ಮಹಿಳೆಯರೇ‌ ನಿಮ್ಮ‌ ಬಳಿ ಮೊಬೈಲ್ ಇದ್ಯಾ….?! ಹಾಗಿದ್ದರೇ ಇರಲಿ ಎಚ್ಚರ…!!

ಬೆಂಗಳೂರು: ಒಂದಲ್ಲ ಒಂದು ರೀತಿಯಲ್ಲಿ ಹೆಣ್ಣುಮಕ್ಕಳಿಗೆ ತೊಂದರೆ ಕೊಡೋದಿಕ್ಕೆ ದುರುಳರು ಸಿದ್ಧವಾಗೇ ಇರ್ತಾರೆ ಅನ್ನೋದಿಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಮಹಿಳೆಯರ ಮೊಬೈಲ್‌ನಂಬರ್ ಮಾರಾಟ ಜಾಲ ಬೆಳಕಿಗೆ ಬಂದಿದ್ದು ಯುವತಿಯರೇ ಹುಶಾರ್ ಎನ್ನುವ ಸ್ಥಿತಿ ಎದುರಾಗಿದೆ‌.

ಶಾಪಿಂಗ್ ಮಾಲ್, ಮೊಬೈಲ್ ರಿಚಾರ್ಜ್ ಅಂಗಡಿ ಸೇರಿದಂತೆ ಹಲವೆಡೆಗಳಲ್ಲಿ ನಿಮ್ಮ‌ಮೊಬೈಲ್ ನಂಬರ್ ಎಂಟ್ರಿ‌ ಮಾಡಿಸೋದು ಅನಿವಾರ್ಯ. ಆದರೇ ಹೀಗೆ ನೀವು ಕೊಡೋ ನಿಮ್ಮ ಮೊಬೈಲ್ ನಂಬರ್ ಸುರಕ್ಷಿತವಲ್ಲ ಅನ್ನೋ ಆತಂಕಕಾರಿ ಸಂಗತಿ ಈಗ ಬಯಲಾಗಿದೆ.

ನೀವು ತುರ್ತು ಅಗತ್ಯ ಸಂದರ್ಭದಲ್ಲಿ ಅಂಗಡಿ,ಹಾಸ್ಪಿಟಲ್, ರಿಚಾರ್ಜ್ ಶಾಪ್,ಶಾಪಿಂಗ್ ಮಾಲ್ ಗಳಲ್ಲಿ ಕೊಡುವ ನಿಮ್ಮ ಮೊಬೈಲ್ ನಂಬರ್ ಗಳು ನಿಮ್ಮ ಸೌಂದರ್ಯದ ಮೇಲೆ ಆಧರಿಸಿ ೫೦ ರೂಪಾಯಿಯಿಂದ ಗರಿಷ್ಠ ೫೦೦ ರೂಪಾಯಿ ವರೆಗಿನ ದರದಲ್ಲಿ ಮಾರಾಟವಾಗುತ್ತದೆ.

ವಿಶೇಷವಾಗಿ ಬೆಂಗಳೂರಿನ ಉತ್ತರ,ಪಶ್ಚಿಮ ಹಾಗೂ ರಾಜ್ಯದ ಕೆಲವೆಡೆಗಳಲ್ಲಿ ಇಂಥ ಪ್ರಕರಣಗಳು ಹೆಚ್ಚು ವರದಿಯಾಗಿದ್ದು, ಹೀಗೆ ನಂಬರ್ ಪಡೆದ ಕಿಡಿಗೇಡಿಗಳು ಬಳಿಕ ಆ ಹೆಣ್ಣುಮಕ್ಕಳಿಗೆ ಕಾಲ್, ಮೆಸೆಜ್ ಮಾಡಿ ಕಿರುಕುಳ ನೀಡುತ್ತಾರೆ.

ಅಷ್ಟೇ ಅಲ್ಲ ಅಶ್ಲೀಲ‌ಮೆಸೆಜ್ ಹಾಗೂ ದೃಶ್ಯಗಳನ್ನು ಕಳಿಸಿ ಲೈಂಗಿಕವಾಗಿ ಬಳಸಿಕೊಳ್ಳಲು ಆಹ್ವಾನಿಸುವಂತಹ ವಿಕೃತಿ ಮರೆಯುತ್ತಾರೆ. ಪ್ರತಿನಿತ್ಯ ನೂರಾರು ಮಹಿಳೆಯರು ಈ ರೀತಿ ಸಮಸ್ಯೆಗೆ ಒಳಗಾಗುತ್ತಿದ್ದು ಯಾರ ಬಳಿಯೂ ಹೇಳಿಕೊಳ್ಳಲಾಗದೆ ಕಂಗಾಲಾಗುತ್ತಿದ್ದಾರೆ.

