KGF-2 actress Raveena Tandon : ಕೆಜಿಎಫ್-2 ನಟಿಗೆ ಪ್ರಧಾನಿ ಕಾರ್ಯಾಲಯದಿಂದ ಪತ್ರ : ಮೋದಿ ಪತ್ರದಲ್ಲೇನಿದೆ ಗೊತ್ತಾ?

ಕೆಲದಿನಗಳ ಹಿಂದೆಯಷ್ಟೇ ಕೆಜಿಎಫ್-2 ಚಿತ್ರತಂಡಕ್ಕೆ ಮೋದಿ ಪತ್ರ ಬರೆದು ಕೆಜಿಎಫ್-2 ಸಿನಿಮಾದ ಅಪ್ಡೇಟ್‌ ಮಾಹಿತಿ ಕೇಳಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಅದು ಅಭಿಮಾನಿಗಳು ಸೃಷ್ಟಿಸಿದ ಫೇಕ್ ಸುದ್ದಿ ಎಂಬುದು ಬಳಿಕ ಸಾಬೀತಾಗಿತ್ತು. ಆದರೇ ಈಗ ನಿಜವಾಗಿಯೂ ಪ್ರಧಾನಿ ಮೋದಿ ಕಚೇರಿಯಿಂದ ಕೆಜಿಎಫ್-2 ಚಿತ್ರತಂಡಕ್ಕೆ ಪತ್ರ ಬಂದಿದೆ. ಕೆಜಿಎಫ್-2 ಚಿತ್ರದ ನಟಿ ರವೀನಾ ಟಂಡನ್ ಗೆ (KGF-2 actress Raveena Tandon) ಪ್ರಧಾನಿ ನರೇಂದ್ರ ಮೋದಿ ಕಚೇರಿಯಿಂದ ಪತ್ರ ಬಂದಿದೆ.

ಇದು ಅಸಲಿ ಪತ್ರ. ಆದರೆ ಈ ಪತ್ರ ಬಂದಿರೋದು ಕೆಜಿಎಫ್-2 ಅಪ್ಡೇಟ್ ಮಾಹಿತಿ ಕೇಳೋದಕ್ಕಲ್ಲ.‌ಬದಲಾಗಿ ಸಾಂತ್ವನ ಹೇಳೋದಿಕ್ಕೆ. ಹೌದು, ಕೆಜಿಎಫ್-2 ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿರೋ ರವೀನಾ ಟಂಡನ್ ಗೆ ಮೋದಿ ಕಚೇರಿಯಿಂದ ಪತ್ರ ಬಂದಿದೆ.

entertainment-india-news-pm-narendra-modi-letter-to-kgf-2-actress-raveena-tandon
ಪ್ರಧಾನಿ ನರೇಂದ್ರ ಮೋದಿ

ಇತ್ತೀಚಿಗಷ್ಟೇ ನಟಿ ರವೀನಾ ಟಂಡನ್ ತಂದೆ ರವಿ ಟಂಡನ್ ಫೆ.11 ರಂದು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ನಟಿ ರವೀನಾ ಟಂಡನ್ ಹಾಗೂ ಕುಟುಂಬದವರಿಗೆ ಪ್ರಧಾನಿ ನರೇಂದ್ರ ಮೋದಿ ಸಾಂತ್ವನ ಹೇಳಿ ಪತ್ರ ಬರೆದಿದ್ದಾರೆ. ಈ ಪತ್ರವನ್ನು ನಟಿ ರವೀನಾ ಟಂಡನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ಸೋಷಿಯಲ್ ಮೀಡಿಯಾದ ಸೆನ್ಸೆಶನ್ ಸೃಷ್ಟಿಸಿದೆ.

entertainment-india-news-pm-narendra-modi-letter-to-kgf-2-actress-raveena-tandon

ಬಾಲಿವುಡ್ ಬೆಡಗಿ ರವೀನಾ ಟಂಡನ್ ಕೆಜಿಎಫ್ ಸಿನಿಮಾದಲ್ಲಿ ನಟಿಸಿದ್ದರು . ಈಗ ಕೆಜಿಎಫ್-2 ಸಿನಿಮಾದಲ್ಲಿ ಸಿಎಂ ರಮೀಕಾ ಸೇನ್ ಪಾತ್ರದ ಮೂಲಕ ಮಿಂಚಿದ್ದಾರೆ. ಕೆಜಿಎಫ್-2 ದಲ್ಲಿ ರಮೀಕಾ ಸೇನ್ ಬಹಳ ಪ್ರಮುಖ ಪಾತ್ರ ಎನ್ನಲಾಗುತ್ತಿದೆ. ಅಲ್ಲದೇ ಈಗಾಗಲೇ ರಿಲೀಸ್ ಆಗಿರೋ ಕೆಜಿಎಫ್-2 ದ ಒಂದೇ ಒಂದು ಟೀಸರ್ ನಲ್ಲೂ ರಮೀಕಾ ಸೇನ್ ಅಲಿಯಾಸ್ ರವೀನಾ ಟಂಡನ್ ಎಂಟ್ರಿ ವಿಶೇಷವಾಗಿ ಚಿತ್ರೀಕರಣಗೊಂಡಿರೋದು ವ್ಯಕ್ತವಾಗುತ್ತಿದೆ.

ಫೆಬ್ರವರಿಯಲ್ಲಿ ನಟಿ ರವೀನಾ ಟಂಡನ್ ಕೆಜಿಎಫ್-2 ಗೆ ಡಬ್ಬಿಂಗ್ ಮಾಡ್ತಿರೋ ಪೋಟೋಗಳನ್ನು ಹಂಚಿಕೊಂಡಿದ್ದರು. ಕನ್ನಡದಲ್ಲಿ‌ ರವೀನಾ ಟಂಡನ್ ಪಾತ್ರಕ್ಕೆ ರಥಸಪ್ತಮಿ ಸುಂದರಿ ಸುಧಾರಾಣಿ ಧ್ವನಿ ನೀಡಿದ್ದಾರೆ. ಸದ್ಯ ಕೆಜಿಎಫ್-2 ಪ್ರಮೋಶನ್ ಹಂತದಲ್ಲಿದ್ದು ಏಪ್ರಿಲ್ 14 ಬಹುಭಾಷೆಗಳಲ್ಲಿ ಜಗತ್ತಿನ ಒಟ್ಟು 10 ಸಾವಿರ ಥಿಯೇಟರ್ ಹಾಗೂ 2ಸಾವಿರಕ್ಕೂ ಅಧಿಕ ಮಲ್ಟಿಪ್ಲೆಕ್ಸ್ ಗಳಲ್ಲಿ ತೆರೆಗೆ ಬರಲಿದ್ದು, ಕೋಟ್ಯಾಂತರ ಅಭಿಮಾನಿಗಳು ರಾಕಿಂಗ್ ಸ್ಟಾರ್ ಅವತಾರ ನೋಡಲು ಕಾದಿದ್ದಾರೆ.

ಇದನ್ನೂ ಓದಿ : ಅಪ್ಪಾ ಅಪ್ಪಾ ಎಂದ ಮೇಘನಾ ಸರ್ಜಾ ಪುತ್ರ ರಾಯನ್ ಸರ್ಜಾ : ವಿಡಿಯೋ ವೈರಲ್

ಇದನ್ನೂ ಓದಿ : KGF 2 Release : ಕೆಜಿಎಫ್-2 ತೆರೆಗೆ ತರಲು ಸಜ್ಜಾದ ಚಿತ್ರತಂಡ : ಸದ್ಯದಲ್ಲೇ ಬರ್ತಿದೆ ಟ್ರೇಲರ್ ಅಥವಾ ಸಾಂಗ್

( PM Narendra Modi letter to KGF-2 actress Raveena Tandon)

Comments are closed.