Ulta Hanuman : ಸಾನ್ವರ್ ನಲ್ಲಿದ್ದಾನೆ ಉಲ್ಟಾ ಹನುಮಾನ್ : ಹನುಮನೇಕೆ ಇಲ್ಲಿ ತಲೆ ಕೆಳಗಾದ ಗೊತ್ತಾ?

  • ಹೇಮಂತ್ ಚಿನ್ನು

ಇದೇನಿದು ಉಲ್ಟಾ ಹನುಮಾನ್ (Ulta Hanuman) ? ಹನುಮನೇಕೆ ತಲೆಕೆಳಗಾದ ? ಈ ಪ್ರಶ್ನೆಗೆ ಉತ್ತರ ಪಡೆಯಲು ನಾವು ರಾಮಾಯಣದ ಒಂದು ಕಥೆಯನ್ನು ನೆನಪಿಸಿಕೊಳ್ಳಬೇಕು. ಒಮ್ಮೆ ಆಹಿರಾವಣ (ಐರಾವಣ) ನು ರಾಮಲಕ್ಷಣರನ್ನು ಬಂಧಿಸಿ ಪಾತಾಳ ಲೋಕಕ್ಕೆ ಕರೆದೊಯ್ಯುತ್ತಾನೆ. ಆಗ ತಕ್ಷಣವೇ ಹನುಮನು ತಲೆಕೆಳಗಾಗಿ ಪಾತಾಳಕ್ಕೆ ಜಿಗಿದು ರಾಮಲಕ್ಷಣರನ್ನು ಕಾಪಾಡಿ ಕರೆತರುತ್ತಾನೆ. ಆ ರೀತಿ ತಲೆಕೆಳಗಾಗಿ ಪಾತಾಳಕ್ಕೆ ಜಿಗಿದ ಸ್ಥಳವೇ ಸಾನ್ವರ್.

Ulta Hanuman is in Sanwar: Do you know Hanuman is down here  1

ಇದು ಮಧ್ಯಪ್ರದೇಶದ ಉಜ್ಜಯನಿಯಿಂದ 15ಕಿಮೀ ದೂರದಲ್ಲಿದೆ. ಇದರ ದ್ಯೋತಕವಾಗಿ ಇಲ್ಲಿ ತಲೆ ಕೆಳಗಾಗಿ ಹನುಮನನ್ನು ಪ್ರತಿಷ್ಟಿಸಲಾಗಿದೆ. ಅದೂ ತಲೆಯ ಭಾಗ ಮಾತ್ರ, ಹಾಗೂ ಈ ಹನುಮಾನ್ ಗೆ ವೀರಹನುಮಾನ್ ಎಂದು ಹೆಸರಿಸಲಾಗಿದೆ. ಇಲ್ಲಿ ಹನುಮನ ಜೊತೆ ರಾಮ , ಸೀತಾ, ಲಕ್ಷಣನ ಅಮೃತಶಿಲಾ ವಿಗ್ರಹ ಗಳೂ ಹಾಗೂ ಶಿವ ಪಾರ್ವತಿಯರ ವಿಗ್ರಹ ಗಳೂ ಇವೆ.

Ulta Hanuman is in Sanwar: Do you know Hanuman is down here 2

ಈ ದೇಗುಲ ರಾಮಾಯಣದ ಕಾಲಕ್ಕೆ ಸೇರಿದ್ದೆಂದು ಸ್ಥಳೀಯರು ಹೇಳುತ್ತಾರೆ. ಈ ಆಲಯದ ಪ್ರಾಂಗಣದಲ್ಲಿ ಹಲವಾರು ಮಹರ್ಷಿಗಳ ಮಂದಿರಗಳು ಇವೆ. ಇವು ಸುಮಾರು 1200 ವರ್ಷ ಹಳೆಯದೆಂದು ಹೇಳಲಾಗುತ್ತದೆ.

ಹಾಗೂ ಎರಡು ತುಂಬಾ ಪುರಾತನವಾದ ಪಾರಿಜಾತ ವೃಕ್ಷಗಳಿವೆ. ಈ ಮರಗಳಲ್ಲಿ ಗುಂಪು ಗುಂಪಾಗಿ ಗಿಳಿಗಳು ಇರುತ್ತವೆ. ಈ ಗಿಳಿಗಳು ವೀರ ಹನುಮಾನ್ ಪ್ರತಿರೂಪ ಎಂದು ಸ್ಥಳೀಯರು ಭಾವಿಸುತ್ತಾರೆ.

ಇದನ್ನೂ ಓದಿ : ಇಲ್ಲಿ ಪ್ರತಿ ರಾತ್ರಿ ನಡೆಯುತ್ತೆ ಭಗವಂತನ ರಾಸಲೀಲೆ – ನೋಡೋಕೆ ಹೋದವರಿಗೆ ಏನಾಗುತ್ತೆ ?

ಈ ಹನುಮನ ದರುಶನ ಮಾತ್ರದಿಂದ ಭಕ್ತರ ಕೋರಿಕೆಗಳು ನೆರವೇರುತ್ತವೆ ಎಂದು ಭಾವಿಸುತ್ತಾರೆ ಸ್ಥಳೀಯರು. ಹಲವರು ಈ ಹನುಮನಿಗೆ 3 ಅಥವಾ 5 ಮಂಗಳವಾರಗಳು ಕೆಂಪು ವಸ್ತ್ರಗಳನ್ನು ಅರ್ಪಿಸಿ ತಮ್ಮ ಕೋರಿಕೆ ಈಡೇರಿಸಿಕೊಳ್ಳುತ್ತಾರೆ. ಪ್ರತಿ ಮಂಗಳವಾರ ಈ ಹನುಮನಿಗೆ ಸಿಂಧೂರವನ್ನು ಲೇಪಿಸುತ್ತಾರೆ.

ಹನುಮನು ಗಿಳಿಯ ರೂಪ ಧರಿಸಿ ತುಲಸೀದಾಸ ಹಾಗೂ ಶ್ರೀರಾಮನಿಗೆ ವಾಹಕವಾಗಿ ಕೆಲಸ ಮಾಡುತ್ತಿದ್ದ ರೆಂದು ಪ್ರತೀತಿ. ಭಕ್ತಿ, ನಂಬಿಕೆ, ಐತಿಹ್ಯ, ಇತಿಹಾಸ ಏನೇ ಇರಲಿ ಇಲ್ಲಿಯ ವಿಶಿಷ್ಟ ಹನುಮನ ಮೂರ್ತಿ ನಮ್ಮ ಕಣ್ತಣಿಸುತ್ತದೆ.

ಇದನ್ನೂ ಓದಿ : ಮಳೆ ಬರುವ ಮುನ್ನವೇ ಮುನ್ಸೂಚನೆ ಕೊಡುತ್ತೆ ಈ ದೇವಾಲಯ : ರೈತರ ಬೆಳೆ ಕಾಯುತ್ತಾನೆ ಜಗನ್ನಾಥ

( Ulta Hanuman is in Sanwar: Do you know Hanuman is down here? )

Comments are closed.