World Toilet Day 2022 : ವಿಶ್ವ ಶೌಚಾಲಯ ದಿನ : ಸ್ವಚ್ಛತೆಯ ಕಡೆಗೆ ಒಂದು ಹೆಜ್ಜೆ

ಇಂದು ವಿಶ್ವ ಶೌಚಾಲಯ ದಿನ (World Toilet Day 2022). ಪ್ರತಿ ವರ್ಷ ನೈರ್ಮಲ್ಯ ಮತ್ತು ಸ್ವಚ್ಛತೆಯ (Cleannes and Hygiene) ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜಗತ್ತಿನಾದ್ಯಂತ ವಿಶ್ವ ಶೌಚಾಲಯ ದಿನವನ್ನು ನವೆಂಬರ್‌ 19 ರಂದು ಆಚರಿಸಲಾಗುತ್ತದೆ. ಮೊದಲಿಗೆ ಸಿಂಗಾಪುರವು ಈ ನಿರ್ಣಯವನ್ನು ಮಂಡಿಸಿದ ನಂತರ, 2013 ರಲ್ಲಿ ಯನೈಟೆಡ್‌ ನೇಷನ್ಸ್‌ನ ಜನರಲ್‌ ಅಸೆಂಬ್ಲಿಯು ಅಧಿಕೃತವಾಗಿ ಈ ದಿನವನ್ನು ವಿಶ್ವ ಶೌಚಾಲಯ ದಿನವೆಂದು ಘೋಷಿಸಿದೆ. ಇದಕ್ಕೂ ಮೊದಲು 2001 ನೆವೆಂಬರ್‌ 19 ರಂದು ವಿಶ್ವ ಶೌಚಾಲಯ ಸಂಸ್ಥೆ ಅಸ್ತಿತ್ವಕ್ಕೆ ಬಂದಿತ್ತು.

ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವ ಸಲುವಾಗಿ ಸ್ವಚ್ಛತೆ ಮತ್ತು ನೈರ್ಮಲ್ಯದ ಅಗತ್ಯತೆಗಳ ಬಗ್ಗೆ ಒತ್ತಿಹೇಳುವುದು ಅತಿ ಮಹತ್ವವಾಗಿದೆ. ಸರಿಯಾದ ನೈರ್ಮಲ್ಯದ ಕಾಳಜಿ ಮತ್ತು ವ್ಯವಸ್ಥೆಗಳಿಲ್ಲದಿರುವುದರಿಂದ ಮಾನವ ತ್ಯಾಜ್ಯ ನದಿ, ಸರೋವರ ಸೇರುತ್ತಿವೆ. ಜಲ ಸಂಪನ್ಮೂಲಗಳು ಕಲುಷಿತಗೊಳ್ಳುತ್ತಿವೆ. ಭಾರತದಲ್ಲಿ ನೈರ್ಮಲ್ಯದ ಮೂಲಸೌಕರ್ಯಗಳು ಇನ್ನೂ ಸರಿಯಾಗಿ ಎಲ್ಲ ಕಡೆಯಲ್ಲಿಯೂ ಇಲ್ಲ. ಇದರಿಂದಾಗಿ ಜಲಮೂಲಗಳು ಕಲುಷಿತಗೊಂಡು, ಹಲವಾರು ರೋಗಗಳಿಗೆ ದೊಡ್ಡ ಕಾರಣವಾಗಿದೆ. ಪ್ರತಿಯೊಬ್ಬರೂ ಶೌಚಾಲಯವನ್ನು ಸಮರ್ಪಕವಾಗಿ ಬಳಸುವಂತೆ ಜಾಗೃತಿ ಮೂಡಿಸುವುದೇ ಈ ದಿನದ ಗುರಿಯಾಗಿದೆ. ಯುಎನ್‌ ವೆಬ್‌ಸೈಟ್‌, ನೈರ್ಮಲ್ಯಕ್ಕೆ ತುರ್ತು ಕ್ರಮದ ಅವಶ್ಯಕತೆಯಿದೆ. 2030 ರ ವೇಳೆಗೆ ಎಲ್ಲರಿಗೂ ಸುರಕ್ಷಿತ ಶೌಚಾಲಯವಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಗುರಿ ಹೊಂದಿದೆ. ಅದಕ್ಕೆ ಕೇವಲ ಎಂಟು ವರ್ಷಗಳು ಉಳಿದಿವೆ. ಈ ಭರವಸೆಯನ್ನು ಪೂರೈಸಲು ಪ್ರಪಂಚವು ನಾಲ್ಕು ಪಟ್ಟು ವೇಗವಾಗಿ ಕೆಲಸ ಮಾಡಬೇಕಾಗಿದೆ ಎಂದು ಬರೆದುಕೊಂಡಿದೆ.

ನೈರ್ಮಲ್ಯ ಮತ್ತು ಭಾರತ:
ಪ್ರಧಾನಿ ಮೋದಿಯವರ ಪ್ರಮುಖ ಕಾರ್ಯಕ್ರಮವಾದ ‘ಸ್ವಚ್ಛ ಭಾರತ್‌ ಮಿಷನ್‌’ ಅಡಿಯಲ್ಲಿ ರಾಷ್ಟ್ರವು ಸಾರ್ವತ್ರಿಕ ನೈರ್ಮಲ್ಯ ಸಾಧಿಸುವತ್ತ ದಾಪುಗಾಲು ಹಾಕಿದೆ. ಅಕ್ಟೋಬರ್‌ 2, 2019 ರಲ್ಲಿ ಭಾರತದ ಎಲ್ಲಾ ಗ್ರಾಮಗಳು, ಜಿಲ್ಲೆ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಬಯಲು ಮಲವಿಸರ್ಜನೆ ಮುಕ್ತ ಎಂದು ಘೋಷಿಸಿಕೊಂಡಿದೆ. ಇದು ಸ್ವಚ್ಛತೆಯ ಬಗ್ಗೆ ಜನರಲ್ಲಿ ಮೊಟ್ಟ ಮೊದಲಿಗೆ ಜಾಗೃತಿಯನ್ನು ಮೂಡಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150 ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಆಗಿರುವುದು ವಿಶೇಷವಾಗಿದೆ.

ಇದನ್ನೂ ಓದಿ : Weight Loss Tips : ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕೆ ? ಇಲ್ಲಿದೆ ಸುಲಭ ಪರಿಹಾರ

ಇದನ್ನೂ ಓದಿ : Winter Care : ಚಳಿಗಾಲದಲ್ಲಿ ನಿಮ್ಮ ಮಕ್ಕಳಿಗೆ ಇವುಗಳನ್ನು ಕೊಡಿ; ರೋಗನಿರೋಧಕ ಶಕ್ತಿ ಹೆಚ್ಚಿಸಿ

(World Toilet Day 2022 significance, history, and more)

Comments are closed.