Spinach : ಈ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಪಾಲಕ್​ ಸೇವನೆ ಮಾಡಬಾರದು

Spinach : ಆರೋಗ್ಯವು ಸಮೃದ್ಧವಾಗಿ ಇರಬೇಕು ಎಂದರೆ ಹೆಚ್ಚೆಚ್ಚು ಹಸಿರು ತರಕಾರಿಗಳನ್ನು ಸೇವನೆ ಮಾಡಿ ಎಂದು ವೈದ್ಯರು ಸಲಹೆ ನೀಡುವುದನ್ನು ಕೇಳಿರುತ್ತೀರಿ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಸಿರು ತರಕಾರಿಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಹಸಿರು ತರಕಾರಿಗಳು ಉತ್ತಮ ಆಹಾರವಾಗಿದೆ. ಇದೇ ಸಾಲಿನಲ್ಲಿ ಬರುವ ಪಾಲಕ್​ ಕೂಡ ಸಾಕಷ್ಟು ಉತ್ತಮ ಅಂಶಗಳನ್ನು ಹೊಂದಿದೆ. ಇದರಲ್ಲಿರುವ ವಿಟಾಮಿನ್​ ಎ, ವಿಟಾಮಿನ್​ ಇ, ವಿಟಾಮಿನ್​ ಕೆ ಹಾಗೂ ವಿಟಾಮಿನ್​ ಬಿ ಜೊತೆಯಲ್ಲಿ ಕ್ಯಾರೋಟನ್​, ಅಮೈನೋ ಆಮ್ಲಗಳು, ಕಬ್ಬಿಣಾಂಶ, ಆಯೋಡಿನ್​, ಪೊಟ್ಯಾಷಿಯಂ ಹಾಗೂ ಮೆಗ್ನಿಷಿಯಂನಂತಹ ಖನಿಜಾಂಶಗಳು ಪಾಲಕ್​ ಸೊಪ್ಪಿನಲ್ಲಿದೆ.

ಸಲಾಡ್​, ಸೂಪ್​, ಪಲ್ಯ, ಗೊಜ್ಜು ಹೀಗೆ ಅನೇಕ ರೂಪದಲ್ಲಿ ನೀವು ಪಾಲಕ್​ ಸೊಪ್ಪನ್ನು ನಿಮ್ಮ ಆಹಾರದ ಭಾಗವನ್ನಾಗಿ ಮಾಡಿಕೊಳ್ಳುವುದರ ಮೂಲಕ ನೀವು ಪಾಲಕ್​​​ ಸೊಪ್ಪಿನ ಪ್ರಯೋಜನವನ್ನು ಪಡೆಯಬಹುದಾಗಿದೆ. ಆದರೆ ಪಾಲಕ್​ ಸೊಪ್ಪು ಎಲ್ಲರ ಆರೋಗ್ಯದ ಮೇಲೆಯೂ ಒಳ್ಳೆಯ ಪರಿಣಾಮವನ್ನೇ ಬೀರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ಕೆಳಗಿನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಪಾಲಕ್​ ಸೊಪ್ಪಿನ ಸೇವನೆಯಿಂದ ದೂರವಿರುವುದು ಉತ್ತಮ.

ಮೂತ್ರಪಿಂಡದ ಸಮಸ್ಯೆಗಳು :


ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು ಪಾಲಕ್​ ಸೊಪ್ಪಿನ ಸೇವನೆಯಿಂದ ದೂರ ಇರುವುದು ಉತ್ತಮ. ಪಾಲಕ್ ಸೊಪ್ಪನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಆಕ್ಸಾಲಿಕ್​ ಆಮ್ಲದ ಪ್ರಮಾಣ ಹೆಚ್ಚುತ್ತದೆ. ತಜ್ಞರ ಪ್ರಕಾರ ಇದು ಮೂತ್ರಪಿಂಡಗಳಿಗೆ ಒಳ್ಳೆಯದಲ್ಲ.

ಕಿಡ್ನಿಯಲ್ಲಿ ಕಲ್ಲು :


ಪಾಲಕ್​ ಸೊಪ್ಪಿನ ಸೇವನೆಯಿಂದ ಕಿಡ್ನಿಯಲ್ಲಿ ಕಲ್ಲು ಉಂಟಾಗುವ ಅಪಾಯ ಹೆಚ್ಚಿರುತ್ತದೆ. ಹೀಗಾಗಿ ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಇರುವವರು ಪಾಲಕ್​ ಸೊಪ್ಪಿನ ಸೇವನೆ ಮಾಡದೇ ಇರುವುದು ಹೆಚ್ಚು ಸೂಕ್ತವಾಗಿದೆ. ಕೆಲವೊಮ್ಮೆ ನಾವು ಪಾಲಕ್​ ಸೊಪ್ಪನ್ನು ತೊಳೆದ ಬಳಿಕವೂ ಅದರಲ್ಲಿರುವ ಮಣ್ಣಿನ ಅಂಶವು ಸುಲಭವಾಗಿ ಹೋಗುವುದಿಲ್ಲ. ನಮಗೆ ಪಾಲಕ್​ ಸೇವನೆ ಮಾಡುವಾಗ ಇದು ತಿಳಿಯುವುದಿಲ್ಲ. ಆದರೆ ಕ್ರಮೇಣವಾಗಿ ಕಿಡ್ನಿಯಲ್ಲಿ ಕಲ್ಲು ಉಂಟಾಗಲು ಕಾರಣವಾಗುತ್ತಾ ಹೋಗುತ್ತದೆ. ನೀವು ಕೂಡ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರೆ ಆದಷ್ಟು ಹೆಚ್ಚೆಚ್ಚು ನೀರನ್ನು ಕುಡಿಯಿರಿ.

ಕೀಲು ನೋವು


ಪಾಲಕ್​ ಸೊಪ್ಪಿನಲ್ಲಿ ಪ್ಯೂರಿನ್​​ ಅಂಶ ಹೇರಳವಾಗಿ ಇರುತ್ತದೆ. ಆಕ್ಸಾಲಿಕ್​ ಆಮ್ಲ ಹಾಗೂ ಪ್ಯೂರಿನ್​ ಅಂಶವು ಸಂಧಿವಾತಕ್ಕೆ ಕಾರಣವಾಗಬಹುದು. ಕೀಲುನೋವಿನಿಂದ ಬಳಲುತ್ತಿರುವವರು ಪಾಲಕ್ ಸೊಪ್ಪನ್ನು ಸೇವನೆ ಮಾಡದೇ ಇರುವುದು ಹೆಚ್ಚು ಸೂಕ್ತವಾಗಿದೆ. ಏಕೆಂದರೆ ಹೀಗೆ ಮಾಡುವುದರಿಂದ ಕೀಲುಗಳಲ್ಲಿ ನೋವು ಇನ್ನಷ್ಟು ಹೆಚ್ಚಾಗುತ್ತದೆ .

Spinach is beneficial for health, but these people should not eat

ಇದನ್ನು ಓದಿ : Vaastu Tips : ಮನೆಯಲ್ಲಿ ನೆಮ್ಮದಿ ನೆಲೆಸಬೇಕು ಅಂದರೆ ಈ ರೀತಿಯ ಗಡಿಯಾರ ಮನೆಗೆ ತನ್ನಿ

ಇದನ್ನೂ ಓದಿ : Bedroom Vastu Tips : ದಾಂಪತ್ಯ ಜೀವನದ ವಿರಸ ದೂರ ಮಾಡುತ್ತದೆ ಈ ವಾಸ್ತು ಟಿಪ್ಸ್​

Comments are closed.