ICC World 2023 India vs Australia : ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡದ ( Indian Cricket Team) ಸೋಲನ್ನು ಭಾರತೀಯರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿಶ್ವಕಪ್ (World Cup 2023) ಸೋಲಿನ ಬೆನ್ನಲ್ಲೇ ಭಾರತೀಯ ಆಟಗಾರರು ಕಣ್ಣೀರು ಸುರಿಸಿದ್ದಾರೆ. ಆದರೆ 2023 ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಸೋಲಿಗೆ ಕಾರಣವಾಗಿರುವುದು ಇದೇ 9 ಕಾರಣಗಳು. ಅಷ್ಟಕ್ಕೂ ಆ ಕಾರಣಗಳು ಯಾವುವು ಅನ್ನೋ ಮಾಹಿತಿ ಇಲ್ಲಿದೆ.
ವಿಶ್ವಕಪ್ ಆರಂಭದಿಂದಲೂ ಭಾರತ ಅದ್ಬುತವಾಗಿ ಬ್ಯಾಟಿಂಗ್ ನಡೆಸಿತ್ತು. ಲೀಗ್ ಹಂತದಲ್ಲಿ ಸತತ ೯ ಪಂದ್ಯಗಳನ್ನು ಗೆದ್ದಿರುವ ಭಾರತ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಭರ್ಜರಿಯಾಗಿಯೇ ಸೋಲಿಸಿ ವಿಶ್ವಕಪ್ ಫೈನಲ್‌ಗೆ ಎಂಟ್ರಿ ಕೊಟ್ಟಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ದ ಫೈನಲ್‌ನಲ್ಲಿ ಸೋಲು ಕಂಡಿದೆ.
ಭಾರತ 20 ವರ್ಷಗಳ ಹಿಂದಿನ ಸೇಡನ್ನು ತೀರಿಸಿಕೊಳ್ಳುತ್ತದೆ ಎಂದು ಕಾದು ಕುಳಿತಿದ್ದ ಭಾರತೀಯರಿಗೆ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಂದಿನ ಏಕದಿನ ವಿಶ್ವಕಪ್ ಜಯಿಸಲು ಭಾರತ ಇನ್ನೂ ನಾಲ್ಕು ವರ್ಷಗಳ ಕಾಲ ಕಾಯಲೇ ಬೇಕಾಗಿದೆ. ಅಷ್ಟಕ್ಕೂ ಭಾರತ ಸೆಮಿಫೈನಲ್ ಪಂದ್ಯದಲ್ಲಿ ಸೋಲನ್ನು ಕಾಣಲು ಕಾರಣವಾಗಿರುವ ಅಂಶಗಳು ಇಲ್ಲಿವೆ.

ಫಲಿಸಲಿಲ್ಲ ಭಾರತ ರಣತಂತ್ರ
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್, ನಿರೀಕ್ಷೆಗಿಂತ ನಿಧಾನವಾಗಿ ಮತ್ತು ಶುಷ್ಕವಾಗಿದ್ದು ನಿರ್ಣಾಯಕ ಪಾತ್ರವಹಿಸಿತ್ತು. ಜೊತೆಗೆ ಭಾರತ ತಂಡ ಮಾಡಿಕೊಂಡಿದ್ದ ರಣತಂತ್ರ ಫಲಿಸಲೇ ಇಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ ಪಿಚ್ ಸ್ವರೂಪ ಬದಲಾಗಿತ್ತು. ನಿಧಾನಗತಿಯ ಪಿಚ್ ಲಾಭ ಪಡೆಯವಲ್ಲಿ ಭಾರತ ವಿಫಲವಾಯ್ತು.
