Tulsi Vivah 2022 :ತುಳಸಿ ಮದುವೆ ಯಾವಾಗ? ತಿಥಿ, ಶುಭ ಮುಹೂರ್ತ ಮತ್ತು ಮಹತ್ವ

ಹಿಂದೂ ಪಂಚಾಂಗದ ಪ್ರಕಾರ ಕಾರ್ತಿಕ ಮಾಸದ, ಶುಕ್ಲ ಪಕ್ಷದ, ದ್ವಾದಶಿ ತಿಥಿಯಂದು ತುಳಸಿ ಮದುವೆ (Tulsi Vivah 2022) ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಇದರ ನಂತರವೇ ಮದುವೆಯ ಶುಭ ಮುಹೂರ್ತಗಳು ಸಿಗುತ್ತವೆ. ಏಕೆಂದರೆ ಕಾರ್ತಿಕ ಏಕಾದಶಿಯಂದು ಚಾತುರ್ಮಾಸ ವೃತವು ಸಂಪೂರ್ಣವಾಗುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ವೃತವನ್ನು ಮಾಡುತ್ತಾರೆ. ತುಳಸಿ ಕಟ್ಟೆಯನ್ನು ಶ್ರದ್ಧಾ ಭಕ್ತಿಯಿಂದ ಅಲಂಕರಿಸುತ್ತಾರೆ.

ತುಳಸಿ ಮದುವೆಯ ಮಹತ್ವ:
ಹಿಂದೂ ನಂಬಿಕೆಯ ಅನುಸಾರ ತುಳಸಿ ಮದುವೆ ಮಾಡುವುದು ಕನ್ಯಾದಾನಕ್ಕೆ ಸಮನಾದ ಪುಣ್ಯವನ್ನು ನೀಡುತ್ತದೆ. ಆದ್ದರಿಂದ ಕನ್ಯಾದಾನ ಪುಣ್ಯ ಪಡೆದುಕೊಳ್ಳಲು ತುಳಸಿ ಮದುವೆಯನ್ನು ಜೀವನದಲ್ಲಿ ಒಮ್ಮೆಯಾದರೂ ಮಾಡಬೇಕು ಎಂದು ಹೇಳುತ್ತಾರೆ. ತುಳಸಿ ಮದುವೆ ಆಚರಣೆಯಿಂದ ವೈವಾಹಿಕ ಜೀವನದಲ್ಲಿ ಸುಖ–ಸೌಭಾಗ್ಯಗಳು ಸಿಗುತ್ತವೆ. ಎಲ್ಲಾ ಕಷ್ಟಗಳು ದೂರವಾಗುತ್ತದೆ ಮತ್ತು ಭಗವಾನ್‌ ವಿಷ್ಣುವಿನ ಕೃಪೆಗೆ ಪಾತ್ರರಾಗುವುದರಿಂದ ಎಲ್ಲಾ ಮನೋಭಿಲಾಷೆಗಳು ಪೂರ್ಣವಾಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ : Chandra Grahan 2022 : ಚಂದ್ರ ಗ್ರಹಣ 2022: ಯಾವ ರಾಶಿಯವರ ಮೇಲೆ ಪ್ರಭಾವ ಹೆಚ್ಚು…

ತುಳಸಿ ಮದುವೆಯ ಶುಭ ಮುಹೂರ್ತ :
ಪಂಚಾಂಗದ ಪ್ರಕಾರ ಈ ವರ್ಷ ನವೆಂಬರ್‌ 5 ಶನಿವಾರದಂದು ಕಾರ್ತಿಕ ಮಾಸದ, ಶುಕ್ಲ ಪಕ್ಷದ ದ್ವಾದಶಿ ತಿಥಿ ಇದೆ. ಈ ತಿಥಿಯ ಪ್ರಕಾರ ನವೆಂಬರ್‌ 5ರಂದು ತುಳಸಿ ಮದುವೆ ಆಚರಣೆಯಿರುತ್ತದೆ. ತುಳಸಿ ಮದುವೆಯನ್ನು ಸಂಜೆಯ ಸಮಯಕ್ಕೆ ಮಾಡಲಾಗುತ್ತದೆ. ನವೆಂಬರ್‌ 5 ರ ಸಂಜೆ 5:35 ರಿಂದ ಸಂಜೆ 7:12 ರವರೆಗೆ ಶುಭ ಮುಹೂರ್ತವಿರುತ್ತದೆ. ಇದರ ನಂತರ 7:12 ರಿಂದ 8:50 ರವರೆಗೂ ಸಾಮಾನ್ಯ ಮುಹೂರ್ತವು ಮುಂದುವರಿಯಲಿದೆ.

ತುಳಸಿ ಮದುವೆಯ ಪೂಜಾ ವಿಧಿಗಳು :
ತುಳಸಿ ಮದುವೆಯನ್ನು ಸಂಜೆಯ ಸಮಯದಲ್ಲಿ ಆಚರಿಸಲಾಗುತ್ತದೆ. ತುಳಸಿ ಕಟ್ಟೆಯನ್ನು ಕಬ್ಬು, ಮಾವಿನ ಎಲೆ ಮತ್ತು ಹೂವುಗಳಿಂದ ಮಂಟಪನ್ನು ಮಾಡಲಾಗುತ್ತದೆ. ಸುಂದರವಾದ ರಂಗೋಲಿ, ಹಣತೆಗಳನ್ನು ಇಡಲಾಗುತ್ತದೆ. ತುಳಸಿ ದೇವಿ ಮತ್ತು ಶಾಲಿಗ್ರಾಮನ ಮದುವೆ ಮಾಡಲಾಗುತ್ತದೆ. ಇದರ ನಂತರ ಪ್ರಸಾದ ನೀಡಲಾಗುತ್ತದೆ.

ಇದನ್ನೂ ಓದಿ : Chandra Grahan 2022: ಈ ವರ್ಷದ ಕೊನೆಯ ಚಂದ್ರ ಗ್ರಹಣ ನವೆಂಬರ್‌ 8 ಕ್ಕೆ…

(Tulsi Vivah 2022 muhurat, date, puja, and importance)

Comments are closed.