ಗುರು–ಶುಕ್ರ ಸಂಯೋಗ: ಈ ನಾಲ್ಕು ರಾಶಿಯವರಿಗೆ ಒಲಿಯಲಿದೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ
Venus-Jupiter Conjunction 2026: ಜ್ಞಾನದ ಸಂಕೇತವಾದ ಗುರು ಮತ್ತು ಐಶ್ವರ್ಯದ ಸಂಕೇತವಾದ ಶುಕ್ರ ಇವೆರಡೂ ಗ್ರಹಗಳು ಮಾರ್ಚ್ 18 ರಂದು ಒಂದೆಡೆ ಸೇರಲಿವೆ. ಇದರಿಂದ ಯಾವ ರಾಶಿಯವರಿಗೆ ಲಾಭ? ಇಲ್ಲಿದೆ ಓದಿ.
Venus-Jupiter Conjunction 2026: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನದಲ್ಲಾಗುವ ಬದಲಾವಣೆಯು ಬಹುತೇಕ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಆದರೆ ನಿರ್ದಿಷ್ಟ ರಾಶಿಯಲ್ಲಿ ಉಂಟಾಗುವ ಬದಲಾವಣೆಯು ಕೆಲವು ರಾಶಿಗಳ ಮೇಲೆ ಹೆಚ್ಚಿನ ಪರಿಣಾಮ ಉಂಟುಮಾಡುತ್ತವೆ. ಜ್ಞಾನದ ಸಂಕೇತವಾದ ಗುರು ಮತ್ತು ಐಶ್ವರ್ಯದ ಸಂಕೇತವಾದ ಶುಕ್ರ ಇವೆರಡೂ ಗ್ರಹಗಳು ಮಾರ್ಚ್ 18 ರಂದು ಒಂದೆಡೆ ಸೇರಲಿವೆ. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ಈ ಸಂಯೋಗದಿಂದ ಕೆಲವು ರಾಶಿಗಳು ಹೆಚ್ಚಿನ ಪ್ರಯೋಜನ ಪಡೆಯುತ್ತವೆ. ಶಾಸ್ತ್ರದ ಪ್ರಕಾರ ಈ ಸಂಯೋಗದಿಂದ ವೃಷಭ, ತುಲಾ, ಧನು ಮತ್ತು ಮೀನ ರಾಶಿಯ ಮೇಲೆ ಮಹತ್ವದ ಬದಲಾವಣೆಗಳನ್ನು ತರುತ್ತದೆ.
ವೃಷಭ ರಾಶಿ
ಗುರು ಮತ್ತು ಶುಕ್ರ ಗ್ರಹದ ಸಂಯೋಗದಿಂದ ವೃಷಭ ರಾಶಿಯವರಿಗೆ ಸಿಕ್ಕಾಪಟ್ಟೆ ಪ್ರಯೋಜನವಾಗಲಿದೆ. ಅವರ ವೈಯಕ್ತಿಕ ಜೀವನ ಸುಧಾರಿಸಲಿದೆ. ಜೀವನದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ವೃತ್ತಿಜೀವನದಲ್ಲಿ ಅನುಕೂಲಕರ ವಾತಾವರಣ ಸೃಷ್ಟಿಯಾಗುತ್ತದೆ. ಎಲ್ಲರ ಬೆಂಬಲ ಸಿಗುತ್ತದೆ. ಆರ್ಥಿಕ ಸ್ಥಿತಿ ಮೊದಲಿಗಿಂತ ಸುಧಾರಿಸುತ್ತದೆ. ಹೂಡಿಕೆ ಮಾಡುವುದಿದ್ದರೆ ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ.
ತುಲಾ ರಾಶಿ
ತುಲಾ ರಾಶಿಗೆ ಶುಕ್ರ ಗ್ರಹ ಅಧಿಪತಿಯಾಗಿದ್ದಾನೆ. ಆದ್ದರಿಂದ ಈ ಸಂಯೋಗವು ತುಲಾ ರಾಶಿಯವರಿಗೆ ಬಹಳ ವಿಶೇಷವಾಗಿದೆ. ಸಕಾರಾತ್ಮಕ ಅವಕಾಶಗಳು ನಿಮಗೆ ಸಿಗುತ್ತವೆ. ವೈವಾಹಿಕ ಜೀವನ ಸುಧಾರಿಸುತ್ತದೆ. ಸಂಬಂಧಗಳು ಬಲಗೊಳ್ಳುತ್ತವೆ. ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಸಿಗುವ ಸಾಧ್ಯತೆಯಿದೆ. ಆರ್ಥಿಕ ಸ್ಥಿತಿ ಸುಧಾರಿಸಲು ಆರಂಭವಾಗುತ್ತದೆ.
ಇದನ್ನೂ ಓದಿ: ರಾಮ ತುಳಸಿ Vs ಶ್ಯಾಮ ತುಳಸಿ: ವಾಸ್ತು ಪ್ರಕಾರ ಮನೆಯಲ್ಲಿ ಯಾವ ತುಳಸಿ ಇದ್ದರೆ ಲಾಭ?
ಧನು ರಾಶಿ
ಈ ಸಂಯೋಗವು ಧನು ರಾಶಿಯವರಿಗೆ ಬಹಳಷ್ಟು ಲಾಭದಾಯಕವಾಗಿದೆ. ಏಕೆಂದರೆ ಧನು ರಾಶಿಯು ಗುರು ಗ್ರಹದಿಂದ ಆಳಲ್ಪಡುತ್ತದೆ. ಹಾಗಾಗಿ ಈ ರಾಶಿಯವರಿಗೆ ಲಾಭಗಳನ್ನು ತಂದುಕೊಡುತ್ತದೆ. ಈ ಸಂಯೋಗದಿಂದ ಇತರರೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ವ್ಯಾಪಾರಸ್ಥರಿಗೆ ಭವಿಷ್ಯದಲ್ಲಿ ಯಶಸ್ಸು ಸಿಗುವ ಸಾಧ್ಯತೆಯಿದೆ.
ಮೀನ ರಾಶಿ
ಗುರು – ಶುಕ್ರ ಸಂಯೋಗವು ಮೀನ ರಾಶಿಯವರ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಕುಟುಂಬದೊಂದಿಗೆ ನೀವು ಹೆಚ್ಚು ಸಮಯ ಕಳೆಯುತ್ತಿರಿ. ವೈಯಕ್ತಿಕ ಜೀವನದ ಜೊತೆಗೆ ವೃತ್ತಿ ಬದುಕಿನಲ್ಲು ಧನಾತ್ಮಕ ಬದಲಾವಣೆ ನಿರೀಕ್ಷಿಸಬಹುದಾಗಿದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುವ ಸಾಧ್ಯತೆಯಿದೆ. ಆದರೂ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಬಹಳ ಜಾಗರೂಕರಾಗಿರಿ.



