ಏಷ್ಯಾ ಕಪ್ 202 : ಭಾರತ ಶ್ರೀಲಂಕಾ ಫೈನಲ್‌ ಪಂದ್ಯ : ಶ್ರೀಲಂಕಾದ ಖ್ಯಾತ ಆಟಗಾರ ಮಹೇಶ್‌ ತೀಕ್ಷಣ ಔಟ್

ಭಾರತ ಹಾಗೂ ಶ್ರೀಲಂಕಾ ( IND vs SL ) ಫೈನಲ್ ಪಂದ್ಯ ನಾಳೆ ನಡೆಯಲಿದೆ. ಆದರೆ ಶ್ರೀಲಂಕಾ ತಂಡದ ಖ್ಯಾತ ಆಟಗಾರ ಮಹೇಶ್‌ ತೀಕ್ಷಣ ಮಂಡಿರಜ್ಜು ಗಾಯಗೊಂಡಿದ್ದಾರೆ. ಇದು ಶ್ರೀಲಂಕಾ ತಂಡಕ್ಕೆ ಭಾರೀ ಹೊಡೆತ ಕೊಟ್