ್ತವರನ್ನು ಏಳು ದಿನಗಳ ಕಾಲ ತನ್ನ ಭುಜದ ಮೇಲೆ ಡಬಲ್ ಬಾಸ್ಕೆಟ್ ನಲ್ಲಿ ಹೊತ್ತು ಬಾಂಗ್ಲಾದೇಶಕ್ಕೆ ತಲುಪಿದ ಘಟನೆ ನಡೆದಿದೆ.

ಇದನ್ನೂ ಓದಿ: ಇಲ್ಲಿ ಪುರುಷರು ಮಾತಾಡೋ ಭಾಷೆಯನ್ನು ಮಹಿಳೆಯರು ಮಾತಾಡಲ್ಲ ! ಇಬ್ಬರಿಗೂ ಇದೆ ಪ್ರತ್ಯೇಕ ಭಾಷೆ, ಅಷ್ಟಕ್ಕೂ ಇದು ಎಲ್ಲಿ ಗೊತ್ತಾ ?

ಆರ್ ಪಿಜಿ ಗ್ರೂಪ್ ಸಮೂಹದ ಪ್ರಸ್ತುತ ಅಧ್ಯಕ್ಷ ಹರ್ಷವರ್ಧನ್ ಗೋಯೆಂಕಾ ಹಂಚಿಕೊಂಡಿರುವ ಫೋಟೋ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಭಾರಿ ವೈರಲ್ ಆಗಿದೆ. ಈ ಫೋಟೋದಲ್ಲಿ, ಆಧುನಿಕ ದಿನದ ಶ್ರವಣ ಕುಮಾರ್ 7 ದಿನಗಳ ಕಾಲ ವೃದ್ಧ ತಾಯಿ ಮತ್ತು ತಂದೆಯನ್ನು ಬುಟ್ಟಿಯಲ್ಲಿ ಕರೆದೊಯ್ಯುತ್ತಿದ್ದಾರೆ, ಏಕೆಂದರೆ ಅವರ ಪೋಷಕರು ಚಲಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರನ್ನು ಹೊತ್ತು ಬಾಂಗ್ಲಾದೇಶಕ್ಕೆ ತೆರಳಿದ ಘಟನೆ ನಡೆದಿದೆ.

ಇದನ್ನೂ ಓದಿ: ಗೌರಿಕುಂಡದಲ್ಲಿರುವ ಬಿಸಿನೀರಿಗೂ, ಗೌರಿ ಹಬ್ಬಕ್ಕೂ ಇರುವ ನಂಟು ನಿಮಗೆ ಗೊತ್ತಾ ?

(Son who traveled to Bangladesh by carrying his parents for 7 days)

Comments are closed.