ಬೆಂಗಳೂರು: ಆಧುನಿಕ ಕ್ರಿಕೆಟ್’ನ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ (11 years for Virat Kohli Test Debut) ಅವರ ಕ್ರಿಕೆಟ್ ಬದುಕಿನಲ್ಲಿ ಜೂನ್ 20 ಮಹತ್ವದ ದಿನ. ಕಾರಣ, ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ದಿನವಿದು.
ಆಧುನಿಕ ಮಾಸ್ಟರ್ ಬ್ಲಾಸ್ಟರ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್’ಗೆ ಕಾಲಿಟ್ಟು ಇಂದಿಗೆ ಭರ್ತಿ 11 ವರ್ಷಗಳು ತುಂಬಿವೆ. 2011ರ ಜೂನ್ 20ರಂದು ಜಮೈಕಾದ ಕಿಂಗ್’ಸ್ಟನ್ ಮೈದಾನದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ವಿಶೇಷ ಏನೆಂದರೆ ಭಾರತ ತಂಡದ ಮಾಜಿ ನಾಯಕರಾದ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಕೂಡ ಟೆಸ್ಟ್ ಪದಾರ್ಪಣೆ ಮಾಡಿದ್ದು ಜೂನ್ 20ರಂದೇ.
ಭಾರತ ಪರ 101 ಟೆಸ್ಟ್ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ, 50ರ ಸರಾಸರಿಯಲ್ಲಿ 27 ಶತಕಗಳ ಸಹಿತ 8043 ರನ್ ಗಳಿಸಿದ್ದಾರೆ. 68 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ವಿರಾಟ್ ಕೊಹ್ಲಿ, ತಮ್ಮ ನಾಯಕತ್ವದಲ್ಲಿ 40 ಪಂದ್ಯಗಳನ್ನು ಗೆದ್ದಿದ್ದಾರೆ. ಅತೀ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟಿರುವ ನಾಯಕರಲ್ಲಿ ವಿರಾಟ್ ಕೊಹ್ಲಿ ಮೊದಲಿಗ. 11 ವರ್ಷಗಳ ಹಿಂದೆ ಇದೇ ದಿನದಂದು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾಪರ್ಣೆ ಮಾಡಿದ್ದರು. ಬಲಗೈ ಆಟಗಾರ ವಿರಾಟ್ ಕೊಹ್ಲಿ ಜಮೈಕಾದ ಕಿಂಗ್‌ಸ್ಟನ್‌ನಲ್ಲಿ ನಡೆದ ವೆಸ್ಟ್ ಇಂಡಿಸ್ ವಿರುದ್ದದ ಪದಾರ್ಪಣೆಯ ಟೆಸ್ಟ್ ಪಂದ್ಯದಲ್ಲಿ ಅವರು ಮೊದಲ ಇನ್ನಿಂಗ್ಸ್‌ನಲ್ಲಿ 4 ಮತ್ತು 15 ರನ್ ಬಾರಿಸಿದ್ದರು. 11 ವರ್ಷಗಳ ನಂತರ ಕೊಹ್ಲಿ ಭಾರತ ತಂಡದ ಸರ್ವಶ್ರೇಷ್ಟ ಆಟಗಾರರಲ್ಲಿ ಓರ್ವರಾಗಿದ್ದಾರೆ. ಅಲ್ಲದೇ ಸುದೀರ್ಘ ಅವಧಿಯ ವರೆಗೆ ಭಾರತ ತಂಡವನ್ನು ವಿರಾಟ್ ಕೊಹ್ಲಿ ಮುನ್ನೆಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಟೆಸ್ಟ್‌ನಲ್ಲಿ 11 ವರ್ಷಗಳನ್ನು ಪೂರ್ಣಗೊಳಿಸಿದ ನಂತರ, ಕೊಹ್ಲಿ ಸೋಮವಾರ ಕೂನಲ್ಲಿ ವೀಡಿಯೊ ಮಾಂಟೇಜ್ ಅನ್ನು ಹಂಚಿಕೊಂಡಿದ್ದಾರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಎಲ್ಲಾ ಪ್ರಮುಖ ಮೈಲಿಗಲ್ಲುಗಳನ್ನು ಒಳಗೊಂಡಿದೆ ಮತ್ತು ಅವರು ಪೋಸ್ಟ್‌ಗೆ “ಟೈಮ್ ಫ್ಲೈಸ್” ಎಂದು ಶೀರ್ಷಿಕೆ ನೀಡಿದ್ದಾರೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯ ಬಾರಿ ಶತಕ ಬಾರಿಸಿದ್ದರು. ಈ ವರ್ಷದ ಜನವರಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 1-2 ಸರಣಿ ಸೋತ ನಂತರ ಕೊಹ್ಲಿ ಭಾರತದ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ದರು. 68 ಪಂದ್ಯಗಳಲ್ಲಿ 40 ಗೆಲುವಿನೊಂದಿಗೆ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕನಾಗಿ ಉಳಿದಿದ್ದಾರೆ. ಗ್ರೇಮ್ ಸ್ಮಿತ್, ಅಲನ್ ಬಾರ್ಡರ್, ಸ್ಟೀಫನ್ ಫ್ಲೆಮಿಂಗ್, ರಿಕಿ ಪಾಂಟಿಂಗ್ ಮತ್ತು ಕ್ಲೈವ್ ಲಾಯ್ಡ್ ನಂತರ ಟೆಸ್ಟ್ ಕ್ರಿಕೆಟ್‌ನ ಶ್ರೇಷ್ಟ ಆಟಗಾರಾಗಿ ಕೊಹ್ಲಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ : ICC T20 World Cup 2022 : ಭಾರತ ತಂಡಕ್ಕೆ ದಿನೇಶ್ ಕಾರ್ತಿಕ್ ಆಯ್ಕೆ, ಆಶಿಶ್ ನೆಹ್ರಾ ಮಹತ್ವದ ಘೋಷಣೆ
ಇದನ್ನೂ ಓದಿ : ICC T20 World Cup : ಇದೇ ಟೀಮ್ ಇಂಡಿಯಾದ ಬೆಸ್ಟ್ ಪ್ಲೇಯಿಂಗ್ XI ; ಇದು News Next ಚಾಯ್ಸ್
11 years for Virat Kohli Test Debut Big Day in World Cricket