keep money according to vastu : ಸಂಪತ್ತು ಹೆಚ್ಚಲು ಇಲ್ಲಿದೆ ವಾಸ್ತು ಟಿಪ್ಸ್​

keep money according to vastu :ಪ್ರತಿಯೊಂದು ಮನೆಯಲ್ಲಿಯೂ ವಾಸ್ತು ಎನ್ನುವುದು ಸರಿಯಾಗಿದ್ದಲ್ಲಿ ಮಾತ್ರ ಅಂತಹ ಮನೆಗಳಲ್ಲಿ ನೆಮ್ಮದಿ ಎನ್ನುವುದು ನೆಲಸಲು ಸಾಧ್ಯ ಎಂಬ ನಂಬಿಕೆಯಿದೆ . ವಾಸ್ತು ನಿಯಮವು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತರುತ್ತದೆ. ಹೀಗಾಗಿ ಅನೇಕರು ವಾಸ್ತು ಶಾಸ್ತ್ರವನ್ನು ನಂಬುತ್ತಾರೆ. ನೀವು ಕೂಡ ವಾಸ್ತು ಶಾಸ್ತ್ರವನ್ನು ನಂಬುತ್ತೀರೇ..? ವಾಸ್ತು ಶಾಸ್ತ್ರವು ಅದೃಷ್ಟವನ್ನು ತರುತ್ತದೆ ಎಂಬ ನಂಬಿಕೆ ನಿಮಗೂ ಇದೆಯೇ..? ಇದೆ ಎಂದಾದರೆ ನಿಮ್ಮ ಸಂಪತ್ತನ್ನು ಹೆಚ್ಚಿಸಲು ಇಲ್ಲಿವೆ ಒಂದಷ್ಟು ಸಲಹೆಗಳು  :

ಎಲ್ಲರ ಮನೆಯಲ್ಲಿಯೂ ಹಣ ಹಾಗೂ ದುಬಾರಿ ಬೆಲೆಯ ವಸ್ತುಗಳು ಇರುತ್ತದೆ. ಆದರೆ ಅನೇಕರು ಹಣ ಹಾಗೂ ಆಭರಣಗಳನ್ನು ಇಡುವಾಗ ಅದಕ್ಕೆ ಸೂಕ್ತ ಜಾಗ ಇರಬೇಕು ಎಂಬುದನ್ನು ನಿರ್ಲಕ್ಷಿಸುತ್ತಾರೆ. ಆದರೆ ಇನ್ನು ಕೆಲವರು ವಾಸ್ತು ನಿಯಮದ ಪ್ರಕಾರವೇ ಬೆಲೆ ಬಾಳುವ ವಸ್ತುಗಳನ್ನು ಇಡುತ್ತಾರೆ. ವಾಸ್ತು ನಿಯಮದ ಪ್ರಕಾರ ನೀವು ಈ ವಸ್ತುಗಳನ್ನು ಇಟ್ಟರೆ ನಿಮ್ಮ ಮನೆಯಲ್ಲಿ ಸಂಪತ್ತಿನ ಹರಿವು ಹೆಚ್ಚಾಗುತ್ತದೆ, ಅದೃಷ್ಟ ಹಾಗೂ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂಬ ನಂಬಿಕೆಯಿದೆ. ನಗದು ಹಣವೇ ಇರಲಿ, ಆಭರಣ ಅಥವಾ ಇನ್ಯಾವುದೇ ಬೆಲೆ ಬಾಳುವ ವಸ್ತುವೇ ಇರಲಿ ಅವುಗಳನ್ನು ಇಡುವಾಗ ಕೆಲವೊಂದು ವಾಸ್ತು ನಿಯಮವನ್ನು ಪಾಲಿಸುವುದು ಉತ್ತಮ.

ಉತ್ತರ ದಿಕ್ಕಿನಲ್ಲಿಡಿ :

ಉತ್ತರ ದಿಕ್ಕನ್ನು ಕುಬೇರ ದಿಕ್ಕು ಎಂದು ಕರೆಯಲಾಗುತ್ತದೆ. ಹೀಗಾಗಿ ನಿಮ್ಮ ಮನೆಯಲ್ಲಿ ಹಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಉತ್ತರ ದಿಕ್ಕಿನಲ್ಲಿ ಇರಿಸುವುದು ಹೆಚ್ಚು ಸೂಕ್ತ. ಇದರಿಂದ ನಿಮ್ಮ ಮನೆಯಲ್ಲಿ ಸಂಪತ್ತಿನ ಹರಿವು ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ.

ದಕ್ಷಿಣ ಕಡೆ ಮುಖ ಒಳ್ಳೆಯದಲ್ಲ :

 ಹಣದ ತಿಜೋರಿಯನ್ನು ಉತ್ತರ ದಿಕ್ಕಿನಲ್ಲಿ ಇಡುವುದು ಉತ್ತಮ ಎಂಬ ನಂಬಿಕೆಯಿದೆ. ಹೀಗಿರುವಾಗ ದಕ್ಷಿಣ ಕಡೆಗೆ ತಿಜೋರಿಯ ಬಾಗಿಲು ಇರುವುದು ಒಳ್ಳೆದಲ್ಲ. ಏಕೆಂದರೆ ದಕ್ಷಿಣ ದಿಕ್ಕಿನಿಂದ ಲಕ್ಷ್ಮೀ ಉತ್ತರ ದಿಕ್ಕಿಗೆ ಹೋಗುತ್ತಾಳೆ ಎಂಬ ನಂಬಿಕೆಯಿದೆ.

ತಿಜೋರಿಯನ್ನು ಪೂರ್ವ ದಿಕ್ಕಿನಲ್ಲಿಡಿ :

ಒಂದು ವೇಳೆ ತಿಜೋರಿಯನ್ನು ನಿಮಗೆ ಉತ್ತರ ದಿಕ್ಕಿನಲ್ಲಿ ಸುರಕ್ಷಿತವಾಗಿ ಇಡುವುದು ಸಾಧ್ಯವಿಲ್ಲ ಎಂದಾದರೆ ನೀವು ಪೂರ್ವ ದಿಕ್ಕಿನಲ್ಲಿ ಇಡಬಹುದು. ಇದು ಕೂಡ ಸಂಪತ್ತನ್ನು ಇಡಲು ಸೂಕ್ತವಾದ ದಿಕ್ಕು ಎಂದು ಪರಿಗಣಿಸಲಾಗಿದೆ.

ಇದನ್ನು ಓದಿ : Mallam Durga Parmeshwari : ತೀರ್ಥಸ್ನಾನ ಮಾಡಿದ್ರೆ ಸಂತಾನ ಭಾಗ್ಯ, ಕಂಕಣ ಭಾಗ್ಯ ಕರುಣಿಸುತ್ತಾಳೆ ಈ ತಾಯಿ

Where to keep money according to vastu, here are some tips

Comments are closed.