ಭಾರತ ವಿರುದ್ದ ಸೇಡು ತೀರಿಸಿಕೊಂಡ ನ್ಯೂಜಿಲೆಂಡ್ ! 30 ವರ್ಷಗಳ ಬಳಿಕ ವೈಟ್ ವಾಶ್ ಮಾಡಿದ ಕಿವಿಸ್

0

ಮೌಂಟ್ ಮೌಂಗಾನುಯಿ : ಟಿ20 ಸರಣಿಯಲ್ಲಿ ಹೀನಾಯವಾಗಿ ಸೋತಿದ್ದ ನ್ಯೂಜಿಲೆಂಡ್ ಏಕದಿನ ಸರಣಿಯಲ್ಲಿ ಭಾರತ ವಿರುದ್ದ ಸೇಡು ತೀರಿಸಿಕೊಂಡಿದೆ. 3 ಪಂದ್ಯಗಳ ಏಕದಿನ ಸರಣಿಯಲ್ಲಿ ಅಂತಿಮ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್ ಹಾಗೂ ಚಹಲ್ ಆಕರ್ಷಕ ಆಟದ ನಡುವಲ್ಲಿಯೂ ಸೋಲನ್ನು ಕಂಡಿದೆ. ಈ ಮೂಲಕ ಭಾರತ 0-3 ಅಂತರದಿಂದ ಸೋತು ಸರಣಿಯನ್ನು ಕೈಬಿಟ್ಟಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತಕ್ಕೆ ಆರಂಭಿಕ ಮಾಯಂಕ್ ಅಗರ್ ವಾಲ್ ಮತ್ತೆ ವೈಫಲ್ಯ ಅನುಭವಿಸಿದ್ರು. ಮಾಯಂಕ್ ಕೇವಲ 1 ರನ್ ಗೆ ಔಟಾದ್ರೆ, ನಾಯಕ ವಿರಾಟ್ ಕೊಯ್ಲಿ ಕೇವಲ 9 ರನ್ ಗೆ ಪೆವಿಲಿಯನ್ ಹಾದಿ ಹಿಡಿದಿದ್ದರು.

ನಂತರ ಆರಂಭಿಕ ಆಟಗಾರ ಪ್ರಥ್ವಿ ಶಾ ಜೊತೆಯಾದ ಶ್ರೇಯಸ್ ಅಯ್ಯರ್ ಉತ್ತಮ ಜೊತೆಯಾಟ ನೀಡಿದ್ರು. ಪ್ರಥ್ವಿಶಾ 40 ರನ್ ಗಳಿಸಿ ಔಟಾಗುತ್ತಿದ್ದಂತೆಯೇ ಬ್ಯಾಟಿಂಗ್ ಗೆ ಇಳಿದ ಕನ್ನಡಿಗ ಕೆ.ಎಲ್.ರಾಹುಲ್ ಅಕರ್ಷಕ ಆಟಕ್ಕೆ ಮನಮಾಡಿದ್ರು. ಶ್ರೇಯಸ್ ಅಯ್ಯರ್ ಜೊತೆಗೂಡಿದ ರಾಹುಲ್ ನ್ಯೂಜಿಲೆಂಡ್ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ್ರು.

ಅಯ್ಯರ್ 62 ರನ್ ಗಳಿಸಿದ್ರೆ, ರಾಹುಲ್ 2 ಆಕರ್ಷಕ ಸಿಕ್ಸರ್ ಹಾಗೂ 9 ಬೌಂಡರಿ ನೆರವಿನಿಂದ 112 ರನ್ ಗಳಿಸಿದ್ರು. ಕನ್ನಡಿಗ ಮನೀಶ್ ಪಾಂಡೆ 42 ರನ್ ನೆರವಿನಿಂದ ಭಾರತ 50 ಓವರ್ ಗಳಲ್ಲಿ 7 ವಿಕೆಟ್ 296 ರನ್ ಗಳಿಸಿದ್ರು.

ಹಮೀಶ್ ಬೆನ್ನಿಟ್ 4, ಕೈಲೆ ಜಿಮ್ಮಿಸನ್ ಹಾಗೂ ಜೇಮ್ಸ್ ನಿಶ್ಶಮ್ ತಲಾ 1 ವಿಕೆಟ್ ಪಡೆದುಕೊಂಡಿದ್ದಾರೆ.


