ಮನೆಯ ನೇಮ್‌ಪ್ಲೇಟ್‌ನಿಂದ ನಿಮ್ಮ ಅದೃಷ್ಟ ಬದಲಾಗುವುದು ಹೇಗೆ? ಈ ವಾಸ್ತು ಸಲಹೆ ಪಾಲಿಸಿ

Home Name Plate Vastu: ಸ್ವಂತ ಮನೆ ಪ್ರತಿಯೊಬ್ಬರ ಜೀವನದಲ್ಲೂ ಇರುವ ಬಹಳ ಸಾಮಾನ್ಯವಾದ ಮತ್ತು ಅಷ್ಟೇ ಮುಖ್ಯವಾದ ಕನಸು. ಕಷ್ಟ ಪಟ್ಟು ಮನೆ ಕಟ್ಟಿದ ಮೇಲೆ ಆ ಮನೆಗೆ ಒಂದು ಚೆಂದದ ಹೆಸರು ಹಾಕದಿದ್ದರೆ ಹೇಗೆ?

ಹಾಗಾಗಿ ನೇಮ್‌ಪ್ಲೇಟ್‌ ಅನ್ನುವುದು ಮನೆಗೆ ಬಹಳ ಮುಖ್ಯವಾಗಿರುವುದರ ಜೊತೆಗೆ ಒಂದು ರೀತಿಯ ಭಾವನೆಯೂ ಅದರಲ್ಲಿ ಬೆರೆತಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಗೆ ನೇಮ್‌ಪ್ಲೇಟ್‌ ಹಾಕಿಸುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ.

ನೇಮ್‌ಪ್ಲೇಟ್‌ ಮನೆಗೆ ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುವುದರ ಜೊತೆಗೆ ಸುಖ, ಸಂತೋಷ, ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಜೀವನದಲ್ಲಿ ಎದುರಾಗುವ ಅನೇಕ ಸಮಸ್ಯೆಗಳನ್ನು ಸಹ ಇದು ನಿವಾರಿಸುತ್ತದೆ.

ಮನೆಗೆ ಒಂದು ನೇಮ್‌ಪ್ಲೇಟ್‌ ಬೇಕು ಎಂದು ಯಾವುದೋ ಒಂದನ್ನು ತಂದು ಅಳವಡಿಸಿದರೆ ಆಗ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತದೆ. ನೇಮ್‌ಪ್ಲೇಟ್‌ ಅಳವಡಿಸುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಹಾಗಾದರೆ ನಿಯಮಗಳೇನು ಎಂದು ತಿಳಿಯೋಣ.

ಮನೆಗೆ ನೇಮ್‌ಪ್ಲೇಟ್‌ ಅಳವಡಿಸುವಾಗ ಈ ನಿಯಮಗಳನ್ನು ಪಾಲಿಸಿ

– ವಾಸ್ತು ಪ್ರಕಾರ ನೇಮ್‌ಪ್ಲೇಟ್‌ ಯಾವಾಗಲೂ ಆಯತಾಕಾರದ್ದಾಗಿರಬೇಕು.

– ವೃತ್ತಾಕಾರ, ತ್ರಿಕೋನಾಕಾರದ ನೇಮ್‌ಪ್ಲೇಟ್‌ ಎಂದಿಗೂ ಅಳವಡಿಸಬೇಡಿ.

– ನೇಮ್‌ಪ್ಲೇಟ್‌ನಲ್ಲಿ ಅಕ್ಷರಗಳು ಸ್ವಷ್ಟವಾಗಿ ಕಾಣುವಂತಿರಬೇಕು. ಮಸಕಾದ ಅಕ್ಷರಗಳನ್ನು ಬರೆಯಿಸಬೇಡಿ.

– ಉತ್ತರ ಅಥವಾ ಪೂರ್ವ ದಿಕ್ಕಿಗೆ ನೇಮ್‌ಪ್ಲೇಟ್‌ ಅಳವಡಿಸುವುದು ಶುಭವೆಂದು ಶಾಸ್ತ್ರದಲ್ಲಿ ಪರಿಗಣಿಸಲಾಗಿದೆ. ಈಶಾನ್ಯ ಮೂಲೆಯಲ್ಲೂ ಸಹ ಹಾಕಬಹುದು.

– ಮನೆಯ ಮುಖ್ಯ ದ್ವಾರದ ಬಲಭಾಗದಲ್ಲಿ ನೇಮ್‌ಪ್ಲೇಟ್‌ ಅಳವಡಿಸಿ.

– ನೇಮ್‌ಪ್ಲೇಟ್‌ನಲ್ಲಿ ಗಣಪತಿ ಅಥವಾ ಸ್ವಸ್ತಿಕ್‌ ಚಿಹ್ನೆ ಇದ್ದರೆ ಅದು ಮನೆಗೆ ಶುಭವನ್ನು ತರುತ್ತದೆ.

– ನೇಮ್‌ಪ್ಲೇಟ್‌ಗಾಗಿ ತಾಮ್ರ, ಸ್ಟೀಲ್‌ ಅಥವಾ ಹಿತ್ತಾಳೆ ಲೋಹಗಳನ್ನು ಆರಿಸಿಕೊಳ್ಳಬಹುದು.

– ಮನೆಯ ಮುಖ್ಯ ದ್ವಾರದ ಬಳಿ ಪ್ಲಾಸ್ಟಿಕ್‌ ನಿಂದ ಮಾಡಿದ ನೇಮ್‌ಪ್ಲೇಟ್‌ ಅಳವಡಿಸುವುದು ಶುಭವಲ್ಲ.

– ಬಿಳಿ, ಹಳದಿ ಮತ್ತು ಕೇಸರಿ ಬಣ್ಣಗಳ ಮಿಶ್ರಣದ ನೇಮ್‌ಪ್ಲೇಟ್‌ ಹಾಕುವುದು ಮನೆಗೆ ಶುಭವನ್ನು ತರುತ್ತದೆ ಎಂಬ ನಂಬಿಕೆಯಿದೆ.

– ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡಂತೆ, ನೇಮ್‌ಪ್ಲೇಟ್‌ ಅನ್ನು ಸಹ ಒರೆಸಿ ಸ್ವಚ್ಛವಾಗಿ ಇಟ್ಟುಕೊಳ್ಳಿ.

– ನೇಮ್‌ಪ್ಲೇಟ್‌ ಸೀಳಿದ್ದರೆ ಅಥವಾ ಅದರ ಪಾಲಿಶ್‌ ಹೋಗಿ ಮಸಕಾಗಿದ್ದರೆ ಅದನ್ನು ತೆಗೆದು ಹೊಸ ನೇಮ್‌ಪ್ಲೇಟ್‌ ಅಳವಡಿಸಿ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories