ಮಹಾಲಕ್ಷ್ಮಿ ರಾಜಯೋಗದಿಂದ ಈ ರಾಶಿಯವರಿಗೆ ಅದೃಷ್ಟ ಕಟ್ಟಿಟ್ಟ ಬುತ್ತಿ
Mahalakshmi Rajayoga: ಜ್ಯೋತಿಷ್ಯ ಶಾಸ್ತ್ರದ ಗಣನೆಯಂತೆ ಗ್ರಹಗಳ ಸ್ಥಾನಪಲ್ಲಟವು ಮಾನವ ಜೀವನದ ಮೇಲೆ ಮಹತ್ತರ ಪ್ರಭಾವ ಬೀರುತ್ತದೆ. 2026ರ ಜನವರಿ ತಿಂಗಳು ಜ್ಯೋತಿಷ್ಯದ ದೃಷ್ಟಿಯಿಂದ ಅತ್ಯಂತ ಕುತೂಹಲಕಾರಿಯಾಗಿದ್ದು, ಈ ಅವಧಿಯಲ್ಲಿ ಮಕರ ರಾಶಿಯಲ್ಲಿ ಗ್ರಹಗಳ ಸೇನಾಧಿಪತಿ ಮಂಗಳ ಮತ್ತು ಮನಃಕಾರಕ ಚಂದ್ರನ ಅಪರೂಪದ ಸಂಯೋಗ ಏರ್ಪಡುತ್ತಿದೆ. ಈ ಸಂಯೋಜನೆಯಿಂದಾಗಿ ಅತ್ಯಂತ ಶುಭದಾಯಕವಾದ ‘ಮಹಾಲಕ್ಷ್ಮಿ ರಾಜಯೋಗ’ ಸೃಷ್ಟಿಯಾಗುತ್ತಿದ್ದು, ನಾಲ್ಕು ರಾಶಿಗಳ ಪಾಲಿಗೆ ಅದೃಷ್ಟದ ಬಾಗಿಲು ತೆರೆಯಲಿದೆ.
ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದ ಬೆನ್ನಲ್ಲೇ, ಜನವರಿ 18ರಂದು ಅದೇ ರಾಶಿಯಲ್ಲಿ ಮಂಗಳ ಮತ್ತು ಚಂದ್ರರ ಮಿಲನವಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳ ಮತ್ತು ಚಂದ್ರ ಒಂದೇ ರಾಶಿಯಲ್ಲಿದ್ದಾಗ ‘ಮಹಾಲಕ್ಷ್ಮಿ ಯೋಗ’ ಉಂಟಾಗುತ್ತದೆ. ಈ ಯೋಗದ ಪ್ರಭಾವದಿಂದ ಆಯ್ದ ರಾಶಿಯವರಿಗೆ ಆರ್ಥಿಕ ಸ್ಥಿರತೆ, ವೃತ್ತಿಜೀವನದಲ್ಲಿ ಉನ್ನತಿ ಮತ್ತು ಕೌಟುಂಬಿಕ ಸೌಖ್ಯ ಲಭಿಸಲಿದೆ. ಆ ಪ್ರಮುಖ ರಾಶಿಗಳ ವಿವರ ಇಲ್ಲಿದೆ:
ಮೇಷ ರಾಶಿ:
ಮೇಷ ರಾಶಿಯವರಿಗೆ ಮಂಗಳನು ರಾಶ್ಯಾಧಿಪತಿಯಾಗಿರುವುದರಿಂದ ಈ ರಾಜಯೋಗವು ದ್ವಿಗುಣ ಫಲಗಳನ್ನು ನೀಡಲಿದೆ. ಈ ಅವಧಿಯಲ್ಲಿ ಅನಿರೀಕ್ಷಿತ ಧನಾಗಮನದ ಸಾಧ್ಯತೆಗಳಿದ್ದು, ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ನೀವು ಕೈಗೊಳ್ಳುವ ಪ್ರಯಾಣಗಳು ಲಾಭದಾಯಕವಾಗಿರಲಿದ್ದು, ಅದೃಷ್ಟದ ಸಂಪೂರ್ಣ ಬೆಂಬಲದಿಂದಾಗಿ ಹೊಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.
ಶಿರಸಿ–ಸಿದ್ದಾಪುರ–ಕುಮಟಾ–ಹೊನ್ನಾವರ ಕುಡಿಯುವ ನೀರಿನ ಸಂಕಷ್ಟ ಖಚಿತವೇ?
ತುಲಾ ರಾಶಿ:
ತುಲಾ ರಾಶಿಯವರ ಪಾಲಿಗೆ ಮಕರ ಸಂಕ್ರಾಂತಿಯ ನಂತರದ ದಿನಗಳು ಸ್ವರ್ಣಯುಗದಂತೆ ಇರಲಿವೆ. ದೀರ್ಘಕಾಲದ ಆರ್ಥಿಕ ಮುಗ್ಗಟ್ಟುಗಳು ದೂರವಾಗಿ ಧನಸಂಪತ್ತು ವೃದ್ಧಿಯಾಗಲಿದೆ. ಮನೆಯ ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದ್ದು, ಮಾನಸಿಕ ನೆಮ್ಮದಿ ಹೆಚ್ಚಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದ್ದು, ಕುಟುಂಬದೊಂದಿಗೆ ಪುಣ್ಯಕ್ಷೇತ್ರಗಳ ದರ್ಶನ ಮಾಡುವ ಯೋಗವಿದೆ.
ವೃಶ್ಚಿಕ ರಾಶಿ:
ಮಂಗಳನ ವಿಶೇಷ ಪ್ರಭಾವದಿಂದ ವೃಶ್ಚಿಕ ರಾಶಿಯವರಿಗೆ ಈ ಸಮಯವು ಅತ್ಯಂತ ಫಲಪ್ರದವಾಗಿರಲಿದೆ. ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆಗಳಿದ್ದು, ಮೇಲಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ವ್ಯಾಪಾರಸ್ಥರಿಗೆ ಉದ್ಯಮ ವಿಸ್ತರಣೆಗೆ ಇದು ಸಕಾಲವಾಗಿದೆ. ಬಹುದಿನಗಳ ಕನಸಾದ ಹೊಸ ಆಸ್ತಿ ಅಥವಾ ವಾಹನ ಖರೀದಿಸುವ ಯೋಗ ಈ ಅವಧಿಯಲ್ಲಿ ಕೂಡಿಬರಲಿದೆ.



