Vastu Ideas : ವಾಸ್ತು ಶಾಸ್ತ್ರದ ಪ್ರಕಾರ ಉಪ್ಪಿಗೆ ಇರುವ ಪಾಸಿಟಿವ್​ ಹಾಗೂ ನೆಗೆಟಿವ್​ ಎಫೆಕ್ಟ್​ಗಳ ಬಗ್ಗೆ ಇಲ್ಲಿದೆ ಮಾಹಿತಿ

Vastu Ideas :

ಅತಿಯಾದ ಉಪ್ಪು ಸೇವನೆಯಿಂದ ಆರೋಗ್ಯವು ಹದಗೆಡುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ಉಪ್ಪು ಅಡುಗೆ ಮನೆಯಲ್ಲಿರುವ ಒಂದು ಪ್ರಮುಖ ವಸ್ತು ಎಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಉಪ್ಪು ಬೇಕೇ ಬೇಕು. ವಾಸ್ತು ಶಾಸ್ತ್ರದಲ್ಲಿಯೂ ಉಪ್ಪಿಗೆ ಅತ್ಯಂತ ಪ್ರಾಧಾನ್ಯತೆ ನೀಡಲಾಗಿದೆ. ಉಪ್ಪಿನ ಸಹಾಯದಿಂದ ನೀವು ಮನೆಯಲ್ಲಿನ ನಕಾರಾತ್ಮಕ ಅಂಶಗಳನ್ನು ದೂರ ಮಾಡಬಹುದಾಗಿದೆ. ಮನೆಯ ಪರಿಸರವನ್ನು ಉತ್ತಮವಾಗಿ ಇಡಲು ಉಪ್ಪು ಅತ್ಯಂತ ಪರಿಣಾಮಕಾರಿಯಾಗಿದೆ.


ವಾಸ್ತು ಶಾಸ್ತ್ರದಲ್ಲಿ ಉಪ್ಪಿನ ಬಳಕೆಯನ್ನು ಪ್ರಯೋಜನಕಾರಿ ಎಂದು ಹೇಳಲಾಗಿದೆಯಾದರೂ ಕೆಲವೊಮ್ಮೆ ಇದರ ಬಳಕೆಯು ನಿಮಗೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಬಹುದು. ವಾಸ್ತು ಶಾಸ್ತ್ರದ ಪ್ರಕಾರ ಉಪ್ಪು ಧನಾತ್ಮಕ ಹಾಗೂ ಋಣಾತ್ಮಕ ಎಂಬ ಎರಡೂ ಪರಿಣಾಮಗಳನ್ನು ಹೊಂದಿದೆ. ಹಾಗಾದರೆ ಆ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮಗಳು ಯಾವುವು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಉಪ್ಪಿನ ಸಕಾರಾತ್ಮಕ ಪರಿಣಾಮಗಳು:


ಕೆಲವೊಮ್ಮೆ ಋಣಾತ್ಮಕತೆಯು ದೇಹವನ್ನು ತುಂಬಾ ಆವರಿಸುತ್ತದೆ, ಜನರು ದಣಿಯುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಈ ನಕಾರಾತ್ಮಕತೆಯನ್ನು ತೆಗೆದುಹಾಕಲು, ನೀವು ಉಪ್ಪುನೀರಿನ ಸ್ನಾನವನ್ನು ಮಾಡಬಹುದು. ಇದರಿಂದ ವ್ಯಕ್ತಿಯಲ್ಲಿ ಧನಾತ್ಮಕ ಭಾವನೆ ಮೂಡುತ್ತದೆ ಎಂದು ಹೇಳಲಾಗುತ್ತದೆ.


ಮನೆಯಲ್ಲಿ ಶಾಂತಿ ಮತ್ತು ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳಲು ಉಪ್ಪನ್ನು ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಇದಕ್ಕಾಗಿ ಮನೆಯ ಯಾವುದೇ ಮೂಲೆಯಲ್ಲಿ ಉಪ್ಪು ನೀರನ್ನು ಬಟ್ಟಲಿನಲ್ಲಿ ಇಡಬೇಕು. ಈ ವಿಧಾನವು ಮನೆಯಿಂದ ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ

ಉಪ್ಪು ನಿದ್ರಾಹೀನತೆಯ ಸಮಸ್ಯೆಯನ್ನು ತೆಗೆದುಹಾಕುವ ಸಾಮರ್ಥ್ಯವನ್ನು ಸಹ ಹೊಂದಿದೆ ಎನ್ನುತ್ತೆ ವಾಸ್ತು ಶಾಸ್ತ್ರ. ನೀವು ನಿಮ್ಮ ಮಲಗುವ ಕೋಣೆಯಲ್ಲಿ ಉಪ್ಪನ್ನು ಇರಿಸಿದರೆ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಕ್ಕು ನಿದ್ರೆ ಕೂಡ ಒಳ್ಳೆಯ ರೀತಿಯಲ್ಲಿ ಆಗುತ್ತದೆ.


ಉಪ್ಪಿನಿಂದ ಆಗಬಲ್ಲ ನಕಾರಾತ್ಮಕ ಪರಿಣಾಮಗಳು :


ಅಡುಗೆ ಕೋಣೆಗಳಲ್ಲಿ ಆಕಸ್ಮಿಕವಾಗಿ ಉಪ್ಪು ಚೆಲ್ಲಿ ಬಿಡುತ್ತದೆ. ಇದನ್ನು ಮಂಗಳಕರ ಎಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ ಇದು ಮನೆಯಲ್ಲಿ ನಕಾರಾತ್ಮಕ ಅಂಶವನ್ನು ಹೊತ್ತು ತರುತ್ತದೆ ಎಂದು ನಂಬಲಾಗಿದೆ. ಅಡುಗೆ ಮನೆಯಲ್ಲಿ ಆಕಸ್ಮಿಕವಾಗಿ ಉಪ್ಪು ಚೆಲ್ಲಿದರೆ ತಕ್ಷಣವೇ ಅದನ್ನು ಬಟ್ಟೆಯಿಂದ ಸ್ವಚ್ಛಗೊಳಿಸಿ. ಸಾಮಾನ್ಯವು ಉಪ್ಪು ಚೆಲ್ಲಿದಾಗ ಅನೇಕರು ಅದನ್ನು ಪೊರಕೆಯಿಂದ ಗುಡಿಸುತ್ತಾರೆ. ಆದರೆ ಇದನ್ನೂ ಸಹ ಅಶುಭ ಎಂದು ಪರಿಗಣಿಸಲಾಗಿದೆ.


ಅನೇಕರಿಗೆ ಊಟ ಮಾಡುವ ವೇಳೆಯಲ್ಲಿ ಮೇಲಿನಿಂದ ಉಪ್ಪು ಹಾಕಿಕೊಳ್ಳುವ ಅಭ್ಯಾಸವಿರುತ್ತದೆ. ಇದು ಕೂಡ ವಾಸ್ತು ಶಾಸ್ತ್ರದ ಪ್ರಕಾರ ಉತ್ತಮ ಅಭ್ಯಾಸವಲ್ಲ. ಗೃಹಿಣಿಯು ತನ್ನ ಕೈಯಿಂದ ಆಹಾರ ಸೇವಿಸುತ್ತಿರುವ ವ್ಯಕ್ತಿಗೆ ಉಪ್ಪು ನೀಡಿದರೆ ಅದು ಮನೆಗೆ ನಕಾರಾತ್ಮಕ ಅಂಶವನ್ನು ಹೊತ್ತು ತರುತ್ತದೆ ಎಂದು ನಂಬಲಾಗಿದೆ.

Vastu Ideas according to Vastu Shastra these are negative and positive effects of salt

ಇದನ್ನು ಓದಿ : clean house like this : ಮನೆಯನ್ನು ಈ ರೀತಿ ಶುಚಿಯಾಗಿಟ್ಟುಕೊಂಡರೆ ಇರುತ್ತದೆ ಲಕ್ಷ್ಮೀಯ ಕೃಪೆ

ಇದನ್ನೂ ಓದಿ : Vaastu Tips : ಮನೆಯಲ್ಲಿ ನೆಮ್ಮದಿ ನೆಲೆಸಬೇಕು ಅಂದರೆ ಈ ರೀತಿಯ ಗಡಿಯಾರ ಮನೆಗೆ ತನ್ನಿ

Comments are closed.