KMF BAMUL Recruitment: ಇಲ್ಲಿದೆ ಉದ್ಯೋಗಾವಕಾಶ, 97,100 ರೂ. ವೇತನ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಉತ್ತಮ ಉದ್ಯೋಗ ಸಿಕ್ಕಲ್ಲಿ ಬೆಂಗಳೂರೋ ಮತ್ತೆಲ್ಲೋ ಹೋಗುವುದಕ್ಕಿಂತ ನಮ್ಮ ಊರಲ್ಲೇ ಉಳಿದು ಕೆಲಸ ಮಾಡುವುದು ಉತ್ತಮ ಎಂಬ ಅಭಿಪ್ರಾಯ ಇದೀಗ ಎಲ್ಲರನ್ನೂ ಮನೆಮಾಡಿದೆ. ಅಂದಹಾಗೆ ಈಗ್ಯಾಕೆ ಈ ಮಾತು ಎಂದರೆ ವಿಜಯಪುರ (Vijayapura Job Opportunity) ಮತ್ತು ಬಾಗಲಕೋಟೆ ( Bagalakote Job Opportunity ಜಿಲ್ಲೆಯ ಯುವಕ ಯುವತಿಯರಿಗಾಗಿ ಉತ್ತಮ ಉದ್ಯೋಗ ಅವಕಾಶವೊಂದು ತೆರೆದುಕೊಂಡಿದೆ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತವು ತನ್ನಲ್ಲಿ ಖಾಲಿ ಇರುವ 39 ಹುದ್ದೆಗಳನ್ನು ತುಂಬಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಇದಕ್ಕಾಗಿ ಸಂಸ್ಥೆಯು ಕೆಎಂಎಫ್‌-ಬಾಮುಲ್‌ (KMF BAMUL Recruitment) ಮೂಲಕ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು ವಿಜಯನಗರ ಭಾಗದಲ್ಲಿ ಸರಕಾರಿ ಉದ್ಯೋಗ ಅರಸುತ್ತಿರುವ ಆಸಕ್ತ ಮತ್ತು ಅರ್ಹ ಉದ್ಯೋಗಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದು ಸಂಸ್ಥೆ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಜನವರಿ 20, 2022 ಕೊನೆಯ ದಿನಾಂಕವಾಗಿದೆ.

ಸಂಸ್ಥೆಯ ಹೆಸರು: ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ

ಖಾಲಿ ಇರುವ ಹುದ್ದೆಗಳ ಸಂಖ್ಯೆ: 39

ಉದ್ಯೋಗದ ಸ್ಥಳ: ಬಾಗಲಕೋಟೆ ಮತ್ತು ವಿಜಯಪುರ, ಕರ್ನಾಟಕ

ಹುದ್ದೆಗಳ ಹೆಸರು: ತಾಂತ್ರಿಕ ಅಧಿಕಾರಿಗಳು, ಸಿಸ್ಟಮ್‌ ಅಧಿಕಾರಿಗಳು, ಹಾಗೂ ಅಸಿಸ್ಟೆಂಟ್‌ ಮ್ಯಾನೇಜರ್‌ಗಳು

ವೇತನ ಶ್ರೇಣಿ: ತಿಂಗಳಿಗೆ 21,400-97,100 ರೂ.

ಕೆಎಂಎಫ್‌ ವಿಮುಲ್‌ ರಿಕ್ರೂಟ್‌ಮೆಂಟ್‌ 2021 ಅರ್ಹತಾ ವಿವರಗಳು

ವಿದ್ಯಾರ್ಹತೆ: ಸಂಸ್ಥೆಯ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಯವುದೇ ಅಂಗೀಕೃತ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ, 12ನೇ ತರಗತಿ, ಅಥವಾ ಪದವಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರಬೇಕು.

ವಯೋಮಿತಿ: 18 ರಿಂದ 35 ವರ್ಷಗಳ ಒಳಗಿರಬೇಕು. ವಯೋಮಿತಿಯಲ್ಲಿ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ಹಾಗೂ ಎಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆಯಿದೆ.

