World Cup 2023 Final : ಆಸ್ಟ್ರೇಲಿಯಾ 6ನೇ ಬಾರಿಗೆ ವಿಶ್ವಚಾಂಪಿಯನ್‌ : ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾಕ್ಕೆ ಸಿಕ್ಕ ಬಹುಮಾನದ ಮೊತ್ತವೆಷ್ಟು ?

ICC World Cup 20023 FInal  : ಭಾರತವನ್ನು ವಿಶ್ವಕಪ್‌ 20023 ಫೈನಲ್‌ನಲ್ಲಿ ಸೋಲಿಸುವ ಮೂಲಕ ಆಸ್ಟ್ರೇಲಿಯಾ (Austraila Worl Champion) ತಂಡ 6ನೇ ಬಾರಿಗೆ ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ICC World Cup 20023 FInal  : ಭಾರತವನ್ನು ವಿಶ್ವಕಪ್‌ 20023 ಫೈನಲ್‌ನಲ್ಲಿ ಸೋಲಿಸುವ ಮೂಲಕ ಆಸ್ಟ್ರೇಲಿಯಾ (Austraila Worl Champion) ತಂಡ 6ನೇ ಬಾರಿಗೆ ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಈ ಮೂಲಕ ಭಾರತ (Indian Cricket Team) ಎರಡನೇ ಬಾರಿಗೆ ರನ್ನರ್ಸ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ಹಾಗಾದ್ರೆ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ ಗೆದ್ದ ಪ್ರಶಸ್ತಿಯ ಮೊತ್ತ ಎಷ್ಟು ಅನ್ನೋ ಕುತೂಹಲವಿದ್ರೆ ಈ ಸ್ಟೋರಿ ಓದಿ.

World Cup 2023 Final AUS vs IND austraila world champion 6th times how much is prize money Australia who won the World Cup
Image Credit : ICC

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Ahamedabad Narendra Modi Stadium) ಭಾನುವಾರದ ನಡೆದ ಪಂದ್ಯಾವಳಿಯನ್ನು ದಾಖಲೆಯ ಸಂಖ್ಯೆಯಲ್ಲಿ ಪ್ರೇಕ್ಷಕರು ವೀಕ್ಷಿಸಿದ್ದಾರೆ. ಭಾರತವನ್ನು 6 ವಿಕೆಟ್‌ಗಳ ಅಂತರದಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ ತಂಡ 6ನೇ ಬಾರಿ ಏಕದಿನ ವಿಶ್ವಕಪ್‌ ಜಯಿಸಿದೆ.

ಇದನ್ನೂ ಓದಿ : 6ನೇ ಬಾರಿಗೆ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ: ಟ್ರಾವೆಸ್‌ ಹೆಡ್‌ ಆರ್ಭಟ, ಎಲ್ಲಾ ಗೆದ್ದು ಫೈನಲ್‌ನಲ್ಲಿ ಸೋತ ಭಾರತ

ಟಾಸ್‌ ಗೆದ್ದ ಆಸ್ಟ್ರೇಲಿಯಾ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಹೀಗಾಗಿ ರೋಹಿತ್‌ ಶರ್ಮಾ ನೇತೃತ್ವದ ಭಾರತ ತಂಡ ಬ್ಯಾಟಿಂಗ್‌ ನಡೆಸಿದ್ರು. ಆದರೆ ಆಸ್ಟ್ರೇಲಿಯಾ ಬೌಲರ್‌ಗಳ ಆರ್ಭಟಕ್ಕೆ ಸಿಲುಕಿದ ಭಾರತ ಕ್ರಿಕೆಟ್‌ ತಂಡ ಕೇವಲ 241 ರನ್‌ಗಳ ಗುರಿಯನ್ನು ನೀಡಿತ್ತು. ಆದರೆ ಆಸ್ಟ್ರೇಲಿಯಾ ತಂಡ ಇನ್ನೂ ೬ ವಿಕೆಟ್‌ ಬಾಕಿ ಇರುವಂತೆಯೇ ಗೆಲುವಿನ ದಡ ತಲುಪಿದೆ.

World Cup 2023 Final AUS vs IND austraila world champion 6th times how much is prize money Australia who won the World Cup
Image Credit : BCCI

ವಿಶ್ವಕಪ್‌ನಲ್ಲಿ ಸತತ 10 ಪಂದ್ಯಗಳ ಗೆಲುವಿನೊಂದಿಗೆ ವಿಶ್ವಕಪ್‌ ಫೈನಲ್‌ ಪ್ರವೇಶಿಸಿದ್ದ ಭಾರತ ತಂಡ ನಿರಾಸೆ ಅನುಭವಿಸಿದೆ. ಈ ಮೂಲಕ ೩ನೇ ಬಾರಿಗೆ ವಿಶ್ವಕಪ್‌ ಗೆಲ್ಲುವ ಅವಕಾಶವನ್ನು ಭಾರತ ಕೈ ಚೆಲ್ಲಿದೆ. ಆಸ್ಟ್ರೇಲಿಯಾ ಈ ಬಾರಿಯ ವಿಶ್ವಕಪ್‌ ಗೆಲ್ಲುವ ಮೂಲಕ ಅತೀ ಹೆಚ್ಚು ವಿಶ್ವಕಪ್‌ ಗೆದ್ದ ತಂಡ ಎನಿಸಿಕೊಂಡಿದೆ.

