ಸ್ನೋ ಮೂನ್ ಎಂದರೇನು? ಅದು ಯಾವ ರಾಶಿಯವರಿಗೆ ಮಹತ್ವದ ತಿರುವು ನೀಡುತ್ತದೆ?
Full Moon Snow Moon Astrology: ಆಗಸದಲ್ಲಿ ಚಂದ್ರ ಎಂದಿಗಿಂತ ಹೆಚ್ಚು ಪ್ರಕಾಶಮಾನವಾಗಿ ಬೆಳಗುವ ದಿನವನ್ನು ಹುಣ್ಣಿಮೆ ಅಥವಾ ಪೌರ್ಣಿಮೆ ಎಂದು ಕರೆಯುತ್ತಾರೆ.
ಹಿಂದೂ ಕ್ಯಾಲೆಂಡರ್‌ನ ಪ್ರಕಾರ ಪ್ರತಿ ತಿಂಗಳ ಹುಣ್ಣಿಮೆಯನ್ನು ಆ ಮಾಸದ ಹೆಸರಿನಿಂದ ಗುರುತಿಸಲಾಗುತ್ತದೆ. ಇಂಗ್ಲೀಷ್ ತಿಂಗಳಿನಲ್ಲಿ ಪ್ರತಿ ಹುಣ್ಣಿಮೆಯನ್ನು ವಿಶೇಷ ಹೆಸರಿನಿಂದ ಕರೆಯುತ್ತಾರೆ.
ಫೆಬ್ರವರಿ ತಿಂಗಳಲ್ಲಿ ಬರುವ ಹುಣ್ಣಿಮೆಯನ್ನು (Full Moon) ಸ್ನೋ ಮೂನ್ (Snow Moon) ಎಂದು ಕರೆಯುತ್ತಾರೆ. ಭಾರತದಲ್ಲಿ ಇದನ್ನು ಮಾಘ ಪೂರ್ಣಿಮಾ ಎಂದು ಆಚರಿಸುತ್ತಾರೆ.
ಜ್ಯೋತಿಷ್ಯದಲ್ಲೂ ಆ ದಿನಕ್ಕೆ ಬಹಳ ಮಹತ್ವ ನೀಡಲಾಗಿದೆ. ಮಾಘ ಪೂರ್ಣಿಮೆಯಂದು ಗಂಗಾ ಸ್ನಾನ ಮಾಡುವುದರಿಂದ ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳೆಲ್ಲವೂ ನಾಶವಾಗುತ್ತದೆ ಎಂಬ ಪ್ರತೀತಿಯಿದೆ.
ಆದರೆ ಫೆಬ್ರವರಿ ತಿಂಗಳಿನ ಫುಲ್ ಮೂನ್ ಅನ್ನು ಸ್ನೋ ಮೂನ್ ಎಂದು ಕರೆಯಲು ಕಾರಣವೇನು? ಜ್ಯೋತಿಷ್ಯದ ಪ್ರಕಾರ ಈ ದಿನ ಯಾವ ರಾಶಿಯವರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ? ಇಲ್ಲಿದೆ ಓದಿ.
ಫೆಬ್ರವರಿ ಫುಲ್ ಮೂನ್ ಅನ್ನು ಸ್ನೋ ಮೂನ್ ಎಂದು ಏಕೆ ಕರೆಯುತ್ತಾರೆ?
ಫೆಬ್ರವರಿ ತಿಂಗಳು ಉತ್ತರ ಗೋಳಾರ್ಧದಲ್ಲಿ ಅತ್ಯಂತ ಚಳಿಯ ತಿಂಗಳಾಗಿದೆ. ಈ ಸಮಯದಲ್ಲಿ ಬಹಳಷ್ಟು ದೇಶಗಳಲ್ಲಿ ಶೀತಗಾಳಿ, ಹಿಮಪಾತದಿಂದ ಇಡೀ ವಾತಾವರಣ ಚಳಿಯಿಂದ ನಡುಗುತ್ತಿರುತ್ತದೆ. ಇದು ಆಹಾರದ ಕೊರತೆಗೂ ಕಾರಣವಾಗುತ್ತದೆ. ಈ ಕಾರಣದಿಂದಲೇ ಫೆಬ್ರವರಿಯ ಹುಣ್ಣಿಮೆಯನ್ನು ಸ್ನೋ ಮೂನ್, ಸ್ಟಾರ್ಮ್ ಮೂನ್ ಎಂದೆಲ್ಲಾ ಕರೆಯುತ್ತಾರೆ.
ಇದನ್ನೂ ಓದಿ: ರಾಜಯೋಗದ ರಹಸ್ಯ: ಸುಖ, ಸಂಪತ್ತು, ಉನ್ನತ ಅಧಿಕಾರ ಪಡೆಯಲು ಹೀಗೆ ಮಾಡಿ
ಸ್ನೋ ಮೂನ್ ಯಾವ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ?
ಜ್ಯೋತಿಷ್ಯ ಶಾಸ್ತ್ರದಲ್ಲಿ ಹುಣ್ಣಿಮೆ ಬಹಳಷ್ಟು ಮಹತ್ವವಿದೆ. ಆ ದಿನವನ್ನು ಬದಲಾವಣೆಯ ಕಾಲ ಎಂದೂ ಕರೆಯುತ್ತಾರೆ. ಈ ವರ್ಷದ ಸ್ನೋ ಮೂನ್ ಕೆಲವು ರಾಶಿಯವರ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ರಾಶಿಚಕ್ರದ 6 ರಾಶಿಗಳ ಮೇಲೆ ಸ್ನೋ ಮೂನ್‌ನ ಪ್ರಭಾವ ಹೆಚ್ಚಾಗಿದೆ. ಇದು ವೃಷಭ, ಸಿಂಹ, ವೃಶ್ಚಿಕ, ಕುಂಭ, ಧನು ಮತ್ತು ಮೇಷ ರಾಶಿಯವರ ಜೀವನಕ್ಕೆ ಒಂದು ಮಹತ್ವದ ತಿರುವು ನೀಡುವ ಸಾಧ್ಯತೆಯಿದೆ. ಸೃಜನಶೀಲ ಅಭಿವ್ಯಕ್ತಿಯನ್ನು ಹೊರಹಾಕಲು, ಸೃಜನಾತ್ಮಕವಾಗಿ ಸಕ್ರಿಯವಾಗಿರಲು ಸಹಾಯ ಮಾಡುತ್ತದೆ. ಮಾಡುವ ಕೆಲಸದಲ್ಲಿ ಗುರುತಿಸಿಕೊಳ್ಳುವಂತೆ ಮಾಡುತ್ತದೆ. ಇದು ಅವರ ಜೀವನದಲ್ಲಿ ಹೊಸ ಬೆಳಕು ಚೆಲ್ಲುತ್ತದೆ.



