58 ನಿಮಿಷದಲ್ಲಿ ಸಿದ್ಧವಾಯ್ತು ಬರೋಬ್ಬರಿ 46 ಭಕ್ಷ್ಯ…! ದಾಖಲೆಯಾಯ್ತು 10ರ ಬಾಲಕಿಯ ಸಾಧನೆ…!!

ತಮಿಳುನಾಡು: ಕೊರೋನಾ ಲಾಕ್ ಡೌನ್ ಅನ್ನೋದು ಜನರಿಗೆ ಎಷ್ಟೊಂದು ಸಮಸ್ಯೆ ತಂದಿತ್ತು. ಆದರೆ ಈ ಲಾಕ್ ಡೌನ್ ಹಲವರಿಗೆ ವರವಾಗಿದೆ. ತಮಿಳುನಾಡಿನ ಬಾಲಕಿಯೊರ್ವಳು ಈ ಲಾಕ್ ಡೌನ್ ನಲ್ಲೇ ಅಡುಗೆ ಕಲಿತು ಯುನಿಕೋ ದಾಖಲೆ ಬರೆದಿದ್ದಾಳೆ.

ತಮಿಳುನಾಡಿನ ೧೦ ವರ್ಷದ ಬಾಲಕಿ ಎಸ್.ಎನ್.ಲಕ್ಷ್ಮೀಸಾಯಿಶ್ರೀ ಲಾಕ್ ಡೌನ್ ವೇಳೆ ಮನೆಯಲ್ಲೇ ಇದ್ದು ಬೇಸರ ಕಳೆಯಲು ತಾಯಿಯೊಂದಿಗೆ ಅಡುಗೆ ಮಾಡುವುದನ್ನು ಕಲಿತಿದ್ದಳು. ಇದೀಗ ಅದೇ ವಿದ್ಯೆ ಬಳಸಿಕೊಂಡು ೫೮ ನಿಮಿಷದಲ್ಲಿ ಬರೋಬ್ಬರಿ ೪೬ ವೈರೈಟಿ ಆಹಾರ ತಯಾರಿಸಿ ಸಾಧನೆ ಮಾಡಿದ್ದಾಳೆ.

ಈ‌ ಮೊದಲು ಕೇರಳದ ಬಾಲಕಿಯೊಬ್ಬಳು ೫೮ ನಿಮಿಷದಲ್ಲಿ 46 ವೈರೈಟಿ ಆಹಾರ ಪದಾರ್ಥ ತಯಾರಿಸಿ ಯುನಿಕೋ ಬುಕ್ ಅಫ್ ವರ್ಲ್ಡ್ ರೆಕಾರ್ಡ್ ದಾಖಲೆ ಬರೆದಿದ್ದಳು.

ಈ ದಾಖಲೆಯನ್ನು ಎಸ್.ಎನ್.ಲಕ್ಷ್ಮೀಸಾಯಿಶ್ರೀ ಮುರಿದಿದ್ದು, 58 ನಿಮಿಷದಲ್ಲಿ ನಾಲಿಗೆ ನೀರೂರಿಸುವ 46 ಬಗೆಯ ಖಾದ್ಯ ತಯಾರಿಸಿದ್ದಾಳೆ.

ಲಕ್ಷ್ಮೀಗೆ ತಾಯಿ ಲಾಕ್ ಡೌನ್ ವೇಳೆಯಲ್ಲಿ ಅಡುಗೆ ಹೇಳಿಕೊಟ್ಟಿದ್ದನ್ನು ಹಾಗೂ ಮಗಳು ಅದನ್ನು ಶೃದ್ಧೆಯಿಂದ ಮಾಡೋದನ್ನು‌ ಗಮನಿಸಿದ ತಂದೆ ಸ್ಪರ್ಧೆಯಲ್ಲಿ ಭಾಗವಹಿಸುವ ಸಲಹೆ ನೀಡಿದ್ದರಂತೆ.

ಇನ್ನು ಈ ಅಪರೂಪದ ಸಾಧನೆ ಬಳಿಕ‌ ಮಾತನಾಡಿದ ಲಕ್ಷ್ಮೀಸಾಯಿಶ್ರೀ ನಾನು ಅಡುಗೆ ಕಲಿತಿದ್ದು ನನ್ನ ಅಮ್ಮನಿಂದ. ನನಗೆ ಅಡುಗೆ ಬಗ್ಗೆ ಆಸಕ್ತಿ ಹುಟ್ಟಲು ಅಮ್ಮನೇ ಕಾರಣ. ಇಂತಹದೊಂದು ಸಾಧನೆ ನನ್ನ ಹೆಸರಿಗೆ ದಾಖಲಾಗಿದ್ದು ನನಗೆ ಖುಷಿ ತಂದಿದೆ ಎಂದಿದ್ದಾಳೆ.

Comments are closed.