ಇದನ್ನೂ ಓದಿ : 11 ಪಂದ್ಯ 3 ಶತಕ, 765 ರನ್ : ವಿಶ್ವಕಪ್ ಸೋತರು ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ
ಫಲಿಸಿದ ಪ್ಯಾಟ್ ಕಮ್ಮಿನ್ಸ್ ಚಾಣಾಕ್ಷತೆ
ಹೌದು, ಆಸ್ಟ್ರೇಲಿಯಾ ಯಾವುದೇ ಫೈನಲ್ ಪಂದ್ಯವನ್ನು ಅಷ್ಟು ಸುಲಭವಾಗಿ ಎದುರಾಳಿಗೆ ಬಿಟ್ಟು ಕೊಡುವುದಿಲ್ಲ. ಅದು ಈ ಬಾರಿಯ ವಿಶ್ವಕಪ್‌ನಲ್ಲಿಯೂ ನಿಜವಾಗಿದೆ. ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಚಾಣಾಕ್ಷತೆ ಪಂದ್ಯದಲ್ಲಿ ಸಕ್ಸಸ್ ಆಗಿದೆ. ಬೌಲಿಂಗ್ ಬದಲಾವಣೆಯ ಮೂಲಕ ಭಾರತೀಯ ಆಟಗಾರರನ್ನು ಕಟ್ಟಿ ಹಾಕಿದ್ದಾರೆ.

ಆಸ್ಟ್ರೇಲಿಯಾ ತಂಡದ ಆಕ್ರಮಣಕಾರಿ ಬ್ಯಾಟಿಂಗ್
ಭಾರತ ನೀಡಿದ್ದ ಗುರಿಯನ್ನು ಬೆನ್ನತ್ತಲು ಹೊರಟ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗಿತ್ತು. ಆರಂಭಿಕ ವಾರ್ನರ್, ಮಾರ್ಷ್, ಸ್ಮಿತ್ ಔಟಾದ್ರೂ ಕೂಡ ಟ್ರಾವೆಸ್ ಹೆಡ್ ಹಾಗೂ ಲಾಬುಶಂಗೆ ಉತ್ತಮ ಜೊತೆಯಾಟ ನೀಡಿದ್ರು. ಟ್ರಾವೆಸ್ ಹೆಡ್ ಆಕ್ರಮಣಕಾರಿ ಆಟಕ್ಕೆ ಭಾರತೀಯ ಬೌಲರ್‌ಗಳು ಪರದಾಡಿದ್ದಾರೆ.
ಆಸ್ಟ್ರೇಲಿಯಾಕ್ಕೆ ವರವಾದ ಇಬ್ಬನಿ
ಭಾರತೀಯ ಸ್ಪಿನ್ನರ್‌ಗಳು ಆಸ್ಟ್ರೇಲಿಯಾ ವಿರುದ್ದ ದಾಳಿ ನಡೆಸಲು ತೊಡಕಾಗಿದ್ದು ಇಬ್ಬನಿ. ಒದ್ದೆಯಾದ ಚೆಂಡಿನ ಕಾರಣದಿಂದಾಗಿ ಸ್ಪಿನ್ನರ್‌ಗಳು ಹೆಚ್ಚು ಟರ್ನ್ ಮಾಡೋದಕ್ಕೆ ಸಾಧ್ಯವಾಗಿಲ್ಲ. ಇದು ಆಸ್ಟ್ರೇಲಿಯಾ ಆಟಗಾರರಿಗೆ ವರದಾನವಾಗಿತ್ತು. ಅಲ್ಲದೇ ಉತ್ತಮ ಜೊತೆಯಾಟಕ್ಕೂ ಸಹಕಾರಿಯಾತ್ತು.
ಕೈಕೊಟ್ಟ ರೋಹಿತ್ ಶರ್ಮಾ ಕಾರ್ಯತಂತ್ರ
ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಕಾರ್ಯತಂತ್ರ ಫಲಿಸಲಿಲ್ಲ. ಕಡಿಮೆ ಸ್ಕೋರ್ ಟಾರ್ಗೆಟ್ ನೀಡಿದ್ದರೂ ಕೂಡ ಆಸ್ಟ್ರೇಲಿಯಾವನ್ನು ಕಟ್ಟಿ ಹಾಕಲು ಬೌಲರ್‌ಗಳನ್ನು ಬಳಸಿಕೊಂಡ ರೀತಿ ಸರಿಯಾಗಿ ಇರಲಲ್ಲ. ಅಷ್ಟೇ ಅಲ್ಲ ಭಾರತ ಫೀಲ್ಡಿಂಗ್ ಕೂಡ ಹೇಳಿಕೊಳ್ಳುವಷ್ಟು ಚೆನ್ನಾಗಿ ಇರಲಿಲ್ಲ. ಫೀಲ್ಡಿಂಗ್ ವೈಫಲ್ಯ ಕೂಡ ಸೋಲಿಗೆ ಕಾರಣವಾಯ್ತು.

