Volodymyr Zelenskyy Biography: ಹಾಸ್ಯನಟನಾಗಿದ್ದ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್ ಅಧ್ಯಕ್ಷರಾದರು! ಇವರು ಸಾಮಾಜಿಕ ಜಾಲತಾಣದಿಂದಲೇ ಮತಗಿಟ್ಟಿಸಿದ ಗಟ್ಟಿಗಾರ

ವ್ಲಾದಿಮಿರ್ ಪುಟಿನ್ (Vladimir Putin) ಎಂಬ ರಷ್ಯಾದ ಅಧ್ಯಕ್ಷ ಉಕ್ರೇನ್ ಮೇಲೆ (Russia Ukraine Crisis) ಯುದ್ಧ ಘೋಷಣೆ ಮಾಡಿದ್ದಾಗಿದೆ. ಉಕ್ರೇನ್ ರಷ್ಯಾದ ದಾಯಾದಿ ನೆರೆಯ ದೇಶ. ಈ ಹಿಂದೆ ಸೋವಿಯತ್ ಒಕ್ಕೂಟದ (Soviet Union) ಭಾಗವೇ ಆಗಿದ್ದ ಪ್ರದೇಶ. ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ತಮ್ಮ ದೇಶದ ಜನರನ್ನು ಉದ್ದೇಶಿಸಿ ಮಾಡಿದ ಭಾವನಾತ್ಮಕ ಭಾಷಣ ಅಲ್ಲಿಯ ಜನರಲ್ಲಿ ಆತ್ಮಸ್ಥೈರ್ಯ ಹುಟ್ಟಿಸಿತ್ತು. ಸೇನಾಬಲ ಕಡಿಮೆಯಿದ್ದರೂ ಉಕ್ರೇನ್ ಜನರು ಮಾನಸಿಕವಾಗಿ ರಷ್ಯಾವನ್ನು ಎದುರಿಸಲು ಸನ್ನದ್ಧರಾಗುವಂತೆ ಮಾಡಿದವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ. (Ukraine President Volodymyr Zelenskyy) ಹಾಗಾದರೆ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಹಿನ್ನೆಲೆಯೇನು? ಅವರು ರಾಜಕೀಯಕ್ಕೆ ಬಂದಿದ್ದು ಹೇಗೆ? (Volodymyr Zelenskyy Biography)ವಿಶ್ವದ ಇತರ ದೇಶಗಳ ಜೊತೆ ಅವರ ಹೇಗೆ ಸಂಬಂಧ ಬೆಳೆಸಿಕೊಂಡಿದ್ದಾರೆ ಎಮಬೆಲ್ಲ ಕುತೂಹಲಕರ ಟಿಪ್ಪಣಿ ನಿಮ್ಮ ಓದಿಗೆ ಇಲ್ಲಿದೆ.

ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ಇದೀಗ 44 ವರ್ಷ ಪ್ರಾಯ. ಉಕ್ರೇನ್ ಸಂದಿಗ್ಧ ಪರಿಸ್ಥಿತಿಯಲ್ಲಿ ಇರುವಾದ ದೇಶದ ಅಧ್ಯಕ್ಷರಾಗಿದ್ದು ಅವರ ಪಾಲಿನ ವಿಷಾದನೀಯ ಸಂಗತಿ ಎಂದೇ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ಕ್ರಿವಿ ರಿಹ್ ಇನ್ಸ್ಟಿಟ್ಯೂಟ್ ಆಫ್ ಎಕನಾಮಿಕ್ಸ್‌ ಶಿಕ್ಷಣ ಸಂಸ್ಥೆಯಿಂದ ಕಾನೂನು ಪದವಿಯನ್ನು ಗಳಿಸಿದ ನಂತರ, ಝೆಲೆನ್ಸ್ಕಿ ಮನರಂಜನಾ ಉದ್ಯಮಕ್ಕೆ ಪ್ರವೇಶಿಸಿದರ. ಹಾಸ್ಯ ತಂಡವೊಂದರಲ್ಲಿ ನಟನಾಗಿ ಕೆಲಸ ಆರಂಭಿಸಿದರು. ನಂತರ ಹಲವು ಚಲನಚಿತ್ರಗಳಲ್ಲಿಯೂ ಅವರು ಕಾಣಿಸಿಕೊಂಡಿದ್ದರು. 2015 ರಲ್ಲಿ ಜನಪ್ರಿಯ ದೂರದರ್ಶನ ಸರಣಿ ಸರ್ವೆಂಟ್ ಆಫ್ ದಿ ಪೀಪಲ್‌ನಲ್ಲಿ ಉಕ್ರೇನ್‌ನ ಅಧ್ಯಕ್ಷರಾಗಿಯೂ ವೊಲೊಡಿಮಿರ್ ಝೆಲೆನ್ಸ್ಕಿ ಅವರು ನಟನೆ ಮಾಡಿದ್ದರು.

