Stepfather Arrest: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿದ ಮಲತಂದೆ ಅರೆಸ್ಟ್

ಬಂಟ್ವಾಳ: (Stepfather Arrest) ಅಪ್ರಾಪ್ತ ಮಗಳ ಮೇಲೆ ಮಲತಂದೆಯೇ ಅತ್ಯಾಚಾರ ನಡೆಸಿ ಗರ್ಭವತಿಯನ್ನಾಗಿಸಿದ ಘಟನೆ ಬಂಟ್ವಾಳದ ತುಂಬೆಯಲ್ಲಿ ನಡೆದಿದೆ. ಬಂಟ್ವಾಳ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಲತಂದೆ ಪೊಲೀಸರ ವಶದಲ್ಲಿದ್ದಾರೆ.

ಎಲ್ಲಾ ಕಡೆಗಳಲ್ಲೂ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಂಬಂಧಿಕರಿಂದಲೇ ಮಕ್ಕಳು ಅತ್ಯಾಚಾರಕ್ಕೊಳಗಾಗುತ್ತಿರುವುದು ವಿಷಾದನೀಯ. ದಿನೇ ದಿನೇ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕರಾವಳಿ ಬಾಗದಲ್ಲಿಯೂ ಕೂಡ ಇಂತಹದೇ ಒಂದು ಘಟನೆ ನಡೆದಿದೆ. ಅಪ್ರಾಪ್ತ ವಯಸ್ಸಿನ ಮಗಳ ಮೇಲೆಯೇ ಮಲತಂದೆ(Stepfather Arrest) ಅತ್ಯಾಚಾರ ನಡೆಸಿ ಆಕೆ ಗರ್ಭವತಿಯಾದ ಘಟನೆಯೊಂದು ಬಂಟ್ವಾಳದಲ್ಲಿ ನಡೆದಿದೆ.

ತುಂಬೆ ರಾಮ ನಿವಾಸದ ನಿವಾಸಿಯಾಗಿರುವ ವೆಂಕಟೇಶ ಕಾರಂತ ಎನ್ನುವಾತನೇ ಮಗಳ ಮೇಲೆ ಅತ್ಯಾಚಾರ ನಡೆಸಿ ಗರ್ಭವತಿಯನ್ನಾಗಿಸಿದ ಆರೋಪಿ. ಈತ ತುಂಬೆ ಗ್ರಾಮದಲ್ಲಿ ಪುರೋಹಿತನಾಗಿದ್ದು, ಮಗಳ ಮೇಲೆಯೇ ಅತ್ಯಾಚಾರ ನಡೆಸಿದ್ದಾನೆ. ಕಳೆದ ನಾಲ್ಕು ತಿಂಗಳಿಂದ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದಾನೆ. ಇದರ ಪರಿಣಾಮ ಬಾಲಕಿ ಗರ್ಭವತಿಯಾಗಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ : Forest Rape Case: ಅತ್ಯಾಚಾರ ಪ್ರಕರಣ: ಸ್ನೇಹಿತನ ನೆರವಿನಿಂದ ಬದುಕುಳಿದ ಯುವತಿ

ಇದನ್ನೂ ಓದಿ : Sexual harassment: 17 ವರ್ಷದ ಹುಡುಗಿಯ ಮೇಲೆ ತಂದೆ, ಚಿಕ್ಕಪ್ಪ ಹಾಗೂ ಅಜ್ಜನಿಂದಲೇ ಅತ್ಯಾಚಾರ

ಇದನ್ನೂ ಓದಿ : Sexual assault against minor: ಉಡುಪಿ : ಬಾಲಕಿಗೆ ಲೈಂಗಿಕ ದೌರ್ಜನ್ಯ, ಅಪರಾಧಿಗೆ 10 ವರ್ಷ ಜೈಲು, 20 ಸಾವಿರ ರೂ. ದಂಡ

ಅಪ್ರಾಪ್ತ ಬಾಲಕಿಯ ತಂದೆ ಅಪಘಾತದಲ್ಲಿ ಸಾವನ್ನಪ್ಪಿದ ನಂತರ ಆಕೆಯ ತಾಯಿ ಎರಡನೇ ಮದುವೆಯಾಗಿದ್ದು, ವೆಂಕಟೇಶ ಕಾರಂತ ಅವರು ಬಾಲಕಿಗೆ ಮಲತಂದೆಯಾಗಬೇಕು ಎಂಬ ಮಾಹಿತಿಗಳು ಲಭ್ಯವಾಗಿದೆ. ಅಪ್ರಾಪ್ತ ಬಾಲಕಿ ಕೂಡ ತಾಯಿ ಹಾಗೂ ಮಲತಂದೆ ಜೊತೆಯಲ್ಲಿ ವಾಸವಾಗಿದ್ದಳು. ಈ ಸಮಯದಲ್ಲಿಯೇ ಆಕೆಯ ಮೇಲೆ ಮಲತಂದೆ ವೆಂಕಟೇಶ್‌ ಕಾರಂತ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.

ಈ ಕುರಿತು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ವೆಂಕಟೇಶ್‌ ಕಾರಂತ ಅವರನ್ನು ಪೊಲೀಸರು ಬಂದಿಸಿದ್ದಾರೆ.

(Stepfather Arrest) An incident where a minor daughter was raped by her stepfather and made her pregnant took place in Tumbe, Bantwala. The incident took place in Bantwal police station and the stepfather is in police custody.

Comments are closed.