ಶನಿಯ ರಾಶಿಯಲ್ಲಿ ಶುಕ್ರನ ಸಂಚಾರ: ಜನವರಿಯಿಂದ ಈ 3 ರಾಶಿಯವರಿಗೆ ಶುಕ್ರ ದೆಸೆ
Venus Transit: ಹೊಸ ವರ್ಷ ಪ್ರಾರಂಭವಾಗಲು ಇನ್ನು ಕೇವಲ 2 ತಿಂಗಳು ಮಾತ್ರ ಉಳಿದಿದೆ. ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಅನೇಕ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿವೆ.
ಅದರಲ್ಲೂ ಶುಕ್ರನು ಜನವರಿಯಲ್ಲಿಯೇ ತನ್ನ ಚಲನೆ ಬದಲಾಯಿಸುತ್ತಿದ್ದಾನೆ. ಶುಕ್ರ ಗ್ರಹವು ಜನರಿಯಲ್ಲಿ ಶನಿ ಗ್ರಹದ ರಾಶಿಯಾದ ಮಕರದಲ್ಲಿ ಸಂಚರಿಸಲಿದ್ದಾನೆ.
ಶುಕ್ರನ ಈ ಸಂಚಾರವು ಅನೇಕ ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ತರಲಿದೆ. ಒಂದು ವರ್ಷದ ನಂತರ ಶುಕ್ರನು ಶನಿಯ ರಾಶಿಗೆ ಪ್ರವೇಶಿಸುವುದರಿಂದ ಈ ಮೂರು ರಾಶಿಯವರ ಜೀವನದಲ್ಲಿ ಮಹತ್ತರ ಬದಲಾವಣೆಯಾಗಲಿದೆ.
ಹಾಗಾದರೆ ಆ ರಾಶಿಗಳು ಯಾವುವು? ಅವರಿಗಾಗುವ ಪ್ರಯೋಜನಗಳೇನು ಎಂದು ನೋಡೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ ಶುಕ್ರನು ಮಕರ ರಾಶಿಯಲ್ಲಿ ಸಂಚರಿಸುವುದು ಭಾರಿ ಪ್ರಯೋಜನ ನೀಡಲಿದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿಯನ್ನು ಪಡೆಯುವ ಕಾಲ.
ಪ್ರೇಮ ಜೀವನ ಮುಂದುವರಿಯುತ್ತದೆ. ಕುಟುಂಬದಲ್ಲಿ ಸಮೃದ್ಧಿ ತುಂಬುತ್ತದೆ. ಆರೋಗ್ಯ ಸುಧಾರಿಸುತ್ತೆದೆ.
ಇದನ್ನೂ ಓದಿ: Zodiac Signs: ನಿಮ್ಮ ವ್ಯಕ್ತಿತ್ವದ ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯ! ಯಾವ ರಾಶಿಯವರು ಎಂಥ ಜನ?
ವೃಷಭ ರಾಶಿ
ಶುಕ್ರನ ಸಂಚಾರದಿಂದ ವೃಷಭ ರಾಶಿಯವರಿಗೆ ವ್ಯವಹಾರದಲ್ಲಿ ಬಹಳ ಪ್ರಯೋಜನವಾಗಲಿದೆ. ವರ್ಷಗಳಷ್ಟು ಹಳೆಯ ಸಮಸ್ಯೆಗಳು ತಾನಾಗಿಯೇ ಬಗೆಹರಿಯಲು ಪ್ರಾರಂಭವಾಗಲಿದೆ.
ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದರಿಂದ ಶುಭವಾಗಲಿದೆ. ಹಳೆಯ ಸ್ನೇಹಿತನನ್ನು ಭೇಟಿಯಾಗುವ ಸಾಧ್ಯತೆಯಿದೆ. ಆರ್ಥಿಕ ಲಾಭವಾಗುವ ಸಾಧ್ಯತೆಯಿದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಶುಕ್ರನ ಸಂಚಾರದಿಂದ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ. ಉದ್ಯಮಿಗಳಿಗೆ ಹೊಸ ಹೂಡಿಕೆದಾರರು ಸಿಗಬಹುದು.
ಆರ್ಥಿಕ ತೊಂದರೆಗಳು ಕ್ರಮೇಣ ಪರಿಹಾರವಾಗುತ್ತವೆ. ಕೆಲಸದ ನಿಮಿತ್ತ ಪ್ರಯಾಣ ಸಾಧ್ಯ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
ಇದನ್ನೂ ಓದಿ: ಚಂದ್ರ ಗೋಚರ 2025: ಈ ರಾಶಿಯವರ ಜೀವನದಲ್ಲಿ ಮೂಡಲಿದೆ ಹೊಸ ಬೆಳಕು