ಆಸ್ಟ್ರೇಲಿಯಾದ ಅದ್ಬುತ ಫೀಲ್ಡಿಂಗ್, ಪರದಾಡಿದ ಭಾರತ
ಭಾರತ ತಂಡ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ನಡೆಸಿತ್ತು. ಆದೆ ೧೦ ಓವರ್‌ಗಳ ನಂತರ ಭಾರತ ಬೌಂಡರಿ ಬಾರಿಸಲು ಪರದಾಟ ನಡೆಸಿತ್ತು. ಆಸ್ಟ್ರೇಲಿಯಾದ ಪ್ರತೀ ಆಟಗಾರರು ಅದ್ಬುತ ಫೀಲ್ಡಿಂಗ್ ಭಾರತಕ್ಕೆ ಸಂಕಷ್ಟಕ್ಕೆ ನೂಕಿತ್ತು. ಇದೇ ಕಾರಣದಿಂದ ಭಾರತ ಕೇವಲ 241 ರನ್‌ಗಳಿಸಲಷ್ಟೇ ಸಾಧ್ಯವಾಯ್ತು.
ಇದನ್ನೂ ಓದಿ : ರೋಹಿತ್ ಶರ್ಮಾಗೆ ಕೊನೆಯ ಐಸಿಸಿ ಸರಣಿ ಆಗುತ್ತಾ ವಿಶ್ವಕಪ್ ಫೈನಲ್ ? ನಿವೃತ್ತಿ ಪಡೆಯುತ್ತಾರಾ ರೋಹಿತ್ ಶರ್ಮಾ
ಕೈಕೊಟ್ಟ ಭಾರತೀಯ ಆಟಗಾರರ ಜೊತೆಯಾಟ
ಭಾರತ ತಂಡದ ಪರ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಹೊರತು ಪಡಿಸಿ ಉಳಿದ ಯಾವುದೇ ಆಟಗಾರರು ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲವಾಗಿದ್ದು, ಭಾರತ ಸೋಲಿಗೆ ಪ್ರಮುಖ ಕಾರಣ. ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ ನಿರಾಸೆಯ ಆಟ ಭಾರತವನ್ನು ಸಂಕಷ್ಟಕ್ಕೆ ನೂಕಿತ್ತು.

ಮಧ್ಯಮ ಕ್ರಮಾಂಕದಲ್ಲಿ ಆಟಗಾರ ವೈಫಲ್ಯ
ಭಾರತ ತಂಡದ ಆರಂಭಿಕರಾದ ಶುಭಮನ್ ಗಿಲ್ ಹಾಗೂ ರೋಹಿತ್ ಶರ್ಮ ಬೇಗನೆ ವಿಕೆಟ್ ಒಪ್ಪಿಸಿದ್ದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗ ಬೇಕಾಗಿದ್ದ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ರು. ಆದರೆ ಕೆಎಲ್ ರಾಹುಲ್ ನಿಧಾನಗತಿಯ ಬ್ಯಾಟಿಂಕ್ ಭಾರತಕ್ಕೆ ಮಾರಕವಾಗಿದೆ.
ಪಿಚ್ ಪರಿಸ್ಥಿತಿಯ ಲಾಭ ಪಡೆದ ಆಸ್ಟ್ರೇಲಿಯಾ
ಅಹಮದಾಬಾದ್‌ನ ಪಿಚ್ ಪರಿಸ್ಥಿತಿಯನ್ನು ಚೆನ್ನಾಗಿಯೇ ಅರಿತುಕೊಂಡಿದ್ದ ಆಸ್ಟ್ರೇಲಿಯಾ ಸಂಪೂರ್ಣ ಲಾಭವನ್ನು ಪಡೆದುಕೊಂಡಿದೆ. ಭಾರತದ ಬ್ಯಾಟಿಂಗ್ ಮಾಡುವ ವೇಳೆ ಇದ್ದ ಪಿಚ್ ಸ್ವರೂಪ ಆಸ್ಟ್ರೇಲಿಯಾ ಬ್ಯಾಟಿಂಗ್ ವೇಳೆ ಬದಲಾಗಿತ್ತು. ಆದರೆ ಇದನ್ನು ಗುರುತಿಸುವಲ್ಲಿ ಭಾರತ ವಿಫಲವಾಯ್ತು.
2023 Cricket World Cup 9 reasons for India defeat against Australia