Balebare Ghat reopened : ಬಾಳೆಬರೆ ಘಾಟಿ ದುರಸ್ಥಿ ಕಾರ್ಯ ಪೂರ್ಣ : ತೀರ್ಥಹಳ್ಳಿ- ಕುಂದಾಪುರ ವಾಹನ ಸಂಚಾರ ಆರಂಭ

ಶಿವಮೊಗ್ಗ : (Balebare Ghat reopened) ಕುಂದಾಪುರ- ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಹಾದುಹೋಗುವ, ಕರಾವಳಿ ಹಾಗೂ ಮಲೆನಾಡನ್ನು ಬೆಸೆಯುವ ಬಾಳೆಬರೆ ಘಾಟಿಯ ಕಾಂಕ್ರಿಟೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇದೇ ಶನಿವಾರ ಏಪ್ರಿಲ್‌ 15 ರ ರಾತ್ರಿಯಿಂದಲೇ ಸಂಚಾರ ಪುನರಾರಂಭಗೊಂಡಿದೆ.

ಫೆ. 5 ರಿಂದ ಏಪ್ರಿಲ್‌ 5 ರವರೆಗೆ ಬಾಳೆಬರೆ ಘಾಟಿಯಲ್ಲಿ ಕಾಂಕ್ರಿಟೀಕರಣ, ರಕ್ಷಣೆಯ ತಡೆಗೋಡೆ, ಚರಂಡಿ ಹಾಗೂ ಮತ್ತಿತರ ಕಾಮಗಾರಿ ನಡೆಯುತ್ತಿರುವ ಕಾರಣ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಆ ಬಳಿಕ ಕಾಮಗಾರಿಗೆ ಕೆಲವು ಅಡೆತಡೆಗಳು ಬಂದ ಕಾರಣ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಕಾರಣಕ್ಕೆ ಮತ್ತೆ ಹತ್ತು ದಿನಗಳವರೆಗೆ ಸಂಚಾರ ನಿಷೇಧಿಸಲಾಗಿತ್ತು. ಇದೀಗ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಬಾಳೆಬರೆ ಘಾಟಿಯು ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆ ಸೇರಿ ಹುಲಿಕಲ್‌ ಚೆಕ್‌ ಪೋಸ್ಟ್‌ ನಿಂದ ಹೊಸಂಗಡಿಯ ಘಾಟಿಯ ಬುಡದ ವರೆಗೆ 14.5 ಕಿ.ಮೀ. ದೂರವಿದ್ದು, ಶಿವಮೊಗ್ಗ ಜಿಲ್ಲೆಯ 8 ಕಿಮೀ ಪೈಕಿ ಈ ಹಿಂದೆಯೇ ಸ್ವಲ್ಪ ಕಾಂಕ್ರಿಟೀಕರಣ ನಡೆಸಲಾಗಿದ್ದು, ಈಗ ಬಾಕಿಯಿದ್ದ 2.5 ಕಿ.ಮೀ. ರಸ್ತೆ ಕಾಂಕ್ರಿಟೀಕರಣಗೊಂಡಿದೆ. ಇನ್ನೂ ಉಡುಪಿ ಜಿಲ್ಲೆಯ ಘಾಟಿ ಪೈಕಿ ಈ ಹಿಂದೆ 2 ಕಿ.ಮೀ. ಕಾಂಕ್ರಿಟೀಕರಣಗೊಂಡಿದ್ದು, ಈಗ ಒಂದು ಕಿ.ಮೀ. ಕಾಂಕ್ರಿಟೀಕರಣಗೊಂಡಿದ್ದು, ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿನ 3.5 ಕಿ.ಮೀ ಕಾಂಕ್ರಿಟೀಕರಣ ಬಾಕಿ ಉಳಿದಿದೆ.

ಇದನ್ನೂ ಓದಿ : Increase in SC reservation : ಎಸ್‌ಸಿ ಸಮುದಾಯದ ಮೀಸಲಾತಿ ಹೆಚ್ಚಳ : ಸಿಎಂ ಬೊಮ್ಮಾಯಿ ಮಹತ್ವದ ಘೋಷಣೆ

ಇದನ್ನೂ ಓದಿ : Jagdish Shettar join Congress : ಕಾಂಗ್ರೆಸ್ ಗೆ ಸೇರ್ಪಡೆಯಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್

ಕುಂದಾಪುರ- ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಹಾದುಹೋಗುವ ಬಾಳೆಬಾರೆ ಘಾಟಿಯನ್ನು ಒಟ್ಟು 13 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಗಲೀಕರಣ, ಕಾಂಕ್ರಿಟೀಕರಣ, ರಕ್ಷಣಾ ತಡೆಗೋಡೆ ನಿರ್ಮಾಣ ಕಾರ್ಯ ನಡೆದಿದೆ.

ಇದನ್ನೂ ಓದಿ : Karnataka Ranaranga : ವರುಣಾದಲ್ಲಿ ಸಿದ್ದರಾಮಯ್ಯನನ್ನ ಸೋಲಿಸಿದರೆ 50 ಲಕ್ಷ ಹಣ ನೀಡುತ್ತೇನೆ : ರೈತನೋರ್ವನಿಂದ ಬಹಿರಂಗ ಸವಾಲು

Balebare Ghat reopened: Balebare Ghat repair work complete: Tirthahalli-Kundapur vehicle traffic started

Comments are closed.