ಅರ್ಜಿ ಶುಲ್ಕ: ಓಸಿ/ಸಾಮಾನ್ಯ ಅಭ್ಯರ್ಥಿಗಳಿಗೆ 1000/= ರೂಪಾಯಿಗಳು. ಎಸ್‌ಸಿ/ಎಸ್‌ಸಿ(ಎ)/ಎಸ್‌ಟಿ ಅಭ್ಯರ್ಥಿಗಳಿಗೆ 500/= ರೂಪಾಯಿಗಳು.

ಅರ್ಜಿ ಸಲ್ಲಿಸಲು ಉಪಯುಕ್ತ ಸೂಚನೆಗಳು:
ಮೊದಲು ಅಧಿಕೃತ ಅಧಿಸೂಚನೆಯನ್ನು ಕೂಲಂಕುಷವಾಗಿ ಓದಿ ಅರ್ಹತಾ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಿ (ಜಾಲತಾಣದ ಲಿಂಕ್‌ ಕೆಳಗೆ ನೀಡಲಾಗಿದೆ.)
ಅರ್ಜಿ ತುಂಬುವುದನ್ನು ಆರಂಭಿಸುವ ಮೊದಲು ನಿಮ್ಮ ಎಲ್ಲಾ ನಿಖರ ಮಾಹಿತಿಗಳು ಸುಲಭವಾಗಿ ಸಿಗುವಂತೆ ಸಿದ್ಧಪಡಿಸಿ ಇಟ್ಟುಕೊಳ್ಳಿ.
ಕೆಳಗೆ ನೀಡಲಾಗಿರುವ ಲಿಂಕ್ ಮೇಲೆ ಕ್ಲಿಕ್‌ ಮಾಡಿ ಅನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಿ.
ಎಲ್ಲಾ ಅವಶ್ಯಕ ವಿವರಗಳನ್ನು ಅಪ್‌ಡೇಟ್‌ ಮಾಡಿ ನಂತರ ಅವಶ್ಯವಿರು ಅರ್ಹತಾ/ಪ್ರಮಾಣ ಪತ್ರಗಳು ಹಾಗೂ ದಾಖಲಾತಿಗಳನ್ನು ಸ್ಕ್ಯಾನ್‌ ಮಾಡಿದ ಪ್ರತಿಗಳನ್ನು ಆನ್‌ಲೈನ್‌ ಮುಖಾಂತರ ಸಲ್ಲಿಸಿ.
ಅರ್ಜಿ ಶುಲ್ಕವನ್ನು ಪಾವತಿಸಲು ನೀಡಲಾಗಿರುವ ಸೂಚನೆಗಳನ್ನು ನಿಮಗೆ ಅನ್ವಯವಾಗುವಂತೆ ಅನುಸರಿಸಿ ಪಾವತಿಸಿ.
ಎಲ್ಲಾ ವಿಧಾನಗಳನ್ನು ಸೂಕ್ತವಾಗಿ ಅನುಸರಿಸಿದ ನಂತರ ಸಬ್‌ಮಿಟ್‌ ಬಟನ್‌ ಮೇಲೆ ಕ್ಲಿಕ್‌ ಮಾಡಿ ಅರ್ಜಿಯನ್ನು ಸಲ್ಲಿಸಿ.
ಪ್ರಮುಖ ದಿನಾಂಕಗಳು:

ಆನ್‌ಲೈನ್‌ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 18-12-2021
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-01-2022
ಹೆಚ್ಚಿನ ವಿವರಗಳಿಗೆ ಸಂಸ್ಥೆಯ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.

ಅಧಿಕೃತ ಸಾಮಾಜಿಕ ಜಾಲತಾಣ: bamulnandini.coop
ಸಹಾಯವಾಣಿ ಸಂಖ್ಯೆ: 8867031693

ಇದನ್ನೂ ಓದಿ: Job Alert in Flipkart Bengaluru: ಫ್ಲಿಪ್‌ಕಾರ್ಟ್‌ನಲ್ಲಿ ಉದ್ಯೋಗಾವಕಾಶ; ಜವಾಬ್ದಾರಿಯು ಹುದ್ದೆ, ಓರ್ವ ಅಭ್ಯರ್ಥಿಗೆ ಮಾತ್ರ ಅವಕಾಶ

(KMF BAMUL Recruitment for 39 job openings)

Comments are closed.