High Cholesterol : ಈ 5 ಹಣ್ಣುಗಳನ್ನು ತಿನ್ನಿ; ಅಧಿಕ ಕೊಲೆಸ್ಟ್ರಾಲ್‌ ಕಡಿಮೆ ಮಾಡಿಕೊಳ್ಳಿ…

Reduce high cholesterol : ನಮ್ಮ ದೇಹದಲ್ಲಿ ಯಕೃತ್ತು (Liver) ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುತ್ತದೆ. ಉಳಿದವುಗಳು ನಾವು ತಿನ್ನುವ ಆಹಾರದಿಂದ ಬರುತ್ತದೆ. ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್‌ನ (High Cholesterol) ಪ್ರಮಾಣವು ಹೆಚ್ಚಾದಾಗ ಅದು ಅನೇಕ ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಇವುಗಳಲ್ಲಿ ಕೆಟ್ಟ ಮತ್ತು ಅಪಾಯಕಾರಿ ಕೊಲೆಸ್ಟ್ರಾಲ್‌ಗಳಿವೆ. ಇದನ್ನು ಲೋ–ಡೆನ್ಸಿಟಿ–ಲಿಪೊಪ್ರೋಟೀನ್‌ (LDL) ಎಂದು ಕರೆಯುತ್ತಾರೆ. ಎಲ್‌ಡಿಎಲ್‌ ಕೊಲೆಸ್ಟ್ರಾಲ್ ನಮ್ಮ ಅಪಧಮನಿ (Arteries)ಗಳಲ್ಲಿ ಸಂಗ್ರಹಗೊಳ್ಳುತ್ತದೆ. ಕೊಬ್ಬು ಮತ್ತು ಮೇಣದಂತಹ ಪದಾರ್ಥಗಳು ಅದರಲ್ಲಿ ಶೇಖರಣೆಗೊಳ್ಳುತ್ತವೆ.

ಆಲ್ಕೋಹಾಲ್ ಸೇವನೆ, ಅತಿಯಾದ ಕೊಬ್ಬಿನ ಆಹಾರಗಳು ಮತ್ತು ಜಡ ಜೀವನಶೈಲಿಯು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಲು ಬಹಳ ಮುಖ್ಯ ಕಾರಣವಾಗಿದೆ. ಇದು ಬೊಜ್ಜು ಮತ್ತು ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಕೆಲವು ಹಣ್ಣುಗಳು LDL (ಕೆಟ್ಟ) ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ನಮಗೆ ಸಹಾಯ ಮಾಡುತ್ತವೆ. ಈ ಹಣ್ಣುಗಳು ತಿನ್ನಲು ರುಚಿಕರವಾಗಿರುತ್ತವೆ. ಇವುಗಳನ್ನು ನಿತ್ಯದ ಆಹಾರಗಳಲ್ಲಿ ಸೇರಿಸಿಕೊಳ್ಳುವುದರಿಂದ ಕೊಲೆಸ್ಟ್ರಾಲ್‌ ಅನ್ನು ನಿಯಂತ್ರಣದಲ್ಲಿಡಬಹುದು. ತಿನ್ನುವ ಅತಿ ಬಯಕೆಯಿಂದ ಎಣ್ಣೆಯುಕ್ತ ತಿಂಡಿಗಳನ್ನು ತಿನ್ನುವ ಬದಲು ಈ ಹಣ್ಣುಗಳನ್ನು ತಿನ್ನುವುದರಿಂದ ಕಾಯಿಲೆಯಿಂದ ದೂರವಿರಬಹುದು.

ಅಧಿಕ ಕೊಲೆಸ್ಟ್ರಾಲ್‌ ಕಡಿಮೆ ಮಾಡುವ 5 ಹಣ್ಣುಗಳು :

