ನಾಳೆಯಿಂದ ಭಾರತ- ಕಿವಿಸ್ ಏಕದಿನ ಸರಣಿ : ರೋಹಿತ್ ಶರ್ಮಾ ಔಟ್, ಮಾಯಾಂಕ್ ಗೆ ಬುಲಾವ್

0

ನವದೆಹಲಿ : ನ್ಯೂಜಿಲೆಂಡ್ ವಿರುದ್ದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದ ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗಿದೆ. ಹ್ಯಾಮಿಲ್ಟನ್ ನಲ್ಲಿ ಏಕದಿನ ಸರಣಿಯ ಮೊದಲ ಪಂದ್ಯ ನಾಳೆಯಿಂದ ಆರಂಭಗೊಳ್ಳಲಿದೆ. ಆದರೆ ಟೀಂ ಇಂಡಿಯಾದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಏಕದಿನ ಹಾಗೂ ಟೆಸ್ಟ್ ಸರಣಿಯಿಂದಲೇ ಹೊರಬಿದ್ದಿದ್ದು, ಕನ್ನಡಿಗ ಮಾಯಂಕ್ ಅಗರ್ವಾಲ್ ಗೆ ಬುಲಾವ್ ನೀಡಲಾಗಿದೆ.

ಟೀಂ ಇಂಡಿಯಾ ಪಾಲಿಗೆ ಹಿಟ್ ಮ್ಯಾನ್ ಅಂತಾನೆ ಕರೆಯಿಸಿಕೊಳ್ಳುವ ರೋಹಿತ್ ಶರ್ಮಾ ನ್ಯೂಜಿಲೆಂಡ್ ವಿರುದ್ದ ಸರಣಿಯಲ್ಲಿ ಅದ್ಬುತ ಪ್ರದರ್ಶನವನ್ನು ನೀಡಿದ್ರು. ಭಾರತ ಸರಣಿಯನ್ನು ತನ್ನ ಕೈವಶ ಮಾಡಿಕೊಳ್ಳುವಲ್ಲಿಯೂ ರೋಹಿತ್ ಶರ್ಮಾ ಕೊಡುಗೆ ಅಪಾರ. ಟಿ20 ಸರಣಿಯ 5ನೇ ಪಂದ್ಯದಲ್ಲಿ ಕೊಯ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ತಂಡದ ನಾಯಕತ್ವ ವಹಿಸಿದ್ದರು. ಕನ್ನಡಿಗ ಕೆ.ಎಲ್.ರಾಹುಲ್ ಜೊತೆ ಸಂಜು ಸ್ಯಾಮ್ಸನ್ ಇನ್ನಿಂಗ್ಸ್ ಆರಂಭಿಸಿದ್ದರು. ಆದರೆ ಸ್ಯಾಮ್ಸನ್ ಔಟ್ ಆಗುತ್ತಿದ್ದಂತೆಯೇ ಕ್ರೀಸ್ ಗೆ ಇಳಿದ ರೋಹಿತ್ ಶರ್ಮಾ 41 ಎಸೆತಗಳಲ್ಲಿ 60 ರನ್ ಗಳಿಸೋ ಮೂಲಕ ತಂಡಕ್ಕೆ ನೆರವಾಗಿದ್ದರು. ಆದರೆ ಸಿಕ್ಸರ್ ಸಿಡಿಸೋ ವೇಳೆಯಲ್ಲಿ ರೋಹಿತ್ ಶರ್ಮಾಗೆ ಮೊಣಕಾಲು ನೋವು ಕಾಣಿಸಿಕೊಂಡಿತ್ತು. ಹೀಗಾಗಿಯೇ ರೋಹಿತ್ ಶರ್ಮಾ ಆಟವನ್ನು ಅರ್ಧಕ್ಕೆ ಮೊಟಕುಗೊಳಿಸಿ ಪೆವಿಲಿಯನ್ ಹಾದಿ ಹಿಡಿದಿದ್ದರು. ಮೊಣಕಾಲು ನೋವಿನ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಇದೀಗ ಟೆಸ್ಟ್ ಹಾಗೂ ಏಕದಿನ ಸರಣಿಯಿಂದ ಹೊರ ನಡೆದಿದ್ದಾರೆ.

ರೋಹಿತ್ ಶರ್ಮಾ ಸರಣಿಯಿಂದ ಹೊರ ನಡೆಯುತ್ತಿದ್ದಂತೆಯೇ ಕನ್ನಡಿಗ ಮಾಯಂಕ್ ಅಗರ್ ವಾಲ್ ಗೆ ಕರೆ ನೀಡಲಾಗಿದೆ. ಟೆಸ್ಟ್ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡುತ್ತಿರೋ ಅಗರ್ ವಾಲ್ ನ್ಯೂಜಿಲೆಂಡ್ ವಿರುದ್ದದ ಏಕದಿನ ಸರಣಿಯಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಬುಧವಾರ ಹ್ಯಾಮಿಲ್ಟನ್ ನಲ್ಲಿ ಮೊದಲ ಏಕದಿನ, ಫೆಬ್ರವರಿ 8 ಶನಿವಾರ ಆಕ್ಲಂಡ್ ನಲ್ಲಿ 2 ಏಕದಿನ ಹಾಗೂ ಫೆಬ್ರವರಿ 11 ಮೌಂಟ್ ಮೌಂಗನುಯಿಯಲ್ಲಿ ಮೂರನೇ ಏಕದಿನ ಪಂದ್ಯಗಳು ನಡೆಯಲಿವೆ. ಏಕದಿನ ಸರಣಿ ಮುಗಿದ ಬಳಿಕ ಫೆಬ್ರವರಿ 21-25ರವರೆಗೆ ಮೊದಲ ಟೆಸ್ಟ್ ಹಾಗೂ ಫೆಬ್ರವರಿ 29 ರಿಂದ ಮಾರ್ಚ್ 4ರವರೆಗೆ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ.

Leave A Reply

Your email address will not be published.