Ajinkya Rahane 5000 test runs: ಟೆಸ್ಟ್ ಕ್ರಿಕೆಟ್‌ನಲ್ಲಿ 5 ಸಾವಿರ ರನ್ ಪೂರ್ತಿಗೊಳಿಸಿದ ಟೀಮ್ ಇಂಡಿಯಾ ಆಪದ್ಬಾಂಧವ

ಲಂಡನ್: (Ajinkya Rahane 5000 test runs) ಟೀಮ್ ಇಂಡಿಯಾ ಟೆಸ್ಟ್ ತಂಡದ ಆಪದ್ಬಾಂಧವ ಅಜಿಂಕ್ಯ ರಹಾನೆ (Ajinkya Rahane) ಟೆಸ್ಟ್ ಕ್ರಿಕೆಟ್‌ನಲ್ಲಿ 5 ಸಾವಿರ ರನ್‌ಗಳ ಮೈಲುಗಲ್ಲು ನೆಟ್ಟಿದ್ದಾರೆ. ಲಂಡನ್‌ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ WTC 2023 ಫೈನಲ್ (ICC World test championship final 2023 – WTC final 2023) ಪಂದ್ಯದ ಮೂರನೇ ದಿನದಾಟದ ವೇಳೆ ರಹಾನೆ ಈ ಸಾಧನೆ ಮಾಡಿದ್ದಾರೆ. ಸುದೀರ್ಘ 18 ತಿಂಗಳುಗಳ ನಂತರ ಭಾರತ ಪರ ಮೊದಲ ಟೆಸ್ಟ್ ಪಂದ್ಯವಾಡುತ್ತಿರುವ 35 ವರ್ಷದ ಅಜಿಂಕ್ಯ ರಹಾನೆ ಆಕರ್ಷಕ 89 ರನ್ ಗಳಿಸಿ ಔಟಾಗುವ ಮೂಲಕ ಶತಕ ವಂಚಿತರಾದರು.

6 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿ ತೀರಾ ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾದೆ ರಹಾನೆ ತಮ್ಮ ಜವಾಬ್ದಾರಿಯುತ ಆಟದ ಮೂಲಕ ಆಸರೆಯಾದ್ದಷ್ಟೇ ಅಲ್ಲದೆ, ತಂಡವನ್ನು ಫಾಲೋ ಆನ್‌ನಿಂದ ಪಾರು ಮಾಡಿದರು. 7ನೇ ವಿಕೆಟ್’ಗೆ ಶಾರ್ದೂಲ್ ಠಾಕೂರ್ (51) ಜೊತೆ 145 ಎಸೆತಗಳಲ್ಲಿ ಅಮೋಘ 109 ರನ್’ಗಳ ಜೊತೆಯಾಟವಾಡಿದ ರಹಾನೆ, ಟೀಮ್ ಇಂಡಿಯಾದ ಆಗ್ರಕ್ರಮಾಂಕದ ಆಟಗಾರರು ಎಡವಿದ ಪಿಚ್‌ನಲ್ಲೇ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ತೋರಿಸಿದರು.

35 ವರ್ಷದ ಅಜಿಂಕ್ಯ ರಹಾನೆ 2022ರ ಜನವರಿ ತಿಂಗಳಲ್ಲಿ ಕೇಪ್ ಟೌನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ನಂತರ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. ಶ್ರೇಯಸ್ ಅಯ್ಯರ್ ಅವರಿಗಾಗಿ ರಹಾನೆ ಅವರನ್ನು ಟೀಮ್ ಇಂಡಿಯಾದಿಂದ ಕೈಬಿಡಲಾಗಿತ್ತು. ಆದರೆ WTC ಫೈನಲ್ ಪಂದ್ಯಕ್ಕೆ ಅಯ್ಯರ್ ಅಲಭ್ಯರಾದ ಕಾರಣ, ಮತ್ತೆ ರಹಾನೆ ಸ್ಥಾನ ಪಡೆದಿದ್ದರು. ಕಳೆದ ವರ್ಷ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡ ನಂತರ ದೇಶೀಯ ಕ್ರಿಕೆಟ್’ಗೆ ಮರಳಿದ್ದ ರಹಾನೆ, ಮುಂಬೈನ ಪರ ರಣಜಿ ಪಂದ್ಯಗಳನ್ನಾಡಿ ಕಳೆದ ಸಾಲಿನಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ್ದರು.

ಇದನ್ನೂ ಓದಿ : Delhi Capitals coach Sourav Ganguly : ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್‌ಗೆ ಕೊಕ್, ಸೌರವ್ ಗಂಗೂಲಿ ನೂತನ ಹೆಡ್ ಕೋಚ್?

ಅಜಿಂಕ್ಯ ರಹಾನೆ ಮತ್ತು ಶಾರ್ದೂಲ್ ಠಾಕೂರ್ ಅವರ ಬ್ಯಾಟಿಂಗ್ ಸಾಹಸದಿಂದ ಭಾರತ ತಂಡದ ತನ್ನ ಪ್ರಥಮ ಇನ್ನಿಂಗ್ಸ್‌ನಲ್ಲಿ 296 ರನ್ ಗಳಿಸಿ ಆಲೌಟಾಯಿತು. ನಂತರ ತನ್ನ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 3ನ ದಿನದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 123 ರನ್ ಗಳಿಸಿದ್ದು, ಒಟ್ಟಾರೆ 296 ರನ್‌ಗಳ ಮುನ್ನಡೆಯಲ್ಲಿದೆ.

Ajinkya Rahane 5000 test runs: Team India who completed 5000 runs in Test cricket is a threat

Comments are closed.