ಭಾನುವಾರ, ಏಪ್ರಿಲ್ 27, 2025
HomeBreakingಒಂದೇ ಒಂದು ಎಸೆತ ಎದುರಿಸದೇ ಔಟ್‌ ಆದ ಅಂಜಲೋ ಮ್ಯಾಥ್ಯೂಸ್‌ ! ಕ್ರಿಕೆಟ್‌ ಇತಿಹಾಸದಲ್ಲಿಯೇ ಮೊದಲ...

ಒಂದೇ ಒಂದು ಎಸೆತ ಎದುರಿಸದೇ ಔಟ್‌ ಆದ ಅಂಜಲೋ ಮ್ಯಾಥ್ಯೂಸ್‌ ! ಕ್ರಿಕೆಟ್‌ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಟೈಮ್‌ಔಟ್‌

- Advertisement -

ದೆಹಲಿ : ಶ್ರೀಲಂಕಾ ಹಾಗೂ ಬಾಂಗ್ಲಾದೇಶ (Sri Lanka vs Bangladesh) ವಿರುದ್ದದ ಪಂದ್ಯದಲ್ಲಿ ಶ್ರೀಲಂಕಾದ ಖ್ಯಾತ ಆಟಗಾರ ಅಂಜಲೋ ಮ್ಯಾಥ್ಯೂಸ್‌ (Angelo Mathews )ಒಂದೇ ಒಂದು ಎಸೆತ ಎದುರಿಸದೇ ಔಟ್‌ ಆಗಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊತ್ತ ಮೊದಲ ಬಾರಿಗೆ ಟೈಮ್‌ಔಟ್‌ ಜಾರಿಯಾಗಿದೆ. ಅಷ್ಟಕ್ಕೂ ಏನೀ ಟೈಮ್‌ಔಟ್..‌ ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.

ವಿಶ್ವಕಪ್‌ನಲ್ಲಿ ಇಂದು ಶ್ರೀಲಂಕಾ ಹಾಗೂ ಬಾಂಗ್ಲಾದೇಶ (Sri Lanka vs Bangladesh) ತಂಡಗಳು ದೆಹಲಿ ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ಸೆಣೆಸಾಟವನ್ನು ನಡೆಸುತ್ತಿದೆ. ಈ ಎರಡೂ ತಂಡಗಳು ಈಗಾಗಲೇ ವಿಶ್ವಕಪ್‌ ಸೆಮಿಫೈನಲ್‌ ರೇಸ್‌ನಿಂದ (World Cup 2023) ಹೊರಬಿದ್ದಿವೆ. ಇಂದು ನಡೆಯುತ್ತಿರುವ ಪಂದ್ಯದಲ್ಲಿ ಶ್ರೀಲಂಕಾ ೪ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

Angelo Mathews got out without facing a single ball! First time out in cricket history
Image Credit To Original source

ಶ್ರೀಲಂಕಾ ತಂಡ 24.2 ಎಸೆತಗಳಲ್ಲಿ 135 ರನ್‌ ಗಳಿಸಿ 4 ವಿಕೆಟ್‌ ಕಳೆದುಕೊಂಡಿತ್ತು. ಸುದೀರ ಸಮರ ವಿಕ್ರಮ ಔಟಾಗುತ್ತಿದ್ದಂತೆಯೇ ಕ್ರೀಸ್‌ಗೆ ಬಂದ ಶ್ರೀಲಂಕಾ ದ ಹಿರಿಯ ಆಟಗಾರ ಆಂಜಲೋ ಮ್ಯಾಥ್ಯೂಸ್‌ ಹೆಲ್ಮೆಟ್‌ ಧರಿಸುವ ವೇಳೆಯಲ್ಲಿ ಹೆಲ್ಮೆಟ್‌ ಲಾಕ್‌ ಕಟ್‌ ಆಗಿತ್ತು. ಹೀಗಾಗಿ ಆಂಜಲೋ ಮ್ಯಾಥ್ಯೂಸ್‌ ಒಂದೇ ಒಂದು ಎಸೆತವನ್ನೂ ಎದುರಿಸದೇ ಪಿಚ್‌ ಪಕ್ಕದಲ್ಲಿ ನಿಂತಿದ್ದರು.

ಇದನ್ನೂ ಓದಿ : ವಿರಾಟ್‌ ಕೊಹ್ಲಿ ಶತಕ ವಿಶ್ವದಾಖಲೆ : ತನ್ನ ದಾಖಲೆ ಸರಿಗಟ್ಟಿದ ಕೊಹ್ಲಿ ಬಗ್ಗೆ ಸಚಿನ್‌ ತೆಂಡೂಲ್ಕರ್‌ ಹೀಗೆ ಹೇಳಿದ್ಯಾಕೆ ?

ಜೊತೆಗೆ ಬಾಂಗ್ಲಾದೇಶ ತಂಡದ ಕೀಪರ್‌ ರಹೀಂ ಬಳಿ ಹೆಲ್ಮೆಟ್‌ ತೋರಿಸಿ, ಹೆಲ್ಮೆಟ್‌ ತರುವಂತೆ ತಂಡದ ಆಟಗಾರರಿಗೆ ಸೂಚನೆಯನ್ನು ನೀಡಿ ಪಿಚ್‌ ಪಕ್ಕದಲ್ಲಿ ನಿಂತಿದ್ದರು. ಬಾಂಗ್ಲಾದೇಶದ ತಂಡದ ಪರ ಬೌಲಿಂಗ್‌ ಮಾಡುತ್ತಿದ್ದ ಶಕೀಬ್‌ ಅಲ್‌ ಹಸನ್‌ ಅಂಪೈರ್‌ ಬಳಿ ಟೈಮ್‌ಔಟ್‌ ಗೆ ಅಫೀಲ್‌ ಮಾಡಿದ್ದಾರೆ. ಬೌಲರ್‌ ಅಫೀಲ್‌ ಪುರಸ್ಕರಿಸಿದ ಅಂಪೈರ್‌ ಮ್ಯಾಥೂಸ್‌ ಔಟ್‌ ಎಂದು ಘೋಷಣೆ ಮಾಡಿದ್ದಾರೆ.

ವಿಶ್ವ ಕ್ರಿಕೆಟ್‌ ಇತಿಹಾಸದಲ್ಲಿಯೇ ಇದು ಮೊದಲ ಘಟನೆ. ಆಂಜಲೋ ಮ್ಯಾಥ್ಯೂಸ್‌ ಐಸಿಸಿ ರೂಪಿಸಿದ ಟೈಮ್‌ ಔಟ್‌ಗೆ ಬಲಿಯಾದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಆಂಜಲೋ ಮ್ಯಾಥ್ಯೂಸ್‌ ಔಟ್‌ ಆಗುತ್ತಿದ್ದಂತೆಯೇ ಮೈದಾನದಲ್ಲಿ ನೆರೆದಿದ್ದ ಕ್ರಿಕೆಟ್‌ ಅಭಿಮಾನಿಗಳಿಗೆ ಶಾಕ್‌ ಆಗಿತ್ತು. ಖುದ್ದು ಮ್ಯಾಥ್ಯೂಸ್‌ ಈ ಬಗ್ಗೆ ಅಂಪೈರ್‌ ಬಳಿಯಲ್ಲಿ ಪ್ರಶ್ನಿಸಿದ್ದಾರೆ.

Angelo Mathews got out without facing a single ball! First time out in cricket history
Image Credit To Original Source

ಮ್ಯಾಥ್ಯೂಸ್‌ ಮನವಿಗೆ ಸ್ಪಂದಿಸದ ಅಂಪೈರ್‌ ಔಟ್‌ ನೀಡಿದ ಹಿನ್ನೆಲೆಯಲ್ಲಿ ಮ್ಯಾಥ್ಯೂಸ್‌ ಬೇಸರದಿಂದಲೇ ಫೆವಿಲಿಯನ್‌ ಕಡೆಗೆ ಹೆಜ್ಜೆ ಹಾಕಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದು ಮೊದಲ ಟೈಮ್‌ ಔಟ್‌ ಆಗಿದೆ.

ಇದನ್ನೂ ಓದಿ: ವಿಶ್ವಕಪ್‌ 2023 : ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಯಾರಾಗ್ತಾರೆ ಟೀಂ ಇಂಡಿಯಾ ನಾಯಕ ?

ಏನಿದು ಐಸಿಸಿ ಟೈಂ ಔಟ್‌ ?
ಕ್ರಿಕೆಟ್‌ ಪಂದ್ಯ ನಡೆಯುತ್ತಿದ್ದ ವೇಳೆಯಲ್ಲಿ ಆಟಗಾರನೋರ್ವ ಔಟಾದ್ರೆ, ಅಥವಾ ಸ್ವಯಂ ನಿವೃತ್ತಿಯನ್ನು ಪಡೆದುಕೊಂಡ್ರೆ ಹೊಸ ಆಟಗಾರ 3 ನಿಮಿಷಗಳ ಒಳಗಾಗಿ ಕ್ರೀಸ್‌ಗೆ ಆಗಮಿಸಿ ಒಂದು ಎಸೆತವನ್ನು ಎದುರಿಸಬೇಕು. ಒಂದೊಮ್ಮೆ 3 ನಿಮಿಷಗಳ ಒಳಗಾಗಿ ಒಂದೇ ಒಂದು ಎಸೆತವನ್ನು ಎದುರಿಸಲು ಸಾಧ್ಯವಾಗದೇ ಇದ್ರೆ ಅಂತಹ ಆಟಗಾರನನ್ನು ಔಟ್‌ ಎಂದು ಘೋಷಿಸುವ ಅಧಿಕಾರ ಅಂಪೈರ್‌ಗೆ ಇದೆ.

ಸದ್ಯ ಅಂಪೈರ್‌ ನೀಡಿರುವ ತೀರ್ಪಿನ ವಿರುದ್ದ ಇದೀಗ ಕ್ರಿಕೆಟ್‌ ವಲಯದಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಅಂಪೈರ್‌ ಮ್ಯಾಥ್ಯೂಸ್‌ ಔಟ್‌ ಎಂದು ಘೋಷಿಸಿರುವುದು ಸರಿ ಎಂದ್ರೆ, ಇನ್ನೂ ಕೆಲವರು ತಪ್ಪು ಎನ್ನುತ್ತಿದ್ದಾರೆ. ಆದರೆ ಐಸಿಸಿ ನಿಯಮದ ಪ್ರಕಾರ ಅಂಪೈರ್‌ ತೀರ್ಪು ನೀಡಿದ್ದು, ಮುಂದಿನ ದಿನಗಳಲ್ಲಿ ಟೈಮ್‌ಔಟ್‌ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ಬರುವ ಸಾಧ್ಯತೆಯಿದೆ.

 

 

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular