ಮಂಗಳವಾರ, ಏಪ್ರಿಲ್ 29, 2025
HomeSportsCricketVirat Kohli New Record : 10 ವರ್ಷಗಳಲ್ಲಿ 20 ಸಾವಿರ ರನ್ ;...

Virat Kohli New Record : 10 ವರ್ಷಗಳಲ್ಲಿ 20 ಸಾವಿರ ರನ್ ; ಶತಕ “ಬರ”ದೇ ಇದ್ರೂ ಕೊಹ್ಲಿಯೇ ಕಿಂಗ್

- Advertisement -

ಬೆಂಗಳೂರು : ಆಧುನಿಕ ಕ್ರಿಕೆಟ್”ನ ಮಾಸ್ಟರ್ ಬ್ಲಾಸ್ಟರ್ ವಿರಾಟ್ ಕೊಹ್ಲಿ (Virat Kohli) ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕ ಬಾರಿಸದೆ ಎರಡೂವರೆ ವರ್ಷಗಳೇ ಕಳೆದು ಹೋಗಿವೆ. ವಿರಾಟ್ ಒಟ್ಟು 70 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದು ಕಿಂಗ್ ಕೊಹ್ಲಿಯ (Virat Kohli New Record) 71ನೇ ಶತಕಕ್ಕಾಗಿ ಇಡೀ ಕ್ರಿಕೆಟ್ ಜಗತ್ತೇ ಚಾತಕ ಪಕ್ಷಿಯಂತೆ ಕಾಯುತ್ತಿದೆ. 2019ರ ನವೆಂಬರ್ 22 ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದೇ ಕೊನೆ. ಬಳಿಕ ವಿರಾಟ್ ಬ್ಯಾಟ್’ನಿಂದ ಒಂದೇ ಒಂದು ಶತಕ ಬಂದಿಲ್ಲ.

ಶತಕದ ಬರದ ನಡುವೆಯೂ ಕ್ರಿಕೆಟ್ ಜಗತ್ತಿಗೆ ಈಗಲೂ ಕೊಹ್ಲಿಯೇ ಕಿಂಗ್. ಇದಕ್ಕೆ ಸಾಕ್ಷಿ ಕಳೆದ 10 ವರ್ಷಗಳ ಅಮೋಘ ಸಾಧನೆ. ಅಂತಾರಾಷ್ಟ್ರೀಯ ಕ್ರಿಕೆಟ್’ನ ಕಳೆದ 10 ವರ್ಷ ಗಳಲ್ಲಿ 20 ಸಾವಿರ ರನ್ ಗಳಿಸಿ ಏಕೈಕ ಆಟಗಾರ ವಿರಾಟ್ ಕೊಹ್ಲಿ. ಸಮಕಾಲೀನ ಕ್ರಿಕೆಟ್’ನಲ್ಲಿ ಇಂಗ್ಲೆಂಡ್’ನ ಜೋ ರೂಟ್ (Joe Root), ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ( Steve Smith), ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ( Kane Williamson) ಅವರನ್ನು ವಿರಾಟ್ ಕೊಹ್ಲಿಗೆ ಪ್ರತಿಸ್ಪರ್ಧಿಗಳೆಂದು ಬಿಂಬಿಸಲಾಗುತ್ತಿದೆ. ಆದರೆ ರನ್ ಗಳಿಸುವ ವಿಚಾರದಲ್ಲಿ ಇವರು ಯಾರೂ ಕೊಹ್ಲಿಗೆ ಸರಿಸಾಟಿಯಲ್ಲ ಎಂಬುದನ್ನು ಅಂಕಿ ಅಂಶಗಳೇ ಹೇಳುತ್ತವೆ.

ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದು 2008ರ ಆಗಸ್ಟ್ 18ರಂದು. ಆ ದಿನದಿಂದ ಇಲ್ಲಿಯವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ರನ್ ಗಳಿಸಿದವರು ಯಾರೆಂದು ನೋಡಿದರೆ ಸಿಗುವ ಉತ್ತರ ವಿರಾಟ್ ಕೊಹ್ಲಿ. 2008ರಲ್ಲಿ ಅಂತಾರಾಷ್ಟ್ರೀಯ ವೃತ್ತಿಜೀವನ ಶುರು ಮಾಡಿದ ನಂತರ ವಿರಾಟ್ ಕೊಹ್ಲಿ ಇಲ್ಲಿಯವರೆಗೆ 458 ಪಂದ್ಯಗಳಿಂದ 70 ಶತಕಗಳ ಸಹಿತ 23,650 ರನ್ ಕಲೆ ಹಾಕಿದ್ದಾರೆ. ಇದೇ ಸಮಯದಲ್ಲಿ ಇಂಗ್ಲೆಂಡ್ ತಂಡದ ಜೋ ರೂಟ್ 302 ಪಂದ್ಯಗಳಿಂದ ಗಳಿಸಿರುವ ರನ್ 17,017. ಶತಕ 42.

ವಿರಾಟ್ ಕೊಹ್ಲಿ ಪದಾರ್ಪಣೆಯ ದಿನದಿಂದ ಇಲ್ಲಿಯವರೆಗೆ ಅತೀ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದವರ ಸಾಲಿನಲ್ಲಿ ದಕ್ಷಿಣ ಆಫ್ರಿಕಾದ ಹಶೀಮ್ ಆಮ್ಲಾ ಮೂರನೇ ಸ್ಥಾನ ದಲ್ಲಿದ್ದಾರೆ. 2008ರ ಆಗಸ್ಟ್ 18 ರಿಂದ 317 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಆಮ್ಲಾ, 50 ಶತಕಗಳ ಸಹಿತ 16,776 ರನ್ ಕಲೆ ಹಾಕಿದ್ದಾರೆ. ಇನ್ನು ನ್ಯೂಜಿಲೆಂಡ್’ನ ರಾಸ್ ಟೇಲರ್(16,227, ಶತಕ 36), ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (15,853, ಶತಕ 43) ಮತ್ತು ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ (15,483, ಶತಕ 37) ನಂತರದ ಸ್ಥಾನಗಳಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದೊಂದಿಗೆ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ವಾಪಸ್ಸಾಗಲಿದ್ದಾರೆ. ಕಳೆದ ವರ್ಷ ಅರ್ಧಕ್ಕೇ ನಿಂತಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಜುಲೈ 1ರಿಂದ 5ರವರೆಗೆ ಎಜ್’ಬಾಸ್ಟನ್ ಮೈದಾನದಲ್ಲಿ ನಡೆಯಲಿದೆ.

ಇದನ್ನೂ ಓದಿ : 1 To 99 Indian cricketers jersey numbers : ಟೀಮ್ ಇಂಡಿಯಾ ಆಟಗಾರರ ಜರ್ಸಿ ನಂಬರ್ ; ಯಾರ ನಂಬರ್ ಎಷ್ಟು

ಇದನ್ನೂ ಓದಿ : ಡಿಕೆ ಡೆಬ್ಯು ಮಾಡಿದಾಗ ರಿಷಬ್ 7 ವರ್ಷದ ಹುಡುಗ‌ ; ಈಗ ರಿಷಬ್‌ ಪಂತ್ ನಾಯಕತ್ವದಲ್ಲಿ ಆಡಲಿರುವ ದಿನೇಶ್ ಕಾರ್ತಿಕ್

20000 runs in 10 years Virat Kohli New Record

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular