Mujungavu temple : ಈ ಕಲ್ಯಾಣಿಯಲ್ಲಿ ಸ್ನಾನ ಮಾಡಿದ್ರೆ ಚರ್ಮ ರೋಗಕ್ಕೆ ಮುಕ್ತಿ !

0
  • ವಂದನಾ ಕೊಮ್ಮುಂಜೆ

ಚರ್ಮ ರೋಗ, ಮುಚ್ಚಿಟ್ಟು ಕೊಳ್ಳಲಾಗದ ರೋಗ. ಇದರಿಂದ ಸಾಕಷ್ಟು ಜನರಂತೂ ಖಿನ್ನತೆಗೆ ಒಳಗಾಗುತ್ತಾರೆ. ಆದ್ರೆ ಈ ದೇವಾಲಯದಲ್ಲಿರುವ ಕಲ್ಯಾಣಿಯಲ್ಲಿ ಮಿಂದೆದ್ದರೆ ಸಾಕು ಎಂತಹದ್ದೇ ಚರ್ಮ ರೋಗವಿರಲಿ ಗುಣವಾಗುತ್ತೆ. ನಾನಾ ಕಡೆಗಳಲ್ಲಿ ಔಷಧಿ ಮಾಡಿ ಪ್ರಯೋಜನವಾಗದ ಅದೆಷ್ಟೊ ಮಂದಿ ಇಲ್ಲಿನ ದೇವರಲ್ಲಿ ಪ್ರಾರ್ಥಿಸಿ ಕಲ್ಯಾಣಿಯಲ್ಲಿ ( mujungavu temple ) ಮಿಂದೆದ್ದು ಚರ್ಮ ವ್ಯಾದಿಯಿಂದ ಮುಕ್ತಿ (skin problems solve kalyani) ಪಡೆದುಕೊಂಡಿದ್ದಾರೆ.

ಈ ದೇವಸ್ಥಾನಕ್ಕೆ ಬರುವ ಭಕ್ತರಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಜನರು ಚರ್ಮ ರೋಗದ ಪರಿಹಾರಕ್ಕಾಗಿಯೇ ಬರುತ್ತಾರೆ. ದೇವರ ಮುಂದೆ ನಿಂತು ಹರಿಕೆ ಹೇಳುವ ಭಕ್ತರು ತಮ್ಮ ಚರ್ಮರೋಗ ಗುಣವಾದ ನಂತರದಲ್ಲಿ ಹರಿಕೆಯನ್ನು ತೀರಿಸುತ್ತಿದ್ದಾರೆ. ಕಾವೇರಿ ಸಂಕ್ರಮಣದ ದಿನವಂತು ದೇವಸ್ಥಾನದಲ್ಲಿ ಜನ ಜಾತ್ರೆ ತುಂಬಿರುತ್ತೆ. ಈ ದಿನ ಮುಂಜಾವಿನಲ್ಲಿಯೇ ಇಲ್ಲಿಗೆ ಆಗಮಿಸುವ ಜನರು, ಇಲ್ಲಿನ ಕಲ್ಯಾಣಯಲ್ಲಿ ಸ್ನಾನಮಾಡಿ ತಮ್ಮ ರೋಗಗಳನ್ನು ಕಳೀತಾರೆ.

