KL Rahul Captain : ಅಫ್ಘಾನಿಸ್ತಾನ ವಿರುದ್ಧ ರಾಹುಲ್ ನಾಯಕ; ಅದ್ವಿತೀಯ ದಾಖಲೆ ಬರೆದ ಕನ್ನಡಿಗ

ದುಬೈ: ಏಷ್ಯಾ ಕಪ್ ಟೂರ್ನಿಯ ಸೂಪರ್-4 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ ತಂಡವನ್ನು(Indian Cricket Team) ಕನ್ನಡಿಗ ಕೆ.ಎಲ್ ರಾಹುಲ್ (KL Rahul Captain) ಮುನ್ನಡೆಸಿದ್ದಾರೆ (Asia Cup 2022 India Vs Afghanistan). ಈ ಮೂಲಕ ರಾಹುಲ್ ಅದ್ವಿತೀಯ ದಾಖಲೆಯೊಂದನ್ನು ಬರೆದಿದ್ದಾರೆ. ಟೆಸ್ಟ್, ಏಕದಿನ ಹಾಗೂ ಟಿ20.. ಹೀಗೆ ಕ್ರಿಕೆಟ್’ನ ಮೂರೂ ಪ್ರಕಾರಗಳಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ ಕರ್ನಾಟಕದ ಮೊದಲ ಆಟಗಾರನೆಂಬ ದಾಖಲೆ ನಿರ್ಮಿಸಿದ್ದಾರೆ. ಕರ್ನಾಟಕದ ದಿಗ್ಗಜ ಆಟಗಾರರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ಜಿ.ಆರ್ ವಿಶ್ವನಾಥ್ ಭಾರತ ತಂಡದ ನಾಯಕರಾಗಿದ್ದಾರೆ. ಆದರೆ ಯಾರೂ ಕೂಡ ಕ್ರಿಕೆಟ್’ನ ಮೂರೂ ಪ್ರಕಾರಗಳಲ್ಲಿ ನಾಯಕತ್ವ ವಹಿಸಿಲ್ಲ. ದ್ರಾವಿಡ್ ಟೆಸ್ಟ್ ಹಾಗೂ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರೆ, ಅನಿಲ್ ಕುಂಬ್ಳೆ ಮತ್ತು ಜಿ.ಆರ್ ವಿಶ್ವನಾಥ್ ಟೆಸ್ಟ್ ಕ್ರಿಕೆಟ್’ನಲ್ಲಿ ಭಾರತದ ನಾಯಕರಾಗಿದ್ದರು.

ಈ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿ 2ನೇ ಪಂದ್ಯದಲ್ಲಿ ರಾಹುಲ್ ಟೀಮ್ (KL Rahul Captain) ಇಂಡಿಯಾವನ್ನು ಮುನ್ನಡೆಸಿದ್ದರು. ಏಕದಿನ ಸರಣಿಯಲ್ಲೂ ಟೀಮ್ ಇಂಡಿಯಾ ನಾಯಕತ್ವ ವಹಿಸಿದ್ದರು. ಅಷ್ಟೇ ಅಲ್ಲ, ಇತ್ತೀಚೆಗೆ ನಡೆದ ಜಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲೂ ಕೆ.ಎಲ್ ರಾಹುಲ್ ಟೀಮ್ ಇಂಡಿಯಾದ ಚುಕ್ಕಾಣಿ ಹಿಡಿದಿದ್ದರು. ರಾಹುಲ್ ನಾಯಕತ್ವದಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯನ್ನು ಭಾರತ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು.

ಇದೀಗ ಏಷ್ಯಾ ಕಪ್’ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಟೀಮ್ ಇಂಡಿಯಾವನ್ನು ಮುನ್ನಡೆಸುವ ಮೂಲಕ ಕ್ರಿಕೆಟ್’ನ ಮೂರೂ ಫಾರ್ಮ್ಯಾಟ್’ನಲ್ಲಿ ರಾಹುಲ್ ಭಾರತ ತಂಡದ ನಾಯಕತ್ವ ವಹಿಸಿದಂತಾಗಿದೆ. ಅಫ್ಘಾನಿಸ್ತಾನ ವಿರುದ್ದ ನಾಯಕ ರೋಹಿತ್ ಶರ್ಮಾ ವಿಶ್ರಾಂತಿ ಬಯಸಿದ ಕಾರಣ, ತಂಡದ ನಾಯಕತ್ವ ಉಪನಾಯಕ ರಾಹುಲ್ ಅವರ ಹೆಗಲೇರಿತು. ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಕೆ.ಎಲ್ ರಾಹುಲ್ ಏಷ್ಯಾ ಕಪ್ ಟೂರ್ನಿಯಲ್ಲಿ ವೈಫಲ್ಯ ಎದುರಿಸಿದ್ದರು. ಪಾಕಿಸ್ತಾನ ವಿರುದ್ಧದ ಮೊದಲ ಲೀಗ್ ಪಂದ್ಯದಲ್ಲಿ ಎದುರಿಸಿದ ಪ್ರಥಮ ಎಸೆತದಲ್ಲೇ ಶೂನ್ಯಕ್ಕೆ ಕ್ಲೀನ್ ಬೌಲ್ಡಾಗಿದ್ದ ರಾಹುಲ್, ಹಾಂಕಾಂಗ್ ವಿರುದ್ಧದ 2ನೇ ಲೀಗ್ ಪಂದ್ಯದಲ್ಲಿ 36 ರನ್ ಗಳಿಸಿದ್ದರು. ಪಾಕಿಸ್ತಾನ ವಿರುದ್ಧವೇ ನಡೆದ ಸೂಪರ್-4 ಪಂದ್ಯದಲ್ಲಿ ಅಬ್ಬರದ ಆಟವಾಡಿದ್ದ ರಾಹುಲ್ ಸ್ಫೋಟಕ 28 ರನ್ ಗಳಿಸಿ ಔಟಾಗಿದ್ದರು.

ಇದನ್ನೂ ಓದಿ : Arshadeep Singh : ಅರಬ್ ನಾಡಿನಲ್ಲಿ ಅರ್ಷದೀಪ್ ಸಿಂಗ್‌ರನ್ನು ದೇಶದ್ರೋಹಿ ಎಂದು ಹೀಯಾಳಿಸಿದ ಭಾರತೀಯ

ಇದನ್ನೂ ಓದಿ : PV Shashikanth: ಕರ್ನಾಟಕ ರಣಜಿ ತಂಡಕ್ಕೆ ಪಿ.ವಿ ಶಶಿಕಾಂತ್ ಹೆಡ್ ಕೋಚ್

Asia Cup 2022 India Vs Afghanistan New Record as KL Rahul Captain Indian Cricket Team

Comments are closed.