Dalai Lama: ದಲಾಯಿ ಲಾಮಾ ಅವರಿಗೆ ಯಾಕಷ್ಟು ಗೌರವ ಗೊತ್ತಾ? ಅವರು ಈ ದೇವರ ಅವತಾರವಂತೆ!

ದಲಾಯಿ ಲಾಮಾ ಟಿಬೇಟಿಯನ್ ಸಂಸ್ಕೃತಿಯ ಮೂರ್ತ ರೂಪ, ಟಿಬೇಟಿಯನ್ ಧರ್ಮಗುರುವಾದ ಶ್ರೀ ದಲಾಯಿಲಾಮಾ ಅವರು ಈಗ 90 ವರ್ಷ ವಯೋಮಾನದವರು. ಆದರೂ ಅದೇ ತೇಜಸ್ಸು ಹಾಗೂ ಚರ್ಯೆಯಿಂದ ಜಾಗತಿಕ ಶಾಂತಿಗಾಗಿ ತಮ್ಮ ಬೋಧನೆ ಹಾಗೂ ಬದುಕನ್ನು ಮೀಸಲಿಟ್ಟಿದ್ದಾರೆ.
ಬೌದ್ಧ ಧರ್ಮದ ಪರಮೋಚ್ಛ ಗುರು ದಲಾಯಿ ಲಾಮಾ ಮುಂಡಗೋಡಿಗೆ
ಟಿಬೆಟಿಯನ್ ಬೌದ್ಧ ಧರ್ಮದ ಪರಮೋಚ್ಛ ಗುರುಗಳಾದ ಪರಮಪೂಜ್ಯ 14ನೇ ದಲೈ ಲಾಮಾ ಅವರು ಆರು ವರ್ಷದ ನಂತರ ಮುಂಡಗೋಡಗೆ ಆಗಮಿಸಿದರು. ಶುಕ್ರವಾರ ಬೆಳಿಗ್ಗೆ ಡ್ರೀಪುಂಗ್ ತಾಶಿ ಗೋಮಾಂಗ ಬೌದ್ಧ ಮಂದಿರಕ್ಕೆ ಗುರುಗಳು ಆಗಮಿಸಿದಾಗ, ಅವರಿಗೆ ಅತ್ಯಂತ ಸಡಗರ, ಭಕ್ತಿ ಮತ್ತು ಸಾಂಪ್ರದಾಯಿಕ ಗೌರವದೊಂದಿಗೆ ಟಿಬೆಟಿಯನ್ ಸಮುದಾಯವು ಅಭೂತಪೂರ್ವ ಪ್ರೀತಿ ಮತ್ತು ಗೌರವದೊಂದಿಗೆ ಸ್ವಾಗತಿಸಲಾಯಿತು ಇದೇ ಸಂದರ್ಭದಲ್ಲಿ ಉತ್ತರಕನ್ನಡ ಜಿಲ್ಲಾಡಳಿತದಿಂದ ಆದರದಿಂದ ಸ್ವಾಗತಿಸಲಾಯಿತು.
ಮುಂಡಗೋಡಲ್ಲಿ ಟಿಬೇಟಿಯನ್ನರ ಸಂಭ್ರಮ
ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ದಲೈಲಾಮಾ ಅವರು ಮುಂಡಗೋಡಿಗೆ ರಸ್ತೆ ಮಾರ್ಗವಾಗಿ ಮುಂಡಗೋಡಿಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಅಮ್ಮಾಜಿ ಕೆರೆಯಿಂದ ೬ ನಂಬರ್ ಕ್ಯಾಂಪ್ ರಸ್ತೆಯ ಇಕ್ಕೆಲಗಳಲ್ಲೂ ಬೌದ್ಧ ಭಿಕ್ಕುಗಳು ಸಾವಿರಾರು ಟಿಬೆಟಿಯನ್ ಪ್ರಮುಖರು ಹಾಗೆಯೇ ಟಿಬೆಟಿಯನ್ ಮಹಿಳೆಯರು ಮತ್ತು ಮಕ್ಕಳು, ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ಬೆಳಗಿನ ಜಾವದಿಂದಲೇ ರಸ್ತೆಯ ಪಕ್ಕದಲ್ಲಿ ನಿಂತು ತಮ್ಮ ಆರಾಧ್ಯದೈವರನ್ನು ಕಣ್ಣುತುಂಬಿಕೊಳ್ಳಲು ಪಾವನರಾಗಲು ಸಾಲುಗಟ್ಟಿ ಕಾತುರದಿಂದ ಕಾಯುತ್ತಿದ್ದರು. ದಲಾಯಿ ಲಾಮಾ ರವರ ವಾಹನ ಹೋಗುತ್ತಿದ್ದಂತೆ ಅವರ ಅಪಾರ ಭಕ್ತರು ಅವರ ವಾಹನ ಹೋದ ಭೂಮಿಯನ್ನು ನಮ್ಮಸ್ಕರಿಸುತ್ತಿರುವ ಭಾವುಕ ಸನ್ನಿವೇಶ ಕಂಡು ಬಂದಿತು.
ಇದನ್ನೂ ಓದಿ: ಅಕ್ಕ-ತಂಗಿಯಂದ್ರಾ ಗಮನಿಸಿ, ಇಲ್ಲಿದೆ ಸ್ವ-ಉದ್ಯೋಗಕ್ಕೆ ದೊಡ್ಡ ಅವಕಾಶ-https://kannada.newsnext.live/agriculture/karnataka-new-business-scheme/
ದಲಾಯಿ ಲಾಮಾ ಈಶ್ವರನೇ?
ಇದೆಲ್ಲಾ ಹೊರತು ಪಡಸಿ ನೋಡುವುದಾದರೆ ಇದು ದಲಾಯಿ ಲಾಮಾ ಅವರನ್ನು ಬೌದ್ಧರು ಅವಲೋಕಿತೇಶ್ವರ ಎಂದು ಕರೆಯುತ್ತಾರೆ. ಯಾರು ಈ ಅವಲೋಕಿತೇಶ್ವರ ಎಂದು ನೋಡುವುದಾದರೆ ಇವರು ಭೋದಿಸತ್ವನ ಒಂದು ರೂಪ, ಶಿವನ ಸ್ವರೂಪ ಎಂದು ಪರಿಗಣಿಸಲಾಗಿದೆ. ಹಿಂದೂಗಳು ಅವಲೋಕಿತೇಶ್ವರನನ್ನು ಶಿವನ ಅವತಾರ ಎಂದು ಹೇಳುತ್ತಾರೆ. ಹಾಗೆಯೇ ಬೌದ್ಧರೂ ಕೂಡ ಶಿವನನ್ನು ಅವಲೋಕಿತೇಶ್ವರ ಎಂದು ನಂಬುತ್ತಾರೆ! ಈಗ ಟಿಬೇಟಿಯನ್ನರು ಶಿವನ ಅವತಾರದ ಅವತಾರ ಎಂದು ದಲಾಯಿ ಲಾಮಾ ಅವರನ್ನು ನಂಬುತ್ತಾರೆ!
ಇಂಜಿನಿಯರ್ ಆಗಬೇಕಾದವರು ಧರ್ಮಗುರುವಾದರು
ಬಾಲ್ಯದಲ್ಲಿ ಇಂಜಿನಿಯರ್ ಆಗಬೇಕೆಂದುಕೊಂಡಿದ್ದ ದಲಾಯಿ ಲಾಮಾ ಅವರು ಈಗಲೂ ಕೂಡ ಕ್ರಿಯಾತ್ಮಕವಾಗಿ ಕ್ವಾಟಂ ಫಿಸಿಕ್ಸ್ ನ ವಿಷಯಗಳ ಸಂವಾದದಲ್ಲಿ ಭಾಗವಹಿಸುತ್ತಾರೆ. ಪರಮಪೂಜ್ಯರು 6 ಖಂಡಗಳಲ್ಲಿ ಹರಡಿರುವ 67 ಕ್ಕೂ ಹೆಚ್ಚು ದೇಶಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಶಾಂತಿ, ಅಹಿಂಸೆ, ಅಂತರ-ಧರ್ಮೀಯ ಸಹಾನುಭೂತಿ, ಸಾರ್ವತ್ರಿಕ ಜವಾಬ್ದಾರಿ ಮತ್ತು ಕರುಣೆಯ ಸಂದೇಶವನ್ನು ಗುರುತಿಸಿ ನೋಬೇಲ್ ಸೇರಿದಂತೆ ಅವರು 150 ಕ್ಕೂ ಹೆಚ್ಚು ಪ್ರಶಸ್ತಿಗಳು, ಗೌರವ ಡಾಕ್ಟರೇಟ್ಗಳು, ಬಹುಮಾನಗಳು ಇತ್ಯಾದಿಗಳನ್ನು ಪಡೆದಿದ್ದಾರೆ. ಅವರು 110 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಇನ್ನೂ ದಲಾಯಿಲಾಮಾ ಅವರು ಸುಮಾರು 45 ದಿನಗಳಿಗೂ ಹೆಚ್ಚು ಕಾಲ ಮುಂಡಗೋಡಲ್ಲಿ ತಂಗಲಿದ್ದು ಅನೇಕ ಭಾರತೀಯ ಗಣ್ಯರು ಅವರನ್ನು ಈ ಕಾಲಾವಧಿಯಲ್ಲಿ ಭೇಟಿ ಆಗುವ ಸಾಧ್ಯತೆಯಿದೆ.