ದೇವಸ್ಥಾನಕ್ಕೆ ಬರುವ ಭಕ್ತರಿಗೆ ಚರ್ಮರೋಗ ಕಡಿಮೆಯಾಗೋಕೆ ಇಲ್ಲಿನ ಕಲ್ಯಾಣಿಯೇ ಕಾರಣ ಅನ್ನೋದು ಇಲ್ಲಿನ ಭಕ್ತರ ನಂಬಿಕೆ. ದೇವರ ಮುಂದೆ ನಿಂತು ಹರಕೆ ಕಟ್ಟಿಕೊಳ್ಳುವ ಭಕ್ತರು ಇಲ್ಲಿನ ಕಲ್ಯಾಣಿ ಸ್ನಾನ ಮಾಡಲೇ ಬೇಕು. ಇನ್ನು ಕಲ್ಯಾಣಿಯಲ್ಲಿ ಪುಟ್ಟ ಪುಟ್ಟ ಮೀನುಗಳಿದ್ದು, ಹರಿಕೆ ಹೇಳಿಕೊಳ್ಳುವ ಭಕ್ತರು ಮೀನುಗಳಿಗೆ ದೇವಸ್ಥಾನದಿಂದ ನೀಡಲಾಗುವ ಅಕ್ಕಿ ಹಾಗೂ ಹುರುಳಿಯನ್ನು ನೀಡುತ್ತಾರೆ. ನಂತರ ಪ್ರದಕ್ಷಿಣೆ ಬರುವ ಭಕ್ತರು ಕಲ್ಯಾಣಿಯಲ್ಲಿ ಮಿಂದೆದ್ದು ತಮ್ಮ ಹರಿಕೆಯನ್ನು ತೀರಿಸಿಕೊಳ್ಳುತ್ತಾರೆ.

ಕಲ್ಯಾಣಿಯಲ್ಲಿರುವ ನೀರು ಅಷ್ಟೊಂದು ಔಷಧೀಯ ಗುಣವನ್ನು ಹೊಂದಿರುವುದರ ಹಿಂದೆ ಪೌರಾಣಿಕ ನಂಬಿಕೆಯೂ ಇದೆ. ತಲಕಾವೇರಿಯಿಂದಲೇ ಈ ಕಲ್ಯಾಣಿಗೆ ನೀರು ಬರುತ್ತೆ ಅನ್ನೋದು ಭಕ್ತರ ನಂಬಿಕದೆ ಇನ್ನು ವರ್ಷಕ್ಕೆ ಒಂದು ಬಾರಿ ಕಾವೇರಿ ಸಂಕ್ರಮಣದಂದು ಇಲ್ಲಿಗೆ ಕಾವೇರಿ ಗುಪ್ತಗಾಮಿನಿಯಾಗಿ ಹರಿದು ಬರುತ್ತಾಳೆ ಎನ್ನೋದು ಪ್ರತೀತಿ. ಅದೇ ನೀರಲ್ಲಿ ಮುಂಜಾನೆ 4 ಗಂಟೆಗೆ ದೇವರಿಗೆ ಅಭಿಷೇಕ ಮಾಡಲಾಗುತ್ತದೆ . ಹೀಗಾಗಿ ಕಾವೇರಿ ಸಂಕ್ರಮಣದಂದು ಇಲ್ಲಿ ವಿಶೇಷ ಉತ್ಸವ ನಡೆಲಾಗುತ್ತೆ.

ಹೀಗೆ ಹರಕೆ ಕಟ್ಟಿಕೊಂಡ ಭಕ್ತರು ರೋಗ ಗುಣವಾದ ನಂತರ ಹರಕೆ ತೀರಿಸಬೇಕು. ಇಲ್ಲಿ ಹರಕೆಯಾಗಿ ಯಾವುದನ್ನು ನೀಡಿತ್ತಾರೆ ಅಂತ ಹೇಳಿದ್ರೆ ನಿಮಗೆ ಆಶ್ಚರ್ಯವಾಗುತ್ತೆ. ಇಲ್ಲಿ ಭಕ್ತರು ಹರಕೆಯ ರೂಪದಲ್ಲಿ ನೀಡಬೇಕಾಗಿರೋದು ಸೌತೆಕಾಯಿ( ಮುಳ್ಳು ಸೌತೆ) ಯನ್ನು. ಇದರ ಜೊತೆಯಲ್ಲಿ ಹಣ್ಣು ಕಾಯಿಯನ್ನು ಸಮರ್ಪಿಸಲಾಗುತ್ತೆ.