ಭಾರತ ನೀಡಿದ ಟಾರ್ಗೆಟ್ ಬೆನ್ನತ್ತಿದ ನ್ಯೂಜಿಲೆಂಡ್ ತಂಡಕ್ಕೆ ಆರಂಭಿಕರಾದ ಮಾರ್ಟಿಗ್ ಗುಫ್ಟಿಲ್ ಹಾಗೂ ಹೆನ್ರಿ ನಿಕೋಲಸ್ ನೆರವಾದ್ರು. ಮಾರ್ಟಿಗ್ ಗುಪ್ಟಿಲ್ 66 ರನ್ ಗಳಿಸಿದ್ರೆ ಹೆನ್ರಿ ನಿಕೋಲಸ್ 80 ರನ್ ಗಳಿಸಿದ್ರು.

ನಂತರ ಬಂದ ಕೇನ್ ವಿಲಿಯಂಸನ್ 22 ಹಾಗೂ ರಾಸ್ ಟೇಲರ್ ಆಟ ಕೇವಲ 12 ರನ್ ಸೀಮಿತವಾಗಿತ್ತು. ನ್ಯೂಜಿಲೆಂಡ್ ಬೌಲರ್ ಗಳನ್ನು ಕಾಡಿದ ಚಹಲ್ ನಂತರ ಬಂದ ಜೇಮ್ಸ್ ನಿಶ್ಶಮ್ ಗೆ ಪೆವಿಲಿಯನ್ ಹಾದಿ ತೋರಿಸಿದ್ದರು.

ಆದರೆ ವಿಕೆಟ್ ಕೀಪರ್ ಟಾಮ್ ಲ್ಯಾಂಥಮ್ 32 ಹಾಗೂ ಕೊಲಿನ್ ಗ್ರ್ಯಾಂಡ್ ಹೋಮ್ 58 ರನ್ ನೆರವಿನಿಂದ ನ್ಯೂಜಿಲೆಂಡ್ ತಂಡ 47.1 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 300 ರನ್ ಗಳಿಸಿತು. ಈ ಮೂಲಕ ನ್ಯೂಜಿಲೆಂಡ್ ಗೆಲುವಿನ ನಗೆ ಬೀರಿದೆ. ಚಹಲ್ 3, ಠಾಕೂರ್ ಹಾಗೂ ಜಡೇಜಾ ತಲಾ 1 ವಿಕೆಟ್ ಪಡೆದುಕೊಂಡ್ರು.

ಸಂಕ್ಷಿಪ್ತ ಸ್ಕೋರ್ :
ಭಾರತ : ಕೆ.ಎಲ್.ರಾಹುಲ್ 112 (113), ಶ್ರೇಯಸ್ ಅಯ್ಯರ್ 62 (62), ಪ್ರಥ್ವಿ ಶಾ 40 (42), ಮನೀಶ್ ಪಾಂಡೆ 42 (48), ಹಮೀಶ್ ಬೆನ್ನೆಟ್ 64/4, ಕೈಲ್ ಜೆಮ್ಮಿಸನ್ 53/1, ಜೇಮ್ಸ್ ನಿಶ್ಶಮ್ 50/1
ನ್ಯೂಜಿಲೆಂಡ್ : ಹೆನ್ರಿ ನಿಕೋಲಸ್ 80 (103), ಕೊಲಿನ್ ಡಿ ಗ್ರ್ಯಾಂಡ್ ಹೋಮ್ 58 (28), ಮಾರ್ಟಿನ್ ಗುಫ್ಟಿಲ್ 66 (46), ಟಾಮ್ ಲ್ಯಾಂಥಮ್ 32 (34), ಕೇನ್ ವಿಲಯಂಸನ್ 22 (31), ಜೇಮ್ಸ್ ನಿಶ್ಶಮ್ 19 (25), ರಾಸ್ ಟೇಲರ್ 12 (18), ಯಜುವೇಂದ್ರ ಚಹಲ್ 47 (3), ಶಾರ್ದೂಲ್ ಠಾಕೂರ್ 87/1, ರವೀಂದ್ರ ಜಡೇಜಾ 45/1

Leave A Reply

Your email address will not be published.