ಇದನ್ನೂ ಓದಿ : ರೋಹಿತ್‌ ಶರ್ಮಾಗೆ ಕೊನೆಯ ಐಸಿಸಿ ಸರಣಿ ಆಗುತ್ತಾ ವಿಶ್ವಕಪ್‌ ಫೈನಲ್‌ ? ನಿವೃತ್ತಿ ಪಡೆಯುತ್ತಾರಾ ರೋಹಿತ್‌ ಶರ್ಮಾ

ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ, ರನ್ನರ್ಸ್‌ ಅಪ್‌ ಭಾರತಕ್ಕೆ ಸಿಗುವ ಬಹುಮಾನದ ಮೊತ್ತವೆಷ್ಟು ?

ವಿಶ್ವಕಪ್‌ ಪಂದ್ಯಾವಳಿಯ ವಿಜೇತ ತಂಡವು USD 4 ಮಿಲಿಯನ್ (ಅಂದಾಜು ₹33 ಕೋಟಿ) ಮೊತ್ತವನ್ನು ಪಡೆದುಕೊಳ್ಳುತ್ತಾರೆ. ಇನ್ನು ರನ್ನರ್ಸ್‌ ಅಪ್‌ ಭಾರತ ಕ್ರಿಕೆಟ್‌ ತಂಡವು USD 2 ಮಿಲಿಯನ್ (ಸುಮಾರು ₹ 16 ಕೋಟಿ) ಡಾಲರ್‌ ಮೊತ್ತವನ್ನು ಪಡೆದುಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೇ ಸೋತ ಸೆಮಿ-ಫೈನಲಿಸ್ಟ್‌ಗಳಾದ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಲಾ USD 800,000 (ಅಂದಾಜು ₹6.5 ಕೋಟಿ) ಪಡೆಯುತ್ತವೆ.

ಇನ್ನು ನಾಕೌಟ್‌ ಹಂತದಲ್ಲಿಯೇ ಪಂದ್ಯಾವಳಿಯಿಂದ ಹೊರ ಬೀದ್ದ ತಂಡಗಳಿಗೆ ತಲಾ USD 100,000 (ಸುಮಾರು ₹ 83 ಲಕ್ಷ) ನೀಡಲಾಗುತ್ತೆ. ಪ್ರತಿ ಗುಂಪು ಹಂತದ ಪಂದ್ಯದ ವಿಜೇತರು USD 40,000 (ಅಂದಾಜು ₹ 33 ಲಕ್ಷ) ರೂಪಾಯಿ ಪ್ರೋತ್ಸಾಹ ಧನವನ್ನು ಪಡೆದುಕೊಳ್ಳಲಿದ್ದಾರೆ. 20 ವರ್ಷಗಳ ಹಿಂದೆ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ತಂಡ ಮುಖಾಮುಖಿಯಾಗಿದ್ದು, ರಿಕಿ ಪಾಂಟಿಂಗ್ ತಂಡವು 125 ರನ್‌ಗಳ ಜಯದೊಂದಿಗೆ ವಿಶ್ಬಕಪ್‌ ಜಯಿಸಿತ್ತು.

ಇದನ್ನೂ ಓದಿ : ಐಪಿಎಲ್ 2024 : ನಿವೃತ್ತಿ ಘೋಷಿಸಿದ ಲಕ್ನೋ ಸೂಪರ್ ಜೈಂಟ್ಸ್ ಆರಂಭಿಕ ಆಟಗಾರ

10 ವರ್ಷಗಳಲ್ಲಿ ಪ್ರಮುಖ ಪಂದ್ಯಾವಳಿಯಲ್ಲಿ ಭಾರತದ ಸೋಲುಗಳು :

2014 ವಿಶ್ವ T20 ಫೈನಲ್, 2016 ವಿಶ್ವ T20 ಸೆಮಿಫೈನಲ್, 2017 ಚಾಂಪಿಯನ್ಸ್ ಟ್ರೋಫಿ ಫೈನಲ್, 2019 ODI ವಿಶ್ವಕಪ್ ಸೆಮಿಫೈನಲ್, 2022 T20 ವಿಶ್ವಕಪ್ ಸೆಮಿಫೈನಲ್ ಮತ್ತು ಬ್ಯಾಕ್-ಟು-ಬ್ಯಾಕ್ ರನ್ನರ್ಸ್-ಅಪ್ ಪ್ರಶಸ್ತಿ ಒಳಗೊಂಡಿದೆ. 2021 ಮತ್ತು 2023 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಲ್ಲಿ ಸೋಲು ಕಂಡಿದೆ.

ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್‌ ಫೈನಲ್‌ : ಸಂಕ್ಷಿಪ್ತ ಸ್ಕೋರ್‌

ಭಾರತ: 50 ಓವರ್‌ಗಳಲ್ಲಿ 240 ಆಲೌಟ್ (ಕೆಎಲ್ ರಾಹುಲ್ 66, ವಿರಾಟ್ ಕೊಹ್ಲಿ 54; ಮಿಚೆಲ್ ಸ್ಟಾರ್ಕ್ 3/55).

ಆಸ್ಟ್ರೇಲಿಯಾ 43 ಓವರ್‌ಗಳಲ್ಲಿ 241/4 (ಟ್ರಾವಿಸ್ ಹೆಡ್ 137, ಮಾರ್ನಸ್ ಲ್ಯಾಬುಸ್‌ಚಾಗ್ನೆ ಔಟಾಗದೆ 58; ಜಸ್ಪ್ರೀತ್ ಬುಮ್ರಾ 2/43).

World Cup 2023 Final AUS vs IND austraila world champion 6th times how much is prize money Australia 

Comments are closed.