Arjun Tendulkar IPL debut : ಅಪ್ಪ ವಿಶ್ವಕಪ್ ಎತ್ತಿ ಹಿಡಿದ ಮೈದಾನದಲ್ಲೇ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಅರ್ಜುನ್ ತೆಂಡೂಲ್ಕರ್

ಮುಂಬೈ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ (Sachin Tendulkar’s don Arjun Tendulkar) ಕೊನೆಗೂ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಾರೆ. 5 ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡದ ಪರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅರ್ಜುನ್ ತೆಂಡೂಲ್ಕರ್ ಐಪಿಎಲ್‌ಗೆ ಪಾದಾರ್ಪಣೆ (Arjun Tendulkar IPL debut) ಮಾಡಿದರು. ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, ಅರ್ಜುನ್ ತೆಂಡೂಲ್ಕರ್‌ಗೆ ಡೆಬ್ಯೂ ಕ್ಯಾಪ್ ನೀಡಿದರು.

ರೋಹಿತ್ ಶರ್ಮಾ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರೋಹಿತ್‌ಗೆ ಸಚಿನ್ ತೆಂಡೂಲ್ಕರ್ ಇಂಡಿಯಾ ಡೆಬ್ಯೂ ಕ್ಯಾಪ್ ನೀಡಿದ್ದರು. ಇದೀಗ ಸಚಿನ್ ಪುತ್ರನಿಗೆ ರೋಹಿತ್ ಶರ್ಮಾ ಐಪಿಎಲ್ ಪಾದಾರ್ಪಣೆಯ ಕ್ಯಾಪ್ ಹಸ್ತಾಂತರಿಸಿದ್ದಾರೆ. ಅಪ್ಪ ಸಚಿನ್ ತೆಂಡೂಲ್ಕರ್ ವಿಶ್ವಕಪ್ ಎತ್ತಿ ಹಿಡಿದ ಮೈದಾನದಲ್ಲಿ ಮಗ ಅರ್ಜುನ್ ಐಪಿಎಲ್‌ಗೆ ಕಾಲಿಟ್ಟದ್ದು ಮತ್ತೊಂದು ವಿಶೇಷ. 2011ರಲ್ಲಿ ಇದೇ ವಾಂಖೆಡೆ ಕ್ರೀಡಾಂಗಣದಲ್ಲಿ ಸಚಿನ್ ತೆಂಡೂಲ್ಕರ್ ಐಸಿಸಿ ಏಕದಿನ ವಿಶ್ವಕಪ್ ಎತ್ತಿ ಹಿಡಿದಿದ್ದರು.

ಕಳೆದೆರಡು ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಅರ್ಜುನ್ ತೆಂಡೂಲ್ಕರ್‌ಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಮುಂಬೈ ತಂಡಕ್ಕೆ ಕಾಲಿಟ್ಟ 3ನೇ ವರ್ಷ ಅರ್ಜುನ್ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಅರ್ಜುನ್ ಐಪಿಎಲ್ ಪಾದಾರ್ಪಣೆಗೆ ಸಹೋದರಿ ಸಾರಾ ತೆಂಡೂಲ್ಕರ್ ಸಾಕ್ಷಿಯಾಗಿದ್ದು ಇನ್ನೊಂದು ವಿಶೇಷ.

ಇದನ್ನೂ ಓದಿ : ಐಪಿಎಲ್ ಚೊಚ್ಚಲ ಪಂದ್ಯಕ್ಕೂ ಮುನ್ನ ಅರ್ಜುನ್ ತೆಂಡೂಲ್ಕರ್‌ನ್ನು ರೋಹಿತ್ ಶರ್ಮಾ ಅಪ್ಪಿಕೊಂಡ ವಿಡಿಯೋ ವೈರಲ್

ಇದನ್ನೂ ಓದಿ : Vyshak Vijaykumar : ಡ್ರೀಮ್ ಡೆಬ್ಯೂ ಮಾಡಿದ RCB ಸ್ಟಾರ್ ವೈಶಾಖ್’ಗೆ ಸಿಕ್ತು ಅಮ್ಮನ ಸಿಹಿ ಮುತ್ತು

ಏಪ್ರಿಲ್ 24ಕ್ಕೆ ಸಚಿನ್ ಹುಟ್ಟುಹಬ್ಬ. ಆ ದಿನ ಸಚಿನ್ ತೆಂಡೂಲ್ಕರ್ 50ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಅಪ್ಪನ 50ನೇ ಹುಟ್ಟುಹಬ್ಬಕ್ಕೆ ಮಗ ಅರ್ಜುನ್ ಒಂದು ವಾರ ಮೊದಲೇ ದೊಡ್ಡ ಗಿಫ್ಟ್ ನೀಡಿದ್ದಾನೆ.

ಇದನ್ನೂ ಓದಿ : Vyshak Vijaykumar : ಆರ್‌ಸಿಬಿ ಪರ ಪಾದಾರ್ಪಣೆಯ ಪಂದ್ಯದಲ್ಲಿ ಕನ್ನಡಿಗನ ಬೆಂಕಿ ಬೌಲಿಂಗ್, ಯಾರು ಈ ವೈಶಾಖ್..?

Arjun Tendulkar IPL debut : Sachin Tendulkar’s don Arjun Tendulkar : Arjun Tendulkar made his IPL debut on the ground where his father lifted the World Cup.

Comments are closed.