ಟೀಂ ಇಂಡಿಯಾ – ಕಿವಿಸ್ ಏಕದಿನ ಸರಣಿ : ಸತತ ಗೆಲುವಿನಿಂದ ಸರಣಿ ಗೆದ್ದ ನ್ಯೂಜಿಲೆಂಡ್

0

ಆಕ್ಲೆಂಡ್ : ನ್ಯೂಜಿಲೆಂಡ್ ವಿರುದ್ದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದ ಭಾರತ ಏಕದಿನ ಸರಣಿಯಲ್ಲಿ ವೈಫಲ್ಯ ಕಂಡಿದೆ. ಸತತ ಎರಡು ಪಂದ್ಯಗಳನ್ನು ಸೋಲುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ನ್ಯೂಜಿಲೆಂಡ್ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ.

ಆಕ್ಲೆಂಡ್ ನ ಈಡನ್ ಪಾರ್ಕ್ ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡಕ್ಕೆ ಆರಂಭಿಕರಾದ ಮಾರ್ಟಿನ್ ಗುಫ್ಟಿಲ್ ಹಾಗೂ ಹೆನ್ರಿ ನಿಕೋಲಸ್ ಅಬ್ಬರಿಸಿದ್ರು. ಹೆನ್ರಿ ನಿಕೋಲಸ್ 41 ರನ್ ಗಳಿಸಿದ್ರೆ, ಮಾರ್ಟಿನ್ ಗುಫ್ಟಿಲ್ 79 ರನ್ ಸಿಡಿಸಿದ್ರು. ಟಾಮ್ ಬ್ಲಂಡಲ್ 22 ರನ್ ಗಳಿಸಿದ್ರು.

ಒಂದೆಡೆ ನ್ಯೂಜಿಲೆಂಡ್ ಬ್ಯಾಟ್ಸಮನ್ ಗಳು ಪೆವಿಲಿಯನ್ ಹಾದಿ ಹಿಡಿಯುತ್ತಿದ್ರೆ ರಾಸ್ ಟೇಲರ್ ಏಕಾಂಗಿ ಹೋರಾಟ ನಡೆಸಿದ್ರು. 74 ಎಸೆತಗಳನ್ನು ಎದುರಿಸಿದ ಅವರು 73 ರನ್ ಸಿಡಿಸಿ ತಂಡಕ್ಕೆ ನೆರವಾದ್ರು. ನ್ಯೂಜಿಲೆಂಡ್ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 273 ರನ್ ಗಳಿಸಿದೆ. ಚಹಲ್ 3 ವಿಕೆಟ್ ಪಡೆದ್ರೆ ಶಾರ್ದೂಲ್ ಠಾಕೂರ್ 2 ಹಾಗೂ ರವೀಂದ್ರ ಜಡೇಜಾ 1 ವಿಕೆಟ್ ಕಬಳಿಸಿದ್ರು.

ನ್ಯೂಜಿಲೆಂಡ್ ನೀಡಿದ್ದ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಭಾರತಕ್ಕೆ ಬೆನ್ನೆಟ್ ಆರಂಭಿಕ ಆಘಾತ ನೀಡಿದ್ರು. 3 ರನ್ ಗಳಿಸಿದ್ದ ಮಾಯಂಕ್ ಅಗರ್ ವಾಲ್ ಗೆ ಪೆವಿಲಿಯನ್ ಹಾದಿ ತೋರಿಸಿದ್ರೆ, 15 ರನ್ ಗಳಿಸಿದ್ದ ವಿರಾಟ್ ಕೊಯ್ಲಿಗೆ ಟೀಮ್ ಸೌಥಿ ಬೌಲ್ಡ್ ಮಾಡಿದ್ರು. ನಂತರ ಪ್ರಥ್ವಿ ಶಾ 24 ರನ್ ಗಳಿಸಿ ಔಟಾದ್ರೆ ಕೆ.ಎಲ್.ರಾಹುಲ್ ಕೇವಲ 4 ರನ್ ವಿಕೆಟ್ ಒಪ್ಪಿಸಿದ್ರು. ಕೇದಾರ್ ಜಾದವ್ ಕೂಡ ಎರಡಂಕಿ ದಾಟುವಲ್ಲಿ ವಿಫಲರಾದ್ರು.

ನಂತರ ಶ್ರೇಯಸ್ ಅಯ್ಯರ್ ಗೆ ಜೊತೆಯಾದ ರವೀಂದ್ರ ಜಡೇಜಾ ತಂಡವನ್ನು ಆಧರಿಸಿದ್ರು. ಅಯ್ಯರ್ 52 ರನ್ ಗಳಿಸಿದ್ರೆ, ರವೀಂದ್ರ ಜಡೇಜಾ 55 ರನ್ ಗಳಿಸಿದ್ರು. ಇಬ್ಬರೂ ಔಟಾಗುತ್ತಿದ್ದಂತೆಯೇ ಭಾರತ ಗೆಲುವಿನ ಆಸೆಯನ್ನೇ ಕೈಬಿಟ್ಟಿತ್ತು. ಆದರೆ ಶಾರ್ದೂಲ್ ಠಾಕೂರ್ ಹಾಗೂ ನವದೀಪ್ ಸೈನಿ 45 ರನ್ ಗಳಿಸಿ ಗೆಲುವಿನ ಆಸೆ ಚಿಗುರಿಸಿದ್ರು.

ಆದರೆ ನ್ಯೂಜಿಲೆಂಡ್ ಬೌಲರ್ ಗಳು ಭಾರತಕ್ಕೆ ಗೆಲುವಿನ ಅವಕಾಶವನ್ನೇ ನೀಡಲಿಲ್ಲ. ಹೀಗಾಗಿ ಭಾರತ 48.3 ಓವರ್ ಗಳಲ್ಲಿ 10 ವಿಕೆಟ್ ಕಳೆದುಕೊಂಡು 251 ರನ್ ಗಳಿಗೆ ಆಲೌಟಾಯ್ತು. ಬೆನ್ನೆಟ್, ಟೀಮ್ ಸೌಥಿ, ಜಮ್ಮಿಸನ್, ಗ್ರ್ಯಾಂಡ್ ಹೋಮ್ ತಲಾ 2 ವಿಕೆಟ್ ಪಡೆದುಕೊಂಡ್ರೆ ಜಿಶ್ಶಮ್ 1 ವಿಕೆಟ್ ಪಡೆದ್ರು.

ಸಂಕ್ಷಿಪ್ತ ಸ್ಕೋರ್ :
ಭಾರತ : ಪ್ರಥ್ವಿಶಾ 24 (19), ವಿರಾಟ್ ಕೊಯ್ಲಿ 15 (25), ಶ್ರೇಯಸ್ ಅಯ್ಯರ್ 52 (57), ರವೀಂದ್ರ ಜಡೇಜಾ 55 (73), ಶಾರ್ದೂಲ್ ಠಾಕೂರ್ 18 (15), ನವದೀಪ್ ಸೈನಿ 45 (49), ಹಮೀಶ್ ಬೆನ್ನೆಟ್ 58/2, ಟೀಮ್ ಸೌಥಿ 41/2. ಕೈಲೆ ಜಮ್ಮಿಸನ್ 42/2, ಕೊಲಿ ಡಿ ಗ್ರ್ಯಾಂಡ್ ಹೋಮ್ 54/2, ಜೇಮ್ಸ್ ನಿಶಂ 52/1.
ನ್ಯೂಜಿಲೆಂಡ್ : ಮಾರ್ಟಿನ್ ಗುಫ್ಟಿಲ್ 79 (79), ಹೆನ್ರಿ ನಿಕೋಲಸ್ 41 (59), ಟಾಮ್ ಬ್ಲಂಡಲ್ 22 (25), ರಾಸ್ ಟೇಲರ್ 73 (74), ಜಿಮ್ಮಿಸನ್ 25 (24), ಚಹಲ್ 58/3, ಶಾರ್ದೂಲ್ ಠಾಕೂರ್ 60/2, ರವೀಂದ್ರ ಜಡೇಜಾ 35/1

Leave A Reply

Your email address will not be published.