Karungali Mala: ಯಾರಾದ್ರೂ ಗಿಫ್ಟ್‌ ಕೊಟ್ರು ಅಂತ ಈ ಮಾಲೆ ಹಾಕೋಬೇಡಿ! ಅಪಾಯ ಎದುರಾದೀತು!!

ಈಗ ಟ್ರೆಂಡಲ್ಲಿರೋ ವಿಷಯಗಳಲ್ಲಿ ಕರುಂಗಲಿ ಮಾಲೆಯೂ ಒಂದು! ಯಾರದ್ದೇ ಕುತ್ತಿಗೆ ನೋಡಿದ್ರೂ ಕೂಡ ಈಗ ಕರುಂಗಲಿ ಕಾಮನ್ ಆಗಿಬಿಟ್ಟಿದೆ. ಆದರೆ ಈ ಮಾಲೆ ಧರಿಸಲು ಕೆಲ ನಿಬಂಧನೆಗಳೂ ಇವೆ ಹಾಗೆಯೇ ಕೆಲವೊಬ್ಬರಿಗಂತೂ ಈ ಮಾಲೆ ನಿಷಿದ್ಧ! ಹಾಗಾದರೆ ಯಾರಾದರೂ ಗಿಫ್ಟ್ ಕೊಟ್ರು ಅಂತ ಕರುಂಗಲಿ ಮಾಲೆ ಧರಿಸೋಕೆ ಮುಂಚೆ ಈ ಎಲ್ಲಾ ನಿಯಮಗಳು ನೆನಪಿರಲಿ. ಇಲ್ಲ ಆಪತ್ತು ನಿಕ್ಕಿ!

ಕರುಂಗಲಿ ಮಾಲೆಯ ಹಿನ್ನಲೆ, ರಾಮಾಯಣದಲ್ಲೂ ಇದೆ ಈ ವಿಷಯ

ಹೌದು, ಕರುಂಗಲಿ ಮರ ಅಥವಾ ಕರಿಮರದ ಸಂಸ್ಕೃತ ಹೆಸರು ತಿಂಡುಕಾ ಎಂದು. ಇದನ್ನು ಅಗ್ನಿ ಪುರಾಣ, ರಾಮಾಯಣದಲ್ಲಿ ಪರಮಶ್ರೇಷ್ಠ ಎಂದು ಉಲ್ಲೇಖಿಸಲಾಗಿದೆ. ಚಿತ್ರಕೂಟದಲ್ಲಿ ಇರುವ ತಿಂಡುಕಾ ಮರದ ಸೌಂದರ್ಯದ ಬಗ್ಗೆ ರಾಮ‌ ಸೀತೆಗೆ ವರ್ಣಿಸುವ ನಿದರ್ಶನವಿದೆ. ಅಗ್ನಿಪುರಾಣದಲ್ಲಿ ತಿಂಡುಕಾ ಮರದಿಂದ ದೇಗುಲಗಳ ಆವಯವಗಳನ್ನು ನಿರ್ಮಿಸಬೇಕೆಂಬ ಉಲ್ಲೇಖವಿದೆ. ಹಾಗೆಯೇ ಕೇರಳದ ತಂತ್ರ ಸಂಬಂಧಿ ಗ್ರಂಥಗಳು ಇದೇ ಮರದಿಂದ ಕಾಳಿ ಹಾಗೂ ಸಪ್ತ ಮಾತೃಕೆಯರ ಬಿಂಬ(ಮುಖ) ರಚಿಸಬೇಕು ಎಂಬ ನಿಯಮ ಹೇಳಿವೆ. ಸ್ಕಂದನ ಆಯುಧವೂ ಇದೇ ಮರದಿಂದ ಆದದ್ದು. ಇಂತಹ ಪರಮ ಪವಿತ್ರ ಕರುಂಗಲಿಯ ಮಾಲೆ ಧರಿಸಲು ಇರುವ ನಿಯಮಗಳು ಹೀಗಿವೆ‌

ಇದನ್ನೂ ಓದಿ: ಡಿಸೆಂಬರ್‌ 31ರೊಳಗೆ ಈ ಕೆಲಸ ಮಾಡದಿದ್ದರೆ ಪಾನ್‌ ಕಾರ್ಡ್‌ ನಿಷ್ಕ್ರಿಯ!-https://kannada.newsnext.live/business/pan-aadhaar-linking-deadline-by-december-31st/

  1. ಮೊದಲ ಬಾರಿಗೆ ಧರಿಸುವ ಮೊದಲು ಮಾಲೆಯನ್ನು ಕನಿಷ್ಠ 12 ಗಂಟೆಗಳ ಕಾಲ ಶುದ್ಧ ಹಾಲು ಅಥವಾ ಪನ್ನೀರಿನಲ್ಲಿ ನೆನೆಸಿಡಬೇಕು. ನಂತರ ಅದನ್ನು ಶುದ್ಧ ನೀರಿನಲ್ಲಿ ತೊಳೆದು ಒಣಗಿಸಬೇಕು.
  2. ಮಾಲೆಯನ್ನು ಪೂಜಾ ಕೋಣೆಯಲ್ಲಿ ಇರಿಸಿ ದೇವರ ಮಂತ್ರವನ್ನು 108 ಬಾರಿ ಜಪಿಸಿ ಶಕ್ತಿಯುತಗೊಳಿಸಬೇಕು. ಶಿವ ಹಾಗೂ ಸ್ಕಂದನ ಜಪವೇ ಪ್ರಮುಖ ಎಂಬುದು ಗಮನಿಸಿ.
    ಈ ಮಾಲೆಯನ್ನು ಧರಿಸಲು ಮಂಗಳವಾರ ಅಥವಾ ಶುಕ್ರವಾರ ಅತ್ಯಂತ ಶುಭದಾಯಕವಾದ ದಿನಗಳಾಗಿವೆ.
  3. ಮಾಲೆ ಧರಿಸಿದವರು ಮಾಂಸಾಹಾರ ಮತ್ತು ಮದ್ಯಪಾನದಿಂದ ದೂರವಿರುವುದು ಉತ್ತಮ.
  4. ಸ್ನಾನ ಮಾಡುವಾಗ ಮತ್ತು ರಾತ್ರಿ ಮಲಗುವಾಗ ಮಾಲೆಯನ್ನು ತೆಗೆದಿರಿಸಬೇಕು.
  5. ಮನೆಯಲ್ಲಿ ಸೂತಕವಿದ್ದಾಗ ಅಥವಾ ಅಂತ್ಯಕ್ರಿಯೆಗಳಿಗೆ ಹೋಗುವಾಗ ಮಾಲೆಯನ್ನು ಧರಿಸಬಾರದು.
  6. ಮಹಿಳೆಯರು ಡೇಟ್ ಬಂದಾಗ ಇದನ್ನು ಧರಿಸುವುದು ನಿಷಿದ್ಧ
  7. ಕರುಂಗಲಿ ಮಾಲೆಯು ಅದನ್ನು ಧರಿಸಿದವರ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಆದ್ದರಿಂದ ನಿಮ್ಮ ಮಾಲೆಯನ್ನು ಬೇರೆಯವರಿಗೆ ನೀಡಬಾರದು ಅಥವಾ ಬೇರೆಯವರ ಮಾಲೆಯನ್ನು ನೀವು ಧರಿಸಬಾರದು.
  8. ಮಾಲೆಯನ್ನು ಯಾವುದೇ ರಾಸಾಯನಿಕ ಅಥವಾ ಸೋಪಿನಿಂದ ತೊಳೆಯಬಾರದು. ಕಟ್ಟಿಗೆ ತುಂಡುಗಳ ಮಾಲೆಯಾದ್ದರಿಂದ ನೀರಿನಲ್ಲಿ ಹೆಚ್ಚು ನೆನೆದರೆ ಹಾನಿಯಾಗಬಹುದು.
    ಮಾಲೆಯನ್ನು ಧರಿಸದ ಸಮಯದಲ್ಲಿ ಅದನ್ನು ಪೂಜಾ ಕೋಣೆಯಲ್ಲಿ ಅಥವಾ ಪವಿತ್ರವಾದ ಚೀಲದಲ್ಲಿ ಇರಿಸಬೇಕು
  9. 6 ವರ್ಷದೊಳಗಿನ ಮಕ್ಕಳಿಗೆ ಈ ಮಾಲೆಯನ್ನು ಧರಿಸಲು ಕೊಡಲೇಬಾರದು!

ಕರುಂಗಲಿ ಮಾಲೆ ಧರಿಸಿದಾಗ ಮನಸ್ಸಿನಲ್ಲಿ ಉಂಟಾಗುವ ಭಾವಗಳನ್ನು ಹಾಗೆಯೇ ಅದು ಹರಡುತ್ತದೆ ಎಂದು ಹೇಳಲಾಗುವ ಪ್ರಭಾವಲಯವನ್ನು ಚಿಕ್ಕ ಮಕ್ಕಳು ತಡೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಈ ನಿಮಯ ರೂಪಿಸಲಾಗಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories