ಟಿ20 3ನೇ ಪಂದ್ಯ ಭಾರತಕ್ಕೆ ರೋಚಕ ಗೆಲುವು, ಸೂಪರ್ ಓವರ್ ನಲ್ಲಿ ಸರಣಿ ಗೆದ್ದ ಟೀಂ ಇಂಡಿಯಾ

0

ಹ್ಯಾಮಿಲ್ಟನ್ : ನ್ಯೂಜಿಲ್ಯಾಂಡ್ ವಿರುದ್ದದ ಮೂರನೇ ಟಿ 20 ಪಂದ್ಯವನ್ನು ಭಾರತ ಸೂಪರ್ ಓವರ್ ಮೂಲಕ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 3-0 ಅಂತರದಿಂದ ಟೀಂ ಇಂಡಿಯಾ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಂಟಿಂಗ್ ಗೆ ಇಳಿದ ಟೀಂ ಇಂಡಿಯಾಕ್ಕೆ ರೋಹಿತ್ ಶರ್ಮಾ ಹಾಗೂ ಕನ್ನಡಿಗ ಕೆ.ಎಲ್.ರಾಹುಲ್ ಭರ್ಜರಿ ಆರಂಭವೊದಗಿಸಿದ್ರು. ರಾಹುಲ್ 27 ರನ್ ಗಳಿಸಿದ್ದಾಗ ಗ್ರ್ಯಾಂಡ್ ಹೋಂಗೆ ವಿಕೆಟ್ ಒಪ್ಪಿಸಿದ್ರೆ, ಒಂದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಶಿವಂ ದುಬೆ ಕೇವಲ 3 ರನ್ ಗಳಿಸಿ ಬೆನ್ನೆಟ್ ಬಲೆಗೆ ಬಿದ್ರು. ನಂತರ ರೋಹಿತ್ ಶರ್ಮಾಗೆ ಜೊತೆಯಾದ ನಾಯಕ ಕೊಯ್ಲಿ ಭರ್ಜರಿ ಆಟ ಪ್ರದರ್ಶಿಸಿದ್ರು. ಕೊಯ್ಲಿ 38 ರನ್ ಗಳಿಸಿದ್ರೆ, ರೋಹಿತ್ ಶರ್ಮಾ 65 ರನ್ ಗಳ ಅಬ್ಬರದ ಬ್ಯಾಟಿಂಗ್ ನಡೆಸಿದ್ರು. ಶ್ರೇಯಸ್ ಅಯ್ಯರ್ 17, ಮನೀಶ್ ಪಾಂಡೆ 14 ಹಾಗೂ ರವೀಂದ್ರ ಜಡೇಜಾ 10 ರನ್ ನೆರವಿನಿಂದ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 179 ರನ್ ಗಳಿಸಿತ್ತು.ನ್ಯೂಜಿಲ್ಯಾಂಡ್ ಪರ ಹಮೀಶ್ ಬೆನ್ನೆಟ್ 3, ಸ್ಟನ್ನರ್ ಹಾಗೂ ಗ್ಯ್ರಾಂಡ್ ಹೋಮ್ ತಲಾ 1 ವಿಕೆಟ್ ಪಡೆದುಕೊಂಡ್ರು. ನಂತರ ಬ್ಯಾಟಿಂಗ್ ಗೆ ಇಳಿದ ನ್ಯೂಜಿಲ್ಯಾಂಡ್ ಆರಂಭಿಕರಾದ ಕೊಲಿನ್ ಮುನ್ರೋ ಹಾಗೂ ಮಾರ್ಟಿನ್ ಗುಫ್ಟಿಲ್ ಅಬ್ಬರದ ಬ್ಯಾಟಿಂಗ್ ಗೆ ಮುಂದಾದ್ರು. ಆದ್ರೆ ರವೀಂದ್ರ ಜಡೇಜಾ ನ್ಯೂಜಿಲ್ಯಾಂಡ್ ಗೆ ಆಆಘಾತ ನೀಡಿದ್ರು. 14ರನ್ ಗಳಿಸಿದ್ದ ಕೊಲಿನ್ ಮುನ್ರೋಗೆ ಪೆವಿಲಿಯನ್ ಹಾದಿ ತೋರಿಸಿದ್ರು. ಗುಪ್ಟಿಲ್ ಒಂದಿಷ್ಟು ಹೊತ್ತು ಭರವಸೆ ನೀಡಿದ್ರು ಕೂಡ 31 ರನ್ ಗಳಿಸುವಾಗಲೇ ಶಾರ್ದೂಲ್ ಠಾಕೂರ್ ಗೆ ಟಿಕೆಟ್ ಒಪ್ಪಿಸಿದ್ರು. ನಂತರ ಬಂದ ಸ್ಟನ್ನರ್ ಹಾಗೂ ಗ್ರ್ಯಾಂಡ್ ಹೋಮ್ ಎರಡಂಕಿ ದಾಟುವ ಮುನ್ನವೇ ಪೆವಿಲಿಯನ್ ಹಾದಿ ಹಿಡಿದಿದ್ರು. ಆದ್ರೆ ನಾಯಕ ಕೆನ್ ವಿಲಿಯಂಸನ್ ಏಕಾಂಕಿಯಾಗಿಯೇ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದಿದ್ದರು. 48 ಎಸೆತಗಳಲ್ಲಿ 95ರನ್ ಗಳಿಸಿದ್ದ ವಿಲಿಯಂಸನ್ ಶಮಿಗೆ ವಿಕೆಟ್ ಒಪ್ಪಿಸಿದ್ರು. ಅಂತಿಮವಾಗಿ ನ್ಯೂಜಿಲ್ಯಾಂಡ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 179 ರನ್ ಗೆ ತನ್ನ ಆಟ ಮುಗಿಸುತ್ತಿದ್ದಂತೆಯೇ ಪಂದ್ಯ ಡ್ರಾ ನಲ್ಲಿ ಅಂತ್ಯ ಕಂಡಿತ್ತು. ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳುತ್ತಿದ್ದಂತೆಯೇ ನ್ಯೂಜಿಲ್ಯಾಂಡ್ ಸೂಪರ್ ಓವರ್ ನಲ್ಲಿ ಬ್ಯಾಟಿಂಗ್ ಗೆ ಇಳಿಸಿತು. ಮಾರ್ಟಿನ್ ಗುಪ್ಟಿಲ್ ಜೊತೆಗೆ ಕೆನ್ ವಿಲಿಯಂಸನ್ ಆರಂಭಿಕರಾಗಿ ಕಣಕ್ಕೆ ಇಳಿದಿದ್ರು. ಬುಮ್ರಾ ಸೂಪರ್ ಓವರ್ ನಲ್ಲಿ ಗುಫ್ಟಿಲ್ 2 ಎಸೆತ ಎದುರಿಸಿ ಬೌಂಡರಿ ಸಹಿತಿ 5 ರನ್ ಗಳಿಸಿದ್ರೆ, ನಾಯಕ ವಿಲಿಯಂಸನ್ 4 ಎಸೆತಗಳಲ್ಲಿ ಒಂದು 6, ಒಂದು 4 ನೆರವಿನಿಂದ 12 ರನ್ ಗಳಿಸಿದ್ರು. ಭಾರತಕ್ಕೆ ಸೂಪರ್ ಓವರ್ ನಲ್ಲಿ 18 ರನ್ ಗಳ ಟಾರ್ಗೆಟ್ ನೀಡಿತ್ತು.


ಬ್ಯಾಟಿಂಗ್ ಗೆ ಇಳಿದ ರಾಹುಲ್ ಹಾಗೂ ರೋಹಿತ್ ಶರ್ಮಾ ಆರಂಭದ ಎರಡು ಎಸೆತ ಮೂರು ರನ್ ಗಳಿಸಿದ್ದಾಗ ರಾಹುಲ್ ಬೌಂಡರಿ ಬಾರಿಸಿದ್ರು. ನಂತರ ಒಂದು ರನ್ ಪಡೆದು ರೋಹಿತ್ ಶರ್ಮಾಗೆ ಕ್ರಿಸ್ ಬಿಟ್ಟುಕೊಟ್ರು. ಕೊನೆಯ ಎರಡು ಎಸೆತಗಳಲ್ಲಿ 10 ರನ್ ಬೇಕಿದ್ದಾಗ ರೋಹಿತ್ ಶರ್ಮಾ ಸತತ ಸಿಕ್ಸರ್ ಬಾರಿಸೋ ಮೂಲಕ ಟೀ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್ : ಭಾರತ : ರೋಹಿತ್ ಶರ್ಮಾ 65 (40), ಕೆ.ಎಲ್.ರಾಹುಲ್ 27 (19), ಶಿವಂ ದುಬೆ 3 (7), ವಿರಾಟ್ ಕೊಯ್ಲಿ 38 (27), ಶ್ರೇಯಸ್ ಅಯ್ಯರ್ 17 (16), ಮನೀಶ್ ಪಾಂಡೆ 14 (6), ರವೀಂದ್ರ ಜಡೇಜಾ 10 (5) ಹಮಿಶ್ ಬೆನ್ನಿಟ್ 54/3, ಮಿಚಲ್ ಸ್ಟನ್ನರ್ 37/1, ಕೊಲಿನ್ ಡಿ ಗ್ರ್ಯಾಂಡ್ ಹೋಮ್ 13/1
ನ್ಯೂಜಿಲ್ಯಾಂಡ್ : ಮಾರ್ಟಿನ್ ಗುಪ್ಟಿಲ್ 31 (21), ಕೊಲಿನ್ ಮುನ್ರೋ 14 (16), ಕೆನ್ ವಿಲಿಯಂಸನ್ 95 (48), ಮಿಚನ್ ಸ್ಟನ್ನರ್ 9 (11), ಕೊಲಿನ್ ಡಿ ಗ್ರ್ಯಾಂಡ್ ಹೋಮ್ 5 (12), ರೋಸ್ ಟೇಲರ್ 17 (10), ಶಾರ್ದೂಲ್ ಠಾಕೂರ್ 21/1, ಮೊಹಮದ್ ಶಮಿ 32/2, ಯಜುವೀಂದ್ರ ಚಹಲ್ 36/1, ರವೀಂದ್ರ ಜಡೇಜಾ 23/1

Leave A Reply

Your email address will not be published.