Ajit Agarkar : ಬಿಸಿಸಿಐ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಸಂಬಳ ಮೂರು ಪಟ್ಟು ಹೆಚ್ಚು!

ಬೆಂಗಳೂರು : ಬಿಸಿಸಿಐ ಸೀನಿಯರ್ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ (Chairman of Senior Men’s Selection Committee) ನೇಮಕಗೊಂಡಿರುವ ಮಾಜಿ ಆಲ್ರೌಂಡರ್ ಅಜಿತ್ ಅಗರ್ಕರ್ (Ajit Agarkar) ಅವರ ಸಂಬಳ, ಈ ಹಿಂದೆ ಇದೇ ಹುದ್ದೆಯಲ್ಲಿದ್ದವರಿಗೆ ನೀಡಲಾಗುತ್ತಿದ್ದ ಸಂಭಾವನೆಗಿಂತ ಮೂರು ಪಟ್ಟು ಹೆಚ್ಚು.

ಸೀನಿಯರ್ ಆಯ್ಕೆ ಸಮಿತಿಯ ಈ ಹಿಂದಿನ ಮುಖ್ಯಸ್ಥರಾಗಿದ್ದ ಚೇತನ್ ಶರ್ಮಾ ಅವರಿಗೆ ಬಿಸಿಸಿಐ (BCCI) ವಾರ್ಷಿಕ 1 ಕೋಟಿ ರೂ.ಗಳ ಸಂಭಾವನೆ ನೀಡುತ್ತಿತ್ತು. ಆದರೆ ಹೊಸ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ವಾರ್ಷಿಕ ಸುಮಾರು 3 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಅಜಿತ್ ಅಗರ್ಕರ್’ಗಾಗಿ ಬಿಸಿಸಿಐ ತನ್ನ ನಿಯಮದಲ್ಲಿ ಬದಲಾವಣೆ ಮಾಡುವ ಸಾಧ್ಯತೆಯಿದ್ದು, ಶುಕ್ರವಾರ ನಡೆಯುವ ಬಿಸಿಸಿಐ ವಿಶೇಷ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರಲಿದೆ.

ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥರಾಗಲು ಅಜಿತ್ ಅಗರ್ಕರ್ ಸಂಭಾವನೆ ಹೆಚ್ಚಳದ ಬೇಡಿಕೆ ಇಟ್ಟಿದ್ದರು. ಕಾರಣ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚಿಂಗ್ ಹುದ್ದೆಯಲ್ಲಿದ್ದ ಅಗರ್ಕರ್’ಗೆ ಅಲ್ಲಿ ಒಂದು ಕೋಟಿ ಸಂಭಾವನೆ ನೀಡಲಾಗುತ್ತಿತ್ತು. ಜೊತೆಗೆ ಅಗರ್ಕರ್ ಕ್ರಿಕೆಟ್ ಕಾಮೆಂಟೇಟರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಈ ಕಾರಣಗಳಿಂದ ವಾರ್ಷಿಕ ಸುಮಾರು 3 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು.

ಹೀಗಾಗಿ ಚೀಫ್ ಸೆಲೆಕ್ಟರ್ ಆಗಲು ಹೆಚ್ಚಿನ ಸಂಭಾವನೆಗೆ ಅಗರ್ಕರ್ ಬಿಸಿಸಿಐಗೆ ಮನವಿ ಮಾಡಿದ್ದರು. ತಮ್ಮ ಬೇಡಿಕೆಯನ್ನು ಈಡೇರಿಸಿದರೆ ಮಾತ್ರ ಆಯ್ಕೆ ಸಮಿತಿಯ ಮುಖ್ಯಸ್ಥನ ಸ್ಥಾನವನ್ನು ಒಪ್ಪಿಕೊಳ್ಳುವುದಾಗಿ ಷರತ್ತು ಹಾಕಿದ್ದರು. ಈ ಷರತ್ತಿಗೆ ಮಣಿದಿರುವ ಬಿಸಿಸಿಐ ಸೀನಿಯರ್ ಆಯ್ಕೆ ಸಮಿತಿಯ ಮುಖ್ಯಸ್ಥನ ಸಂಭಾವನೆಯನ್ನು 3 ಪಟ್ಟು ಹೆಚ್ಚಿಸಿದೆ. ಸೀನಿಯರ್ ಆಯ್ಕೆ ಸಮಿತಿಯ ಸದಸ್ಯರು ತಲಾ 80 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ : Virat Kohli meets Gary Sobers : ವೆಸ್ಟ್ ಇಂಡೀಸ್ ದಿಗ್ಗಜನನ್ನು ಭೇಟಿ ಮಾಡಿದ ಟೀಮ್ ಇಂಡಿಯಾ ಕೋಚ್ ದ್ರಾವಿಡ್, ಕಿಂಗ್ ಕೊಹ್ಲಿ

ಇದನ್ನೂ ಓದಿ : Zim Afro T10 League : 2011ರ ವಿಶ್ವಕಪ್ ವಿಜೇತರ ಜೊತೆ ಜಿಮ್ ಆಫ್ರೋ ಟಿ10 ಲೀಗ್‌ನಲ್ಲಿ ಆಡಲಿದ್ದಾರೆ ಕೊಡಗಿನ ವೀರ ಉತ್ತಪ್ಪ

ಬಿಸಿಸಿಐ ಸೀನಿಯರ್ ಆಯ್ಕೆ ಸಮಿತಿ:
ಮುಖ್ಯಸ್ಥ: ಅಜಿತ್ ಅಗರ್ಕರ್
ಸದಸ್ಯರು: ಶಿವಸುಂದರ್ ದಾಸ್, ಸಲೀಲ್ ಅಂಕೋಲ, ಶ್ರೀಧರನ್ ಶರತ್, ಸುಬ್ರತೋ ಬ್ಯಾನರ್ಜಿ.

Ajit Agarkar: BCCI Chief Selector Ajit Agarkar’s salary is three times more!

Comments are closed.