ಮಹಿಳೆಯರ ದೇಹದ ಮೇಲಿರುವ ಮಚ್ಚೆಗಳ ರಹಸ್ಯ: ಅದೃಷ್ಟ ತರಬಲ್ಲ ಸ್ಥಳಗಳಿವು!
Lucky Moles On Female Body: ದೇಹದ ಮೇಲಿರುವ ಪ್ರತಿಯೊಂದು ಮಚ್ಚೆಯೂ ವ್ಯಕ್ತಿಯ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಮಹಿಳೆಯರ ದೇಹದ ನಿರ್ದಿಷ್ಟ ಭಾಗಗಳಲ್ಲಿರುವ ಮಚ್ಚೆಗಳು ಅವರ ಭಾಗ್ಯ, ಸಂಪತ್ತು ಮತ್ತು ಗುಣಧರ್ಮಗಳನ್ನು ಹೇಗೆ ಸೂಚಿಸುತ್ತವೆ ಎಂಬ ವಿವರ ಇಲ್ಲಿದೆ.
ಮುಖದ ಮೇಲಿನ ಅದೃಷ್ಟ: ಹಣೆಯ ಮಧ್ಯಭಾಗದಲ್ಲಿ ಮಚ್ಚೆ ಇರುವ ಮಹಿಳೆಯರು ಸ್ವಾವಲಂಬಿಗಳು ಮತ್ತು ಆತ್ಮವಿಶ್ವಾಸವುಳ್ಳವರು. ಇವರು ತಮ್ಮ ಶ್ರಮದಿಂದಲೇ ಜೀವನದಲ್ಲಿ ಉನ್ನತ ಸ್ಥಾನಕ್ಕೇರುತ್ತಾರೆ. ಇನ್ನು ಹುಬ್ಬುಗಳ ಮಧ್ಯೆ ಮಚ್ಚೆ ಇದ್ದರೆ, ಅದು ಅಪಾರ ಸಂಪತ್ತು ಮತ್ತು ಬುದ್ಧಿವಂತಿಕೆಯ ಸಂಕೇತವಾಗಿದೆ.
ದೃಷ್ಟಿ ಮತ್ತು ಕಿವಿ: ಕಣ್ಣಿನ ಗುಡ್ಡೆಯ ಮೇಲೆ ಮಚ್ಚೆ ಇದ್ದರೆ ಅಂತಹ ಮಹಿಳೆಯರು ಶಾಂತ ಸ್ವಭಾವದವರೂ ಹಾಗೂ ಬುದ್ಧಿವಂತರಾಗಿರುತ್ತಾರೆ. ಕಿವಿಯ ಮೇಲೆ ಮಚ್ಚೆ ಇರುವುದು ಮಂಗಳಕರ; ಇವರು ಐಷಾರಾಮಿ ಜೀವನ ನಡೆಸುತ್ತಾರೆ ಮತ್ತು ಚುರುಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ.
ಮೂಗು ಮತ್ತು ಆರ್ಥಿಕ ಸ್ಥಿತಿ: ಮೂಗಿನ ತುದಿಯಲ್ಲಿ ಅಥವಾ ಮೂಗಿನ ಪಕ್ಕದಲ್ಲಿ ಮಚ್ಚೆ ಇದ್ದರೆ, ಆ ಮಹಿಳೆಯ ಜೀವನದಲ್ಲಿ ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ. ಇವರು ಆರ್ಥಿಕವಾಗಿ ಬಹಳ ಅದೃಷ್ಟವಂತರು ಮತ್ತು ಸುಖ ಜೀವನ ನಡೆಸುತ್ತಾರೆ.
ತುಟಿ ಮತ್ತು ಮಾತು: ಮೇಲ್ತುಟಿಯ ಮೇಲೆ ಮಚ್ಚೆ ಇರುವವರು ಅತ್ಯಂತ ಆಕರ್ಷಕ ವ್ಯಕ್ತಿತ್ವದವರು ಮತ್ತು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ. ಕೆಳತುಟಿಯ ಮೇಲೆ ಮಚ್ಚೆ ಇದ್ದರೆ, ಅವರು ಬಹಳ ಶ್ರಮಜೀವಿಗಳು ಮತ್ತು ಓದಿನಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ.
ರಾಜ್ಯದಲ್ಲಿ ವಿದ್ಯುತ್ ದರ ಪ್ರತಿ ಯೂನಿಟ್‌ಗೆ 1 ರೂಪಾಯಿ ಹೆಚ್ಚಳ ಸಾಧ್ಯತೆ; ಏಪ್ರಿಲ್ 1 ರಿಂದಲೇ ಜಾರಿ?
ಕುತ್ತಿಗೆ ಮತ್ತು ಭುಜ: ಕುತ್ತಿಗೆಯ ಮೇಲೆ ಮಚ್ಚೆ ಇರುವವರು ಅತೀವ ತಾಳ್ಮೆವಂತರು. ಇವರು ಜೀವನವನ್ನು ಬಹಳ ಜಾಣ್ಮೆಯಿಂದ ಯೋಜಿಸುತ್ತಾರೆ. ಭುಜದ ಮೇಲಿನ ಮಚ್ಚೆಯು ರಾಜಯೋಗವನ್ನು ಸೂಚಿಸುತ್ತದೆ; ಇವರು ಸಮಾಜದಲ್ಲಿ ಗೌರವ ಪಡೆಯುತ್ತಾರೆ ಮತ್ತು ಇತರರಿಗೆ ಸಹಾಯ ಮಾಡುವ ಗುಣ ಹೊಂದಿರುತ್ತಾರೆ.
ಕೈ ಮತ್ತು ಪಾದಗಳು: ಅಂಗೈಯಲ್ಲಿ ಮಚ್ಚೆ ಇದ್ದರೆ ಅದು ಆರ್ಥಿಕ ಸಮೃದ್ಧಿಯನ್ನು ಸೂಚಿಸುತ್ತದೆ. ಪಾದದ ಮೇಲೆ ಮಚ್ಚೆ ಇರುವ ಮಹಿಳೆಯರು ಪ್ರವಾಸಿ ಪ್ರೇಮಿಗಳಾಗಿರುತ್ತಾರೆ ಮತ್ತು ಜೀವನದಲ್ಲಿ ಹತ್ತು ಹಲವಾರು ಹೊಸ ಸ್ಥಳಗಳನ್ನು ನೋಡುವ ಅವಕಾಶ ಪಡೆಯುತ್ತಾರೆ.