  1. ಸೇಬು (ಆ್ಯಪಲ್‌):
    ಸೇಬಿನಲ್ಲಿ ಪೆಕ್ಟಿನ್ ಅಂಶವು ಅಧಿಕವಾಗಿರುತ್ತದೆ. ಇದು ಕೊಲೆಸ್ಟ್ರಾಲ್ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ಪೆಕ್ಟಿನ್ ಎಂಬುದು ಒಂದು ರೀತಿಯ ಫೈಬರ್. ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೇಬುವಿನಲ್ಲಿ ಪಾಲಿಫಿನಾಲ್‌ಗಳು ಸಹ ಇರುತ್ತದೆ. ಇವೂ ಸಹ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
  1. ಬೆರ್ರಿ ಹಣ್ಣುಗಳು:
    ನಿರ್ದಿಷ್ಟ ಋತುಗಳಲ್ಲಿ ದೊರೆಯುವ ಬೆರಿಗಳಲ್ಲಿ ಫೈಬರ್ ಅಂಶ ಹೆಚ್ಚಿರುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್‌ನಿಂದಾಗುವ ಆಕ್ಸಿಡೀಕರಣವನ್ನು ತಡೆಯುತ್ತದೆ. ಕೊಲೆಸ್ಟ್ರಾಲ್‌ನ ಆಕ್ಸಿಡೀಕರಣವು ಹೃದಯದ ರಕ್ತನಾಳದ ಕಾಯಿಲೆಗಳಿಗೆ ಕಾರಣವಾಗಬಹುದು.
  2. ಪಿಯರ್‌ (ಮರ ಸೇಬು) :
    ಪಿಯರ್‌ (ಮರ ಸೇಬು) ನಲ್ಲಿಯೂ ಸಹ ಸೇಬು ಹಣ್ಣುನಂತೆ ಕರಗುವ ಫೈಬರ್ ಅಂಶ ಹೆಚ್ಚಿರುತ್ತದೆ. ಇದು ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಹೃದಯವನ್ನು ಆರೋಗ್ಯವಾಗಿರಿಸುತ್ತದೆ.

ಇದನ್ನೂ ಓದಿ: Tulsi Vivah 2022 :ತುಳಸಿ ಮದುವೆ ಯಾವಾಗ? ತಿಥಿ, ಶುಭ ಮುಹೂರ್ತ ಮತ್ತು ಮಹತ್ವ

  1. ಆವಕಾಡೊ:
    ಭಾರತೀಯರು ಈ ಹಣ್ಣನ್ನು ತಿನ್ನುವುದು ಸ್ವಲ್ಪ ಕಡಿಮೆಯೇ. ಆದರೆ ಈ ಹಣ್ಣು ಬಹಳ ವಿಶೇಷವಾಗಿದೆ. ಈ ಹಣ್ಣಿನಲ್ಲಿರುವ ಒಲೀಕ್ ಆಮ್ಲವು ರಕ್ತಪ್ರವಾಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆವಕಾಡೊ ಟೋಸ್ಟ್‌ಗಳು ಯುವಕರು ಮತ್ತು ಆಹಾರ-ಪ್ರಜ್ಞೆಯ ಜನರಲ್ಲಿ ಜನಪ್ರಿಯವಾಗಿದೆ.
  2. ಕಿತ್ತಳೆ:
    ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳು ಫೈಬರ್ ನಿಂದ ಸಮೃದ್ಧವಾಗಿರುತ್ತದೆ. ಇದು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ.

ಹಣ್ಣುಗಳು ಕರಗಬಲ್ಲ ಫೈಬರ್‌ನಿಂದ ಸಮೃದ್ಧವಾಗಿರುತ್ತವೆ. ಅವುಗಳು ಹೃದಯಾಘಾತ, ಅಪಧಮನಿಗಳ ಅಡಚಣೆ ಮತ್ತು ಪಾರ್ಶ್ವವಾಯುಗಳಂತಹ ಹೃದಯದ ಸ್ಥಿತಿಗಳಿಂದ ದೇಹವನ್ನು ತಡೆಯಬಲ್ಲದು. ಆದ್ದರಿಂದ ನಿತ್ಯದ ಆಹಾರದಲ್ಲಿ ಹಣ್ಣುಗಳನ್ನು ಸೇರಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯಕರ ಹೃದಯ ಮತ್ತು ದೇಹವನ್ನು ಹೊಂದಬಹುದಾಗಿದೆ.

ಇದನ್ನೂ ಓದಿ : Beetroot Juice Benefits: ಬಿಟ್ರುಟ್ ಜ್ಯೂಸ್ ಕುಡಿಯಿರಿ; ಯಕೃತ್ತಿನ ಕಾಯಿಲೆಗಳಿಗೆ ಗುಡ್ ಬೈ ಹೇಳಿ

(High Cholesterol eat these 5 fruits to reduce high cholesterol)

Comments are closed.