Arshadeep Singh : ಅರಬ್ ನಾಡಿನಲ್ಲಿ ಅರ್ಷದೀಪ್ ಸಿಂಗ್‌ರನ್ನು ದೇಶದ್ರೋಹಿ ಎಂದು ಹೀಯಾಳಿಸಿದ ಭಾರತೀಯ

ದುಬೈ: ಟೀಮ್ ಇಂಡಿಯಾದ ಯುವ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ (Arshadeep Singh) ಭಾರೀ ಸುದ್ದಿಯಲ್ಲಿದ್ದಾರೆ. ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಸೂಪರ್-4 (Asia Cup 2022) ಪಂದ್ಯದಲ್ಲಿ ಕ್ಯಾಚ್ ಕೈ ಬಿಟ್ಟಿದ್ದ ಅರ್ಷದೀಪ್, ಕ್ರಿಕೆಟ್ ಪ್ರಿಯರ ಕೋಪಕ್ಕೆ ಗುರಿಯಾಗಿದ್ದರು.

ಅದೇ ಕೋಪದಲ್ಲಿ ವ್ಯಕ್ತಿಯೊಬ್ಬ ಟೀಮ್ ಇಂಡಿಯಾ ಆಟಗಾರರ ಮುಂದೆಯೇ ಅರ್ಷದೀಪ್ ಸಿಂಗ್ ಅವರನ್ನು ಹಿಗ್ಗಾಮುಗ್ಗ ನಿಂದಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಅರ್ಷದೀಪ್ ಆ ವ್ಯಕ್ತಿಯನ್ನು ದುರುಗುಟ್ಟಿ ನೋಡಿದ್ದಾನೆ. ಅಷ್ಟಕ್ಕೂ ಆಗಿದ್ದೇನಂದ್ರೆ ಶ್ರೀಲಂಕಾ ವಿರುದ್ಧ ಮಂಗಳವಾರ ನಡೆದ ಸೂಪರ್-4 ಪಂದ್ಯವನ್ನು ಸೋತ ನಂತರ ಭಾರತ ತಂಡ ಆಟಗಾರರು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಿಂದ ತೆರಳಲು ಬಸ್ ಹತ್ತುತ್ತಿದ್ದರು. ಅರ್ಷದೀಪ್ ಸಿಂಗ್ ಕ್ರೀಡಾಂಗಣದಿಂದ ಹೊರ ಬರುತ್ತಿದ್ದಂತೆ ಅಲ್ಲಿಯೇ ಇದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬ ಅರ್ಷದೀಪ್ ಅವರನ್ನು ನಿಂದಿಸಲು ಶುರು ಮಾಡಿದ್ದಾನೆ. ಅರ್ಷದೀಪ್ ಸಿಂಗ್’ರನ್ನು ದೇಶದ್ರೋಹಿ ಎಂದು ಕರೆದಿದ್ದಾನೆ.

“ಅರ್ಷದೀಪ್… ಕ್ಯಾಚ್ ಕೈ ಚೆಲ್ಲಿದ ದೇಶದ್ರೋಹಿ ಬಂದ ನೋಡಿ” ಎಂದು ಹೀಯಾಳಿಸುತ್ತಿರುವ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಕೇಳಿ ಸಿಟ್ಟಿಗೆದ್ದ ಅರ್ಷದೀಪ್ ಬಸ್’ನ ಮೆಟ್ಟಿಲಲ್ಲೇ ನಿಂತು ಸ್ವಲ್ಪ ಹೊತ್ತು ಆ ವ್ಯಕ್ತಿಯನ್ನು ದುರುಗುಟ್ಟಿ ನೋಡಿದ್ದಾರೆ.

ಅರ್ಷದೀಪ್ ಸಿಂಗ್’ರನ್ನು ಹೀಯಾಳಿಸುತ್ತಿದ್ದಂತೆ ಅಲ್ಲಿಗೆ ಬಂದ ಪತ್ರಕರ್ತರೊಬ್ಬರು ಆ ವ್ಯಕ್ತಿಯನ್ನು ತರಾಟೆಗೆ ತೆರೆದುಕೊಂಡಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ (Arshdeep Singh) ಕೈಚೆಲ್ಲಿದ್ದ ಕ್ಯಾಚ್ ಭಾರತದ ಸೋಲಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಪಂದ್ಯದ 18ನೇ ಓವರ್’ನ 3ನೇ ಎಸೆತದಲ್ಲಿ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಎಸೆತದಲ್ಲಿ ಪಾಕ್ ದಾಂಡಿಗ ಆಸಿಫ್ ಅಲಿ ನೀಡಿದ ಅತ್ಯಂತ ಸುಲಭ ಕ್ಯಾಚನ್ನು ಶಾರ್ಟ್ ಥರ್ಡ್ ಮ್ಯಾನ್ ವಿಭಾಗದಲ್ಲಿ ಅರ್ಷದೀಪ್ ಸಿಂಗ್ (Arshdeep Singh) ಕೈಚೆಲ್ಲಿದ್ದರು. ಆಗಿನ್ನೂ ಆಸಿಫ್ ಅಲಿ ಖಾತೆಯನ್ನೇ ತೆರೆದಿರಲಿಲ್ಲ. ಮುಂದಿನ ಓವರ್’ನಲ್ಲಿ ಅಬ್ಬರಿಸಿದ ಆಸಿಫ್ ಕೇವಲ 8 ಎಸೆತಗಳಲ್ಲಿ 16 ರನ್ ಬಾರಿಸಿ ಪಾಕಿಸ್ತಾನದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಪಾಕ್ ವಿರುದ್ಧದ ಸೋಲಿನ ನಂತರ ಶ್ರೀಲಂಕಾ ವಿರುದ್ಧವೂ ಸೋತಿರುವ ಭಾರತ, ಏಷ್ಯಾ ಕಪ್ ಟೂರ್ನಿಯಿಂದ ಬಹುತೇಕ ಹೊರ ಬಿದ್ದಿದೆ.

ಇದನ್ನೂ ಓದಿ : PV Shashikanth: ಕರ್ನಾಟಕ ರಣಜಿ ತಂಡಕ್ಕೆ ಪಿ.ವಿ ಶಶಿಕಾಂತ್ ಹೆಡ್ ಕೋಚ್

ಇದನ್ನೂ ಓದಿ : India failure in Asia Cup : ಏಷ್ಯಾ ಕಪ್‌ನಲ್ಲಿ ಭಾರತದ ವೈಫಲ್ಯಕ್ಕೆ ಕೋಚ್ ದ್ರಾವಿಡ್, ಕ್ಯಾಪ್ಟನ್ ರೋಹಿತ್ ಕಾರಣ

Asia cup 2022 Indian fans Abusing Arshadeep Singh On his face

Comments are closed.