2014ರಲ್ಲಿ ಉಕ್ರೇನ್‌ನ ಅಂದಿನ ಅಧ್ಯಕ್ಷ ವಿಕ್ಟರ್ ಯಾನುಕೋವಿಚ್ ಅವರನ್ನು ಉಕ್ರೇನ್‌ನ ನಾಗರಿಕರು ಕ್ರಾಂತಿಕಾರಕ ಪ್ರತಿಭಟನೆಯಿಂದ ಕೆಳಗಿಳಿಸಿದರು. ಇದು ಝೆಲೆನ್ಸ್‌ಕಿಯವರ ರಾಜಕೀಯ ಯಶಸ್ಸಿಗೆ ಕಾರಣವಾಯಿತು. ಝೆಲೆನ್ಸ್ಕಿ ಚುನಾವಣೆ ಗೆದ್ದದ್ದು ಸಹ ಒಂದು ಅಚ್ಚರಿಯೇ.

ಇದನ್ನೂ ಓದಿ: Vladimir Putin Profile: ವ್ಲಾದಿಮಿರ್ ಪುಟಿನ್: ಬೇಹುಗಾರಿಕಾ ಸಂಸ್ಥೆ ಕೆಜಿಬಿ ಏಜೆಂಟ್‌ನಿಂದ ರಷ್ಯಾವನ್ನು ಕೈಮುಷ್ಠಿಯಲ್ಲಿ ಇಟ್ಟುಕೊಂಡ ಅಧ್ಯಕ್ಷನಾಗಿ ಬೆಳೆದ ಬಗೆಯಿದು

ಚುನಾವಣೆಗೂ ಕೆಲವು ದಿನಗಳ ಮೊದಲು ಯಾವುದೇ ಪಕ್ಷದ ಸಂಬಂಧವಿಲ್ಲದಂತೆ ಇದ್ದ ಅವರಿಗೆ ಇತರ ರಾಜಕೀಯ ವ್ಯಕ್ತಿಗಳಂತೆ ಸ್ಪಷ್ಟವಾದ ಪರಿಣಿತ ಸಲಹೆಗಾರರ ​​​​ತಂಡವಿರಲಿಲ್ಲ. ಅವರು ಯಾವುದೇ ಪ್ರಚಾರದ ಕಾರ್ಯಕ್ರಮಗಳಿಗೆ ಹಾಜರಾಗಲಿಲ್ಲ. ಯಾವುದೇ ರ್ಯಾಲಿಗಳನ್ನು ನಡೆಸಲಿಲ್ಲ, ಬದಲಿಗೆ ಚುನಾವಣಾ ಪ್ರಚಾರಕ್ಕೆ ಸಾಮಾಜಿಕ ಮಾಧ್ಯಮಬಳನ್ನು ಬಳಸಿಯೇ ಜನರನ್ನು ತಲುಪಿದರು. ವೋಟು ಗಿಟ್ಟಿಸಿಕೊಂಡರು. ಚುನಾವಣಾ ಪ್ರಚಾರದಲ್ಲಿ ಹೆಚ್ಚಾಗಿ ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಪೋಸ್ಟ್‌ ಮತ್ತು ದೂರದರ್ಶನದಲ್ಲಿ ಕಾಣಿಸಿಕೊಂಡ ಅವೆರು ಚುನಾವಣೆಯಲ್ಲಿ ಸುಲಭವಾಗಿ ವಿಜಯದ ನಗು ಬೀರಿದರು.

ಝೆಲೆನ್ಸ್ಕಿ ಉಕ್ರೇನಿಯನ್ ವಾಸ್ತುಶಿಲ್ಪಿ ಮತ್ತು ಚಿತ್ರಕಥೆಗಾರ ಒಲೆನಾ ವೊಲೊಡಿಮಿರಿವ್ನಾ ಝೆಲೆನ್ಸ್ಕಾ ಅವರನ್ನು ವಿವಾಹವಾದರು. ಈ ದಂಪತಿಗೆ ಒಲೆಕ್ಸಾಂಡ್ರಾ ಮತ್ತು ಕೈರಿಲೊ. ಎಂಬ ಇಬ್ಬರು ಮಕ್ಕಳಿದ್ದಾರೆ.

ತಮ್ಮ ದೇಶದ ಮೇಲಿನ ಅಪಾಯವನ್ನು ಯುದ್ಧಭೂಮಿ ಮತ್ತು ರಾಜತಾಂತ್ರಿಕವಾಗಿ ವೊಲೊಡಿಮಿರ್ ಝೆಲೆನ್ಸ್ಕಿ ಹೇಗೆ ಎದುರಿಸುತ್ತಾರೆ ಎಂದು ಕಾದುನೋಡಬೇಕಷ್ಟೇ.

ಇದನ್ನೂ ಓದಿ: Russia vs Ukraine War : ರಷ್ಯಾ ಉಕ್ರೇನ್ ಯುದ್ಧ: ಭಾರತೀಯರ ಮೇಲೆ ಏನೇನು ಪರಿಣಾಮವಾಗಲಿದೆ?

(Volodymyr Zelenskyy Biography know comedy actor turned president)

Comments are closed.