ಕೊಲಂಬೋ : ಏಷ್ಯಾಕಪ್ (Asia Cup 2023 Final) ಅಂತಿಮ ಹಂತ ತಲುಪಿದೆ. ಭಾರತ ಹಾಗೂ ಶ್ರೀಲಂಕಾ ತಂಡಗಳು (india vs Srilanka) ಫೈನಲ್ ಪಂದ್ಯದಲ್ಲಿ ಸೆಣೆಸಾಡಲಿವೆ. ಈ ನಡುವಲ್ಲೇ ಟೀಂ ಇಂಡಿಯಾದ ಖ್ಯಾತ ಆಟಗಾರ ಅಕ್ಷರ್ ಪಟೇಲ್ (Axar Patel Rouled Out) ಗಾಯಗೊಂಡಿದ್ದು, ಅವರ ಸ್ಥಾನದಲ್ಲಿ ಖ್ಯಾತ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ (Washington Sunar) ತಂಡ ಕೂಡಿಕೊಂಡಿದ್ದಾರೆ.

ಫೈನಲ್ ಪಂದ್ಯದ ಆರಂಭಕ್ಕೂ ಮುನ್ನ ಭಾರತದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. 23ರ ಹರೆಯದ ಸುಂದರ್ ಅವರು ಬಾಂಗ್ಲಾದೇಶ ವಿರುದ್ಧ ಪಂದ್ಯದ ವೇಳೆಯಲ್ಲಿ ಅಕ್ಷರ್ ಪಟೇಲ್ ಅವರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಬದಲಿಗೆ ಈ ಆಯ್ಕೆ ನಡೆದಿದೆ.

ಏಷ್ಯಾಕಪ್ 2023ರ ಫೈನಲ್ ಪಂದ್ಯದಲ್ಲಿ ಭಾರತವು ಸೆಪ್ಟೆಂಬರ್ 17ರ ಭಾನುವಾರ ಶ್ರೀಲಂಕಾದ ಪ್ರೇಮದಾಸ ಕ್ರೀಡಾಂಗಣದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಉಭಯ ತಂಡಗಳು ಅಂತಿಮ ಹಣಾಹಣಿಗೆ ತಯಾರಿ ನಡೆಸುತ್ತಿವೆ. ಮುಂಬರುವ ಏಷ್ಯನ್ ಗೇಮ್ಸ್‌ಗಾಗಿ ಭಾರತ ತಂಡದ ಭಾಗವಾಗಿರುವ ವಾಷಿಂಗ್ಟನ್ ಸುಂದರ್ ಪ್ರಸ್ತುತ ಬೆಂಗಳೂರಿನಲ್ಲಿ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.

ಅವರು ಜನವರಿ 2023ರಲ್ಲಿ ನ್ಯೂಜಿಲೆಂಡ್ ವಿರುದ್ಧ ಸ್ವದೇಶದಲ್ಲಿ ನಡೆದ ಸರಣಿಯಲ್ಲಿ ಅವರು ಕೊನೆಯ ಏಕದಿನ ಪಂದ್ಯವನ್ನು ಆಡಿದರು. ಇನ್ನು ಶುಕ್ರವಾರ ಬಾಂಗ್ಲಾದೇಶದ ವಿರುದ್ಧದ ‘ಸೂಪರ್ 4’ ಪಂದ್ಯದಲ್ಲಿ ಅಕ್ಷರ್ 34 ಎಸೆತಗಳಲ್ಲಿ 42 ರನ್ ಗಳಿಸಿದರು. ಅಕ್ಸರ್ ಭಾರತದ ವಿಶ್ವಕಪ್ 2023 ತಂಡದಲ್ಲಿ ಪ್ರಮುಖ ಆಲ್ ರೌಂಡರ್ ಆಗಿದ್ದಾರೆ.
ಇದನ್ನೂ ಓದಿ : ಏಷ್ಯಾ ಕಪ್ 202 : ಭಾರತ ಶ್ರೀಲಂಕಾ ಫೈನಲ್ ಪಂದ್ಯ : ಶ್ರೀಲಂಕಾದ ಖ್ಯಾತ ಆಟಗಾರ ಮಹೇಶ್ ತೀಕ್ಷಣ ಔಟ್
ಆದರೆ ಗಾಯದ ಸಮಸ್ಯೆಯ ಹಿನ್ನೆಲೆಯಲ್ಲಿ ಅವರು ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಆಡಲು ಸಾಧ್ಯವಿಲ್ಲ. ಇದು ಭಾರತ ತಂಡಕ್ಕೆ ದೊಡ್ಡ ಮಟ್ಟದ ಹೊಡೆತ ಕೊಟ್ಟಿದೆ. ಆದರೆ ಇದೀಗ ಖ್ಯಾತ ಆಲ್ ರೌಂಡರ್ ತಂಡಕ್ಕೆ ಸೇರ್ಪಡೆ ಆಗಿರುವುದು ಟೀಂ ಇಂಡಿಯಾಕ್ಕೆ ಆನೆ ಬಲ ಬಂದಂತಾಗಿದೆ. ಕೇವಲ ಭಾರತ ತಂಡಕ್ಕೆ ಮಾತ್ರವಲ್ಲೇ ಶ್ರೀಲಂಕಾ ಕೂಡ ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದೆ.

ಶ್ರೀಲಂಕಾ ತಂಡದ ಖ್ಯಾತ ಬೌಲರ್ ಮಹೇಶ್ ತೀಕ್ಷಣಾ ಈಗಾಗಲೇ ಗಾಯಗೊಂಡು ತಂಡದಿಂದ ಹೊರ ನಡೆದಿದ್ದಾರೆ. ಈ ಬಾರಿಯ ಏಷ್ಯಾ ಕಪ್ ಪಂದ್ಯಾವಳಿ ಉದ್ದಕ್ಕೂ ಮಹೇಶ್ ತೀಕ್ಷಣಾ ಉತ್ತಮ ನಿರ್ವಹಣೆಯನ್ನು ತೋರಿದ್ದರು. ಪಾಕಿಸ್ತಾನ ವಿರುದ್ದ ಪಂದ್ಯದ ವೇಳೆಯಲ್ಲಿ ಮಹೇಶ್ ತೀಕ್ಷಣ ಅವರು ಮಂಡಿರಜ್ಜು ಸಮಸ್ಯೆಯನ್ನು ಎದುರಿಸಿದ್ದರು. ಆದರೆ ಗಾಯದ ಸ್ವರೂಪ ಗಂಭೀರ ಸ್ಥಿತಿಯಲ್ಲಿ ಇದೆ ಎಂದು ವೈದ್ಯಕೀಯ ವರದಿಯಲ್ಲಿ ತಿಳಿದು ಬಂದಿದ್ದು, ಭಾರತ ವಿರುದ್ದದ ಫೈನಲ್ ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : Times Emerging Leaders ಪಟ್ಟಿಯಲ್ಲಿ ಹರ್ಮನ್ ಪ್ರೀತ್ ಕೌರ್, ಆದರೆ ವಿರಾಟ್ ಕೊಹ್ಲಿಗಿಲ್ಲ ಸ್ಥಾನ
ಈ ಬಾರಿಯ ಏಷ್ಯಾಕಲ್‌ನಲ್ಲಿ ಶ್ರೀಲಂಕಾ ತಂಡ ಪ್ರಮುಖ ನಾಲ್ವರು ಬೌಲರ್‌ಗಳ ಅನುಪಸ್ಥಿತಿಯಲ್ಲಿ ಕಣಕ್ಕೆ ಇಳಿದಿತ್ತು. ಆದರೂ ಕೂಡ ಮಹೇಶ್ ತೀಕ್ಷಣಾ ಅವರ ಉತ್ತಮ ಬೌಲಿಂಗ್ ಶ್ರೀಲಂಕಾ ಫೈನಲ್ ಎಂಟ್ರಿ ಕಾಣಲು ಸಹಕಾರಿಯಾಗಿತ್ತು. ಆದ್ರೀಗ ತೀಕ್ಷಣಾ ಕೂಡ ಹೊರ ನಡೆದಿರುವುದು ಶ್ರೀಲಂಕಾ ತಂಡಕ್ಕೆ ದೊಡ್ಡ ಹೊಡೆತಕೊಟ್ಟಿದೆ.

ದಸುನ್ ಶನಕ ನೇತೃತ್ವದ ತಂಡ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಬಲಾಢ್ಯವಾಗಿದೆ. ಆಟಗಾರರ ಹೊಂದಾಣಿಕೆಯ ಆಟದಿಂದಲೇ ಶ್ರೀಲಂಕಾ ತಂಡ ಇದೀಗ ಏಷ್ಯಾಕಪ್ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ. ಇಲ್ಲಿಯವರೆಗೆ, ಅವರು ಫೈನಲ್‌ಗೆ ಮೊದಲು ಇನ್ನೊಬ್ಬ ಆಟಗಾರನನ್ನು ಕಳೆದು ಕೊಂಡಿದ್ದಾರೆ.
ಇದನ್ನೂ ಓದಿ : ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಸಂಜು ಸ್ಯಾಮ್ಸನ್ ನಿವೃತ್ತಿ ! ವಿಶೇಷ ಪೋಟೋ ವೈರಲ್
ಏಷ್ಯಾಕಪ್‌ಗೂ ಮೊದಲೇ ಖ್ಯಾತ ಆಲ್‌ರೌಂಡರ್ ವನಿಂದು ಹಸರಂಗ, ಲಹಿರು ಕುಮಾರ್, ದುಷ್ಮಂತ ಚಮೇರ ಮತ್ತು ಮಧುಶನಕ ಗಾಯದ ಸಮಸ್ಯೆ ಯಿಂದ ತಂಡದಿಂದ ದೂರ ಉಳಿದಿದ್ದರು. ಆದರೆ ಇದೀಗ ಐದನೇ ಬೌಲರ್ ಕೂಡ ಗಾಯಗೊಂಡಿರುವುದು ಶ್ರೀಲಂಕಾಕ್ಕೆ ದೊಡ್ಡ ಹೊಡೆತಕೊಟ್ಟದೆ.
Asia Cup 2023 Final India Vs Srilanka Axar Patel Rouled Out Washington Sundar in