ಭಾರತ-ನ್ಯೂಜಿಲೆಂಡ್ ಏಕದಿನ ಸರಣಿ : ರಾಹುಲ್, ಶ್ರೇಯಸ್ ಅಬ್ಬರದ ನಡುವೆಯೂ ಮುಗ್ಗರಿಸಿದ ಭಾರತ

0

ಹ್ಯಾಮಿಲ್ಟನ್ : ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ್ದ ಭಾರತ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ಶ್ರೇಯಸ್ ಅಬ್ಬರ ಬ್ಯಾಟಿಂಗ್ ನಡುವಲ್ಲೇ ಭಾರತ ಮುಗ್ಗರಿಸಿದೆ.

ಹ್ಯಾಮಿಲ್ಟನ್ ನ ಸೇಡನ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ನಡೆಸಿದ ಭಾರತಕ್ಕೆ ಯುವ ಆಟಗಾರರಾದ ಮಾಯಂಕ್ ಅಗರ್ ವಾಲ್ ಹಾಗೂ ಪ್ರಥ್ವಿಶಾ ಭರ್ಜರಿ ಆರಂಭವೊದಗಿಸಿದ್ರು. ಪ್ರಥ್ವಿ ಶಾ 20 ರನ್ ಗಳಿಸಿದ್ರೆ, ಮಾಯಂಕ್ ಅಗರ್ ವಾಲ್ 32 ರನ್ ಗಳಿಸಿದ್ರು. ಆರಂಭಿಕರ ಹುದ್ದರಿ ನೆಲಕ್ಕುರುಳುತ್ತಿದ್ದಂತೆಯೇ ಅಬ್ಬರಿಸೋದಕ್ಕೆ ಆರಂಭಿಸಿದ ನಾಯಕ ಕೊಯ್ಲಿ ಹಾಗೂ ಶ್ರೇಯಸ್ ಐಯ್ಯರ್ ಶತಕದ ಜೊತೆಯಾಟ ನೀಡಿದ್ರು.

ಕೊಯ್ಲಿ 51 ರನ್ ಗಳಿಸಿ ಔಟಾಗುತ್ತಿದ್ದಂತೆಯೇ ಬ್ಯಾಟಿಂಗ್ ಗೆ ಇಳಿದ ಕನ್ನಡಿಗ ಕೆ.ಎಲ್.ರಾಹುಲ್ ಅಬ್ಬರದ ಸಿಕ್ಸರ್ ಮೂಲಕ ನ್ಯೂಜಿಲೆಂಡ್ ಬೌಲರ್ ಗಳನ್ನು ದಂಡಿಸಿದ್ರು. ಶ್ರೇಯಸ್ ಅಯ್ಯರ್ ಶತಕ ಸಿಡಿಸೋದ್ರೊಂದಿಗೆ 103 ರನ್ ಗಳಿಸಿದ್ರೆ, ರಾಹುಲ್ 88 ರನ್ ಗಳಿಸಿ ಔಟಾಗದೇ ಉಳಿದ್ರು. ಭಾರತ 50 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 347 ರನ್ ಗಳಿಸಿದ್ರು.ಟೀಮ್ ಸೌಥಿ 2, ಗ್ರ್ಯಾಂಡ್ ಹೋಮ್ 1 ಹಾಗೂ ಇಶಾ ಸೋದಿ 1 ವಿಕೆಟ್ ಪಡೆದ್ರು.

ಭಾರೀ ಮೊತ್ತವನ್ನು ಬೆನ್ನತ್ತದಿ ನ್ಯೂಜಿಲೆಂಡ್ ಗೆ ಆರಂಭಿಕರಾದ ಮಾರ್ಟಿನ್ ಗುಪ್ಟಿಲ್ ಹಾಗೂ ಹೆನ್ರಿ ನಿಕೋಲಸ್ ಭರ್ಜರಿ ಆರಂಭವೊದಗಿಸಿದ್ರು. ಮಾರ್ಟಿನ್ ಗುಫ್ಟಿಲ್ 32 ರನ್ ಗಳಿಸಿ ಔಟಾಗುತ್ತಿದ್ದಂತೆಯೇ ಕ್ರೀಸ್ ಗೆ ಬಂದ ಟೋಮ್ ಬ್ಲಂಡೆಲ್ ಗೆ ಕುಲದೀಪ್ ಯಾದವ್ ಪೆವಿಲಿಯನ್ ಹಾದಿ ತೋರಿಸಿದ್ರು. ನಂತರ ಬ್ಯಾಟಿಂಗ್ ಗೆ ಇಳಿದ ರಾಸ್ ಟೇಲರ್ ಅಬ್ಬರದ ಬ್ಯಾಟಿಂಗ್ ನಡೆಸಿದ್ರು.

ಶತಕದ ನೆರವಿನೊಂದಿಗೆ ರಾಸ್ ಟೇಲರ್ 109 ರನ್ ಗಳಿಸಿದ್ರೆ, ಹೆನ್ರಿ ನಿಕೋಲಸ್ 78 ಹಾಗೂ ಟೋಮ್ ಲ್ಯಾಥಮ್ 69 ರನ್ ಗಳಿಸಿದ್ರು. ಅಂತಿಮವಾಗಿ ನ್ಯೂಜಿಲೆಂಡ್ 48.1 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 348 ರನ್ ಗಳಿಸೋ ಮೂಲಕ ಗೆಲುವಿನ ನಗೆ ಬೀರಿದ್ದಾರೆ.

ಸಂಕ್ಷಿಪ್ತ ಸ್ಕೋರ್ :
ಭಾರತ : ಪ್ರಥ್ವಿ ಶಾ 20 (21). ಮಾಯಂಕ್ ಅಗರ್ವಾಲ್ 32 (31), ವಿರಾಟ್ ಕೊಯ್ಲಿ 51 (63), ಶ್ರೇಯಸ್ ಐಯ್ಯರ್ 103 (107). ಕೆ.ಎಲ್.ರಾಹುಲ್ 88 (64), ಕೇದಾರ್ ಜಾಧವ್ 26 (15), ಟೀಮ್ ಸೌಥಿ 85/2, ಕೊಲಿನ್ ಡಿ ಗ್ರ್ಯಾಂಡ್ ಹೋಮ್ 41/1, ಇಶಾ ಸೋದಿ 27/1
ನ್ಯೂಜಿಲೆಂಡ್ : ಮಾರ್ಟಿನ್ ಗುಫ್ಟಿಲ್ 32 (41), ಹೆನ್ರಿ ನಿಕೋಲಸ್ 78 (82), ಟಾಮ್ ಬ್ಲಂಡೆಲ್ 9 (10), ರೋಸ್ ಟೇಲರ್ 109 (84), ಟಾಮ್ ಲ್ಯಾಂಥಮ್ 69 (84), ಜೇಮ್ಸ್ ನಿಶ್ಶಮ್ 9 (41), ಗ್ರ್ಯಾಂಡ್ ಹೋಮ್ 1 (2), ಮಿಚನ್ ಸ್ಟನ್ನರ್ 12 (9), ಕುಲದೀಪ್ ಯಾದವ್ 84/2, ಶಾರ್ದೂಲ್ ಠಾಕೂರ್ 80/1, ಮೊಹಮದ್ ಶಮಿ 63/1

Leave A Reply

Your email address will not be published.