ಇನ್ನು ಕೆಲ‌ಮಹಿಳೆಯರು‌ಧೈರ್ಯವಾಗಿ ಮಹಿಳಾ ಸಹಾಯವಾಣಿ ಹಾಗೂ ಸ್ಥಳೀಯ ಪೊಲೀಸ್ ಠಾಣೆಯ ಮೊರೆ ಹೋಗುತ್ತಿದ್ದಾರೆ. ಹೆಚ್ಚಾಗಿ ಬೇರೆ ರಾಜ್ಯದ ಯುವಕರು ಈ ರೀತಿಯ ಕೃತ್ಯದಲ್ಲಿ ಭಾಗಿಯಾಗುತ್ತಿದ್ದು, ಇವರ ಕಾಟ ತಾಳಲಾರದೇ‌ ಮಹಿಳೆಯರು ದೂರವಾಣಿ ಸಂಖ್ಯೆಯನ್ನೇ‌ ಬದಲಾಯಿಸಿದ ಸಂದರ್ಭವೂ ಇದೆ.

ಸೈಬರ್ ಕ್ರೈಂನಲ್ಲಿ ಈ ಬಗ್ಗೆ ಸಾಕಷ್ಟು ದೂರುಗಳು‌ ದಾಖಲಾಗಿವೆ. ಕಾನೂನಿನಲ್ಲಿ ಈ ಅಪರಾಧಕ್ಕೆ‌ ಶಿಕ್ಷೆಗೂ ಅವಕಾಶವಿದ್ದು ಸಾಬೀತಾದರೇ ೭ ವರ್ಷಗಳ ತನಕ ಶಿಕ್ಷೆಗೆ ಅವಕಾಶವಿದೆ.

ಇನ್ನು ಈ ಮೊಬೈಲ್ ನಂಬರ್ ಮಾರಾಟದ ಜಾಲ ಎಲ್ಲೆಡೆ ಆಕ್ಟಿವ್ ಆಗಿದ್ದು ಮಹಿಳೆಯರು ಈ ಕೆಳಗಿನಂತೆ ಎಚ್ಚರ ವಹಿಸುವ ಮೂಲಕ ಸಮಸ್ಯೆಯಿಂದ ಪಾರಾಗಬಹುದು.

೧. ಸಾರ್ವಜನಿಕ ಸ್ಥಳದಲ್ಲಿ ನಂಬರ್ ಹೇಳುವಾಗ, ಮೊಬೈಲ್ ರಿಚಾರ್ಜ್ ಮಾಡಿಸುವಾಗ ಎಚ್ಚರವಹಿಸಬೇಕು.
೨. ಅಪರಿಚಿತ ನಂಬರ್ ಗಳ ಕಾಲ್,ಮೆಸೆಜ್ ಗಳನ್ನು ನಿರ್ಲಕ್ಷ್ಯ ಮಾಡಬೇಕು.
೩. ಪೇಸ್ ಬುಕ್ ಗಳಲ್ಲಿ ಮೊಬೈಲ್ ನಂಬರ್ ಪ್ರಕಟಿಸಬಾರದು. ಹಾಗೂ ಹೈಡ್ ಆಪ್ಸನ್ ಬಳಸಬೇಕು
೪. ಅಪರಿಚಿತ ನಂಬರ್ ನಿಂದ ಕರೆ ಮತ್ತು ಮೆಸೆಜ್ ಬಂದ್ರೇ ಮನೆಯ ಹಿರಿಯರಿಗೆ ಮಾಹಿತಿ ನೀಡಬೇಕು.
೫. ಯಾರಾದ್ರೂ ಪೋನ್ ಮಾಡಿ ತೊಂದರೆ ನೀಡಿದರೇ ಪೊಲೀಸರಿಗೆ ದೂರು ನೀಡಬೇಕು

Comments are closed.