ಈ ಹರಕೆಯ ಬಗ್ಗೆಯೂ ಇಲ್ಲಿನ ಸ್ಥಳ ಪುರಾಣ ಒಂದು ಕಥೆಯನ್ನು ಹೇಳುತ್ತೆ ದ್ವಾಪರ ಯುಗದಲ್ಲಿ ಮುಜುಂಗು ಮುನಿ ಇಲ್ಲಿ ಕೃಷ್ಣನ ಕುರಿತಾಗಿ ತಪ್ಪಸನ್ನು ಆಚರಿಸಿದ್ರು.

ಆಗ ಪ್ರತ್ಯಕ್ಷರಾದ ದೇವರಿ ಗೆ ಹತ್ತಿರದ ಬಳ್ಳಿಯಲ್ಲಿದ್ದ ಸೌತೆಕಾಯಿಯನ್ನು ನೈವೇದ್ಯವಾಗಿ ಅರ್ಪಿಸಿದ್ರು. ಹೀಗಾಗಿ ಇಲ್ಲಿ ಇಂದಿಗೂ ದೇವರಿಗೆ ಸೌತೆಕಾಯಿಯನ್ನು ಅರ್ಪಿಸಲಾಗುತ್ತೆ. ಇನ್ನು ಕೃಷ್ಣನಿಗೆ ಪ್ರಿಯವಾದ ಅವಲಕ್ಕಿ ಪ್ರಸಾದ ಇಲ್ಲಿಯ ವಿಶೇಷ.

ದೇವಾಲಯದಲ್ಲಿ ಪಾರ್ಥಸಾರಥಿ ಹೆಸರಿನಿಂದ ಕೃಷ್ಣ ನನ್ನು ಆರಾಧಿಸಲಾಗುತ್ತೆ . ಇಷ್ಟಕ್ಕೂ ಈ ದೇವಾಲಯ ಇರೋದು ಕೇರಳದ ಕಾಸರಗೋಡು ಜಿಲ್ಲೆಯ ಕುಂಬ್ಳೆ ಬಳಿಯ ಮುಜಗಾವಿನಲ್ಲಿ. ಮುಜಂಗು ಮುನಿ ತಪ್ಪಸ್ಸು ಮಾಡಿದ್ರಿಂದ ಇಲ್ಲಿಗೆ ಮುಜಂಗಾವು ಅಂತ ಹೆಸರು ಬಂದಿದೆ ಎನ್ನುವುದು ನಂಬಿಕೆ.

ಕುಂಬ್ಳೆ ಸಿಟಿಯಿಂದ ಕೇವಲ 3 ಕಿಲೋ ಮೀಟರ್ ದೂರದಲ್ಲಿದೆ ಈ ಅಪರೂಪದ ದೇವಾಲಯ. ದೇವಸ್ಥಾನಕ್ಕೆ ಬಸ್ಸಿನಲ್ಲಿ ತೆರಳಲು ಕೂಡ ವ್ಯವಸ್ಥೆಯಿದೆ. ಚರ್ಮರೋಗದಿಂದ ಮುಕ್ತಿ ಸಿಗದವರು ಒಮ್ಮೆ ಕೃಷ್ಣನ ಮೊರೆ ಹೋಗಿ ಕಲ್ಯಾಣಿಯಲ್ಲಿ ಮಿಂದೇಳಿ.

ಇದನ್ನೂ ಓದಿ : ಮಣ್ಣಿಗೆ ಒಲಿತಾನೆ ಶಿವ : ಮಣ್ಣಿನ ಗೊಂಬೆಯ ಹರಕೆಯಿಂದ ಈಡೇರುತ್ತೆ ಅಭೀಷ್ಟ

ಇದನ್ನೂ ಓದಿ : ಕಂಬದ ನೆರಳು ಸದಾ ಶಿವಲಿಂಗದ ಮೇಲೆ : ಅಪರೂಪದ ಛಾಯಾ ಸೋಮೇಶ್ವರ ದೇವಾಲಯದ ವಿಶೇಷತೆ ನಿಮಗೆ ಗೊತ್ತಾ..?

(skin problems solve mujungavu temple kalyani kumble)

Leave A Reply

Your email address will not be published.