Vastu Tips: ಒಡೆದ ಕನ್ನಡಿಯನ್ನೇಕೆ ಮನೆಯಲ್ಲಿ ಇಡಬಾರದು ಗೊತ್ತೇ..?

Vastu Tips: : ಮನೆ ಅಂದಮೇಲೆ ಅಲ್ಲಿ ಕನ್ನಡಿ ಇದ್ದೇ ಇರುತ್ತದೆ. ಕನ್ನಡಿಯ ವಿಚಾರದಲ್ಲಿ ಎಷ್ಟು ಜಾಗರೂಕರಾಗಿದ್ದರೂ ಕಮ್ಮಿಯೇ. ಏಕೆಂದರೆ ಕೊಂಚ ಕೈ ಜಾರಿತೆಂದರೂ ಕನ್ನಡಿಯು ಒಡೆದು ತುಂಡು ತುಂಡಾಗಿ ಬಿಡುತ್ತದೆ. ಹೀಗೆ ಕನ್ನಡಿ ಒಡೆಯುವುದು ಶುಭ ಶಕುನವಂತೂ ಅಲ್ಲವೇ ಅಲ್ಲ. ಕೆಲವರು ಒಡೆದು ಹೋದ ಕನ್ನಡಿಗಳನ್ನು ಮನೆಯಿಂದ ಹೊರಗೆ ಎಸೆಯುವ ಗೋಜಿಗೆ ಹೋಗುವುದಿಲ್ಲ. ಆದರೆ ಎಂದಿಗೂ ಹಿರಿಯರು ಮುರಿದ ಕನ್ನಡಿ ಹಾಗೂ ವಿಗ್ರಹಗಳನ್ನು ಮನೆಯಲ್ಲಿ ಇಡಬಾರದು ಎಂದು ಹೇಳುತ್ತಿರುವುದನ್ನು ನೀವು ಕೇಳಿರಬಹುದು.


ಹಿರಿಯರ ಈ ಮಾತಿನ ಹಿಂದೆ ವಾಸ್ತು ಶಾಸ್ತ್ರ ಅಡಗಿದೆ. ಒಡೆದು ಹೋದ ಕನ್ನಡಿಯನ್ನು ಮನೆಯಲ್ಲಿ ಇಡುವುದು ಮನೆಗೆ ಕೆಟ್ಟದ್ದನ್ನು ಮಾಡುತ್ತದೆ. ಮನೆಯಲ್ಲಿ ಕನ್ನಡಿ ಇರುವುದು ಎಷ್ಟು ಶುಭಶಕುನವೋ ಅದೇ ರೀತಿ ಒಡೆದು ಹೋದ ಕನ್ನಡಿಯನ್ನು ಇಡುವುದು ಅಪಶಕುನವಾಗಿದೆ.


ಒಡೆದು ಹೋದ ಕನ್ನಡಿಗಳನ್ನು ಮನೆಯಲ್ಲಿ ಇರಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯು ಕಡಿಮೆಯಾಗುತ್ತದೆ. ಇದರಿಂದ ಮನೆಯಲ್ಲಿ ಋಣಾತ್ಮಕ ಶಕ್ತಿಯು ಹೆಚ್ಚುತ್ತದೆ. ಒಡೆದು ಹೋದ ಕನ್ನಡಿಯ ಮೇಲೆ ಬೀಳುವ ಬೆಳಕು ಮನೆಯಲ್ಲಿ ಋಣಾತ್ಮಕ ಶಕ್ತಿಯನ್ನು ತರುತ್ತದೆ. ಇದು ನೇರವಾಗಿ ಮನೆಯ ಸದಸ್ಯರ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ.


ಕನ್ನಡಿಯು ಒಡೆದರೆ ಮನೆಯಿಂದ ಅದನ್ನು ಮೊದಲು ಹೊರಗೆಸೆಯಬೇಕು. ಕನ್ನಡಿ ಇದ್ದಕ್ಕಿದಂತೆ ಒಡೆಯಿತು ಅಂದರೆ ಅದು ಕೆಲವು ದೊಡ್ಡ ಸಮಸ್ಯೆಗಳನ್ನು ತಪ್ಪಿಸಿದೆ ಎಂದು ಅರ್ಥ. ಹೀಗಾಗಿ ಅದನ್ನು ಎಸೆಯಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಕನ್ನಡಿ ಒಡೆದರೆ ಮನೆಯಿಂದ ಹೊರಗೆ ಎಸೆಯಬೇಕು. ಕನ್ನಡಿ ಇದ್ದಕ್ಕಿದ್ದಂತೆ ಒಡೆದರೆ, ಈ ಕನ್ನಡಿಯ ಮೇಲೆ ಮನೆಯಲ್ಲಿ ಕೆಲವು ದೊಡ್ಡ ತೊಂದರೆಗಳನ್ನು ತಪ್ಪಿಸಲಾಗಿದೆ ಎಂದು ಅರ್ಥ, ಆದ್ದರಿಂದ ಅದನ್ನು ಎಸೆಯಬೇಕು.

ಇದನ್ನು ಓದಿ : kiara advani looks stunning : ಬೋಲ್ಡ್​ ಫೋಟೋಗಳ ಮೂಲಕ ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿಸಿದ ನಟಿ ಕಿಯಾರಾ ಅಡ್ವಾಣಿ

ಇದನ್ನೂ ಓದಿ : Yash aka Rocky Bhai : ಕೋಟಿ ಮೌಲ್ಯದ ಪಾನ್​ಮಸಾಲಾ ಆ್ಯಡ್​ ತಿರಸ್ಕರಿಸಿದ ಯಶ್​: ಅಭಿಮಾನಿಗಳ ಆರೋಗ್ಯ ಮುಖ್ಯ ಎಂದ ರಾಕಿ ಭಾಯ್​

Vastu Tips: Never keep cracked mirror in your house; here’s why

Comments are closed.