Ajinkya Rahane : ಅಮೋಘ ಕಂಬ್ಯಾಕ್‌ನೊಂದಿಗೆ ಭಾರತಕ್ಕೆ ಫಾಲೋ ಆನ್ ಅವಮಾನ ತಪ್ಪಿಸಿದ ಅಜಿಂಕ್ಯ ರಹಾನೆ

ಲಂಡನ್: Ajinkya Rahane : ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World test championship final 2023 – WTC final 2023) ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಫಾಲೋ ಆನ್ ಅವಮಾನದಿಂದ ಪಾರಾಗಿದೆ. ಲಂಡನ್’ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ WTC 2023 ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಫಾಲೋ ಆನ್ ಸುಳಿಗೆ ಸಿಲುಕಿತ್ತು. ದ್ವಿತೀಯ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿ ಫಾಲೋ ಆನ್ ಸುಳಿಗೆ ಸಿಲುಕಿದ್ದ ಟೀಮ್ ಇಂಡಿಯಾವನ್ನು ಆ ಅವಮಾನ ದಿಂದ ಪಾರು ಮಾಡಿದ್ದು ಕಂಬ್ಯಾಕ್ ಹೀರೋ ಅಜಿಂಕ್ಯ ರಹಾನೆ.

ಸುದೀರ್ಘ 18 ತಿಂಗಳುಗಳ ನಂತರ ಭಾರತ ಪರ ಮೊದಲ ಟೆಸ್ಟ್ ಪಂದ್ಯವಾಡಿದ 35 ವರ್ಷದ ಅಜಿಂಕ್ಯ ರಹಾನೆ ಆಕರ್ಷಕ 89 ರನ್ ಗಳಿಸಿ ಔಟಾದರು. 6 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿ ತೀರಾ ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾದೆ ರಹಾನೆ ತಮ್ಮ ಜವಾಬ್ದಾರಿಯುತ ಆಟದ ಮೂಲಕ ಆಸರೆಯಾದರು. 7ನೇ ವಿಕೆಟ್’ಗೆ ಶಾರ್ದೂಲ್ ಠಾಕೂರ್ (51) ಜೊತೆ 145 ಎಸೆತಗಳಲ್ಲಿ ಅಮೋಘ 109 ರನ್’ಗಳ ಜೊತೆಯಾಟವಾಡಿದ ರಹಾನೆ 89 ರನ್ ಗಳಿಸಿ ಔಟಾಗುವ ಮೂಲಕ ಶತಕ ವಂಚಿತರಾದರು. ಈ ಮಧ್ಯೆ WTC ಫೈನಲ್’ನಲ್ಲಿ ಅರ್ಧಶತಕ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್’ಮನ್ ಎಂಬ ಗೌರವಕ್ಕೆ ರಹಾನೆ ಪಾತ್ರರಾಗಿದ್ದಾರೆ.

35 ವರ್ಷದ ಅಜಿಂಕ್ಯ ರಹಾನೆ 2022ರ ಜನವರಿ ತಿಂಗಳಲ್ಲಿ ಕೇಪ್ ಟೌನ್’ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ನಂತರ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. ಶ್ರೇಯಸ್ ಅಯ್ಯರ್ ಅವರಿಗಾಗಿ ರಹಾನೆ ಅವರನ್ನು ಟೀಮ್ ಇಂಡಿಯಾದಿಂದ ಕೈಬಿಡಲಾಗಿತ್ತು. ಆದರೆ WTC ಫೈನಲ್ ಪಂದ್ಯಕ್ಕೆ ಅಯ್ಯರ್ ಅಲಭ್ಯರಾದ ಕಾರಣ, ಮತ್ತೆ ರಹಾನೆ ಸ್ಥಾನ ಪಡೆದಿದ್ದರು.

ಕಳೆದ ವರ್ಷ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡ ನಂತರ ದೇಶೀಯ ಕ್ರಿಕೆಟ್’ಗೆ ಮರಳಿದ್ದ ರಹಾನೆ, ಮುಂಬೈನ ಪರ ರಣಜಿ ಪಂದ್ಯಗಳನ್ನಾಡಿ ಕಳೆದ ಸಾಲಿನಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ್ದರು. ಅಷ್ಟೇ ಅಲ್ಲದೆ, ಇತ್ತೀಚೆಗೆ ಅಂತ್ಯಗೊಂಡ ಐಪಿಎಲ್-2023 ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಮಿಂಚುವ ಮೂಲಕ ಸಿಎಸ್’ಕೆ ತಂಡ ಚಾಂಪಿಯನ್ ಪಟ್ಟಕ್ಕೇರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಇದನ್ನೂ ಓದಿ : Virat Kohli: WTC ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿರಬೇಕಿತ್ತು ಅಂದ ಕ್ರಿಕೆಟ್ ಫ್ಯಾನ್ಸ್, ಕಾರಣ ಗೊತ್ತಾ?

ಇದನ್ನೂ ಓದಿ : WTC Final 2023 : ಪಾಕಿಸ್ತಾನದ ಅಂಗವಿಕಲ ಕ್ರಿಕೆಟ್ ಫ್ಯಾನ್’ಗೆ ಆಟೋಗ್ರಾಫ್ ನೀಡಿದ ಹರ್ಭಜನ್ ಸಿಂಗ್

Ajinkya Rahane batting avoids follow-on Ind vs Aus team India in WTC final 2023

Comments are closed.