Vastu Tips : ಮನೆಯ ಬಾಗಿಲು ಈ ದಿಕ್ಕಿನಲ್ಲಿದ್ದರೆ ತಕ್ಷಣ ಬದಲಾಯಿಸಿ, ಇಲ್ಲದಿದ್ರೆ ದಾರಿದ್ರ್ಯ ಗ್ಯಾರಂಟಿ
ಮನೆ ಕಟ್ಟುವುದು ಪ್ರತಿಯೊಬ್ಬರ ಕನಸು. ವಾಸಿಸುವ ಮನೆ ಕೇವಲ ಇಟ್ಟಿಗೆ, ಗಾರೆಗಳಿಂದ ಕಟ್ಟಿದ ಕಟ್ಟಡವಲ್ಲ. ಅದು ನಕಾರಾತ್ಮಕ ಹಾಗೂ ಸಕಾರಾತ್ಮಕ ಶಕ್ತಿಗಳ ಸಂಗಮ. ಮನೆಯಲ್ಲಿ ಶಾಂತಿ, ನೆಮ್ಮದಿ, ಸುಖ ನೆಲೆಸಬೇಕಾದ್ರೆ ವಾಸ್ತು ನಿಯಮಗಳನ್ನು ಪಾಲನೆ ಮಾಡಬೇಕಾಗಿರುವುದು ಕಡ್ಡಾಯ.

Vastu Tips : ಮನೆ ಕಟ್ಟುವುದು ಪ್ರತಿಯೊಬ್ಬರ ಕನಸು. ವಾಸಿಸುವ ಮನೆ ಕೇವಲ ಇಟ್ಟಿಗೆ, ಗಾರೆಗಳಿಂದ ಕಟ್ಟಿದ ಕಟ್ಟಡವಲ್ಲ. ಅದು ನಕಾರಾತ್ಮಕ ಹಾಗೂ ಸಕಾರಾತ್ಮಕ ಶಕ್ತಿಗಳ ಸಂಗಮ. ಮನೆಯಲ್ಲಿ ಶಾಂತಿ, ನೆಮ್ಮದಿ, ಸುಖ ನೆಲೆಸಬೇಕಾದ್ರೆ ವಾಸ್ತು ನಿಯಮಗಳನ್ನು ಪಾಲನೆ ಮಾಡಬೇಕಾಗಿರುವುದು ಕಡ್ಡಾಯ. ಅದರಲ್ಲೂ ವಿಶೇಷವಾಗಿ ಮನೆಯ ಮುಖ್ಯ ಬಾಗಿಲು (Main Entrance) ಯಾವ ದಿಕ್ಕಿನಲ್ಲಿದೆ ಎಂಬುದು ಇಡೀ ಕುಟುಂಬದ ಭವಿಷ್ಯವನ್ನು ನಿರ್ಧರಿಸುತ್ತದೆ. ತಪ್ಪು ದಿಕ್ಕಿನಲ್ಲಿರುವ ಮುಖ್ಯ ದ್ವಾರವು ಆರ್ಥಿಕ ನಷ್ಟ ಮತ್ತು ನಿರಂತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾದರೆ ವಾಸ್ತು ಪ್ರಕಾರ ಬಾಗಿಲು ಎಲ್ಲಿರಬೇಕು ? ಇಲ್ಲಿದೆ ಸಂಪೂರ್ಣ ಮಾಹಿತಿ.
ಮನೆಯ ಮುಖ್ಯ ದ್ವಾರ ಅತ್ಯುತ್ತಮ ದಿಕ್ಕುಗಳು ಯಾವುವು ?
ಮನೆಯ ವಾಸ್ತುವಿನಲ್ಲಿ ಪ್ರಮುಖ ಪಾತ್ರವಹಿಸುವುದು ಮನೆಯ ಮುಖ್ಯ ಬಾಗಿಲು. ಸಾಮಾನ್ಯವಾಗಿ ಮನೆಯ ಬಾಗಿಲು ಈಶಾನ್ಯ (North-East), ಉತ್ತರ (North) ಮತ್ತು ಪೂರ್ವ (East) ಧಿಕ್ಕುಗಳಲ್ಲಿ ಇರುವುದು ಶ್ರೇಷ್ಟ ಎಂದು ಪರಿಗಣಿಸಲಾಗುತ್ತದೆ. ಈಶಾನ್ಯವನ್ನು ದೇವ ಮೂಲೆ ಎನ್ನಲಾಗುತ್ತಿದ್ದು, ಇಲ್ಲಿ ಬಾಗಿಲಿದ್ದರೆ ಮನೆಗೆ ಅಪಾರ ದೈವಿಕ ಶಕ್ತಿ ಹರಿದುಬರುತ್ತದೆ. ಉತ್ತರ ದಿಕ್ಕು ಸಂಪತ್ತಿನ ಅಧಿಪತಿ ಕುಬೇರನಿಗೆ ಸೇರಿದ್ದಾಗಿದ್ದು, ಈ ದಿಕ್ಕಿನ ಬಾಗಿಲು ಉದ್ಯೋಗ ಮತ್ತು ವ್ಯಾಪಾರದಲ್ಲಿ ಹಠಾತ್ ಪ್ರಗತಿಯನ್ನು ತರುತ್ತದೆ. ಇನ್ನು ಪೂರ್ವ ದಿಕ್ಕಿನ ಬಾಗಿಲು ಸೂರ್ಯನ ಕಿರಣಗಳನ್ನು ಆಕರ್ಷಿಸುವುದರಿಂದ ಕೀರ್ತಿ, ಗೌರವ ಮತ್ತು ಉತ್ತಮ ಆರೋಗ್ಯ ಲಭಿಸುತ್ತದೆ.
ಈ ದಿಕ್ಕಿನಲ್ಲಿ ಬಾಗಿಲಿದ್ದರೆ ತಕ್ಷಣ ಎಚ್ಚರಗೊಳ್ಳಿ
ವಾಸ್ತು ನಿಯಮಗಳ ಪ್ರಕಾರ, ನೈಋತ್ಯ (South-West) ದಿಕ್ಕಿನಲ್ಲಿ ಮನೆಯ ಪ್ರಮುಖ ಬಾಗಿಲು ಎಂದಿಗೂ ಇರಬಾರದು. ಈ ದಿಕ್ಕನ್ನು ರಾಹು ಮುಖ ಎನ್ನಲಾಗುತ್ತದೆ. ಇಲ್ಲಿ ಬಾಗಿಲಿದ್ದರೆ ಆರ್ಥಿಕ ಮುಗ್ಗಟ್ಟು, ನಿರಂತರ ಸಾಲದ ಬಾಧೆ ಹಾಗೂ ದಂಪತಿಗಳ ನಡುವೆ ಅನಗತ್ಯ ಕಲಹಗಳು ಸೃಷ್ಟಿಯಾಗುತ್ತವೆ. ಒಂದು ವೇಳೆ ದಕ್ಷಿಣ ದಿಕ್ಕಿನಲ್ಲಿ ಬಾಗಿಲು ಇಡಲೇಬೇಕಾದ ಅನಿವಾರ್ಯತೆ ಇದ್ದರೆ, ಅದು ಆಗ್ನೇಯ (South-East) ಭಾಗಕ್ಕೆ ಹೊಂದಿಕೊಂಡಂತೆ ವಾಸ್ತು ಪದಗಳ ಅನ್ವಯ ಇರಬೇಕೇ ಹೊರತು ನೈಋತ್ಯಕ್ಕಲ್ಲ.
Also Read : ದಿನಭವಿಷ್ಯ ಮೇ 21, 2026: ವೃದ್ಧಿ ಯೋಗದ ಪ್ರಭಾವ; ಇಂದು ನಿಮ್ಮ ರಾಶಿ ಫಲ ಹೇಗಿದೆ ನೋಡಿ
ಮನೆ ಒಡೆಯದೆ ವಾಸ್ತು ದೋಷ ನಿವಾರಿಸುವ ಸರಳ ಟಿಪ್ಸ್
ನಿಮ್ಮ ಮನೆಯ ಬಾಗಿಲು ಈಗಾಗಲೇ ತಪ್ಪು ದಿಕ್ಕಿನಲ್ಲಿದ್ದರೆ, ಆತಂಕ ಪಡುವ ಅಗತ್ಯವಿಲ್ಲ. ಮನೆ ಒಡೆಯದೆಯೇ ಕೆಲವು ಸರಳ ಪರಿಹಾರಗಳ ಮೂಲಕ ಈ ದೋಷವನ್ನು ಕಡಿಮೆ ಮಾಡಬಹುದು:
- ಹೊಸ್ತಿಲು ಕಡ್ಡಾಯ: ಮುಖ್ಯ ಬಾಗಿಲಿಗೆ ಮರ ಅಥವಾ ಕಲ್ಲಿನ ಹೊಸ್ತಿಲು ಇರಲೇಬೇಕು. ಇದು ಮನೆಯೊಳಗಿನ ಸಕಾರಾತ್ಮಕ ಶಕ್ತಿ ಹೊರಹೋಗದಂತೆ ತಡೆಯುತ್ತದೆ.
- ಸ್ವಸ್ತಿಕ ಚಿಹ್ನೆ: ಬಾಗಿಲಿನ ಮುಂಭಾಗದಲ್ಲಿ ಸಿಂಧೂರ ಅಥವಾ ತಾಮ್ರದ ಸ್ವಸ್ತಿಕ ಅಥವಾ ಓಂ ಚಿಹ್ನೆಯನ್ನು ಅಳವಡಿಸುವುದರಿಂದ ನಕಾರಾತ್ಮಕ ದೃಷ್ಟಿ ದೋಷ ನಿವಾರಣೆಯಾಗುತ್ತದೆ.
- ಕಲ್ಲು ಉಪ್ಪಿನ ಬಳಕೆ: ಮುಖ್ಯ ದ್ವಾರದ ಬಳಿ ಗಾಜಿನ ಬಟ್ಟಲಿನಲ್ಲಿ ಕಲ್ಲು ಉಪ್ಪನ್ನು ಇಡುವುದರಿಂದ ಸುತ್ತಮುತ್ತಲಿನ ಕೆಟ್ಟ ಶಕ್ತಿಗಳು ನಾಶವಾಗುತ್ತವೆ.
- ಬೆಳಕಿನ ವ್ಯವಸ್ಥೆ: ಸಂಜೆ ವೇಳೆ ಮುಖ್ಯ ಬಾಗಿಲಿನ ಬಳಿ ಕತ್ತಲಿರಬಾರದು. ಪ್ರಕಾಶಮಾನವಾದ ದೀಪವನ್ನು ಹಚ್ಚಿಡುವುದರಿಂದ ಲಕ್ಷ್ಮೀ ದೇವಿಯ ಅನುಗ್ರಹ ಲಭಿಸುತ್ತದೆ.
ಮನೆಯ ಮುಖ್ಯ ಬಾಗಿಲನ್ನು ಯಾವಾಗಲೂ ಸ್ವಚ್ಛವಾಗಿ ಹಾಗೂ ಆಕರ್ಷಕವಾಗಿ ಇಟ್ಟುಕೊಳ್ಳಿ. ಬಾಗಿಲಿಗೆ ಎದುರಾಗಿ ಕಸದ ತೊಟ್ಟಿ ಅಥವಾ ಹಳೆಯ ಪಾದರಕ್ಷೆಗಳನ್ನು ಇಡಬೇಡಿ. ಈ ಸರಳ ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ನಿಮ್ಮ ಮನೆಯಲ್ಲಿ ಸದಾ ನಗುವಿನ ವಾತಾವರಣ ಇರಲಿದೆ.
Also Read : ಮಳೆಗಾಲಕ್ಕೂ ಮುನ್ನ ಕಾರ್ ಇನ್ಸೂರೆನ್ಸ್ ಒಮ್ಮೆ ಪರಿಶೀಲಿಸಿ, ಇಲ್ಲದೇ ಹೋದರೆ..
(ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ವಾಸ್ತು ಶಾಸ್ತ್ರದ ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ತೀವ್ರ ದೋಷಗಳಿದ್ದಲ್ಲಿ ತಜ್ಞ ವಾಸ್ತು ಸಲಹೆಗಾರರನ್ನು ಸಂಪರ್ಕಿಸುವುದು ಸೂಕ್ತ.)
main door vastu tips avoid these directions for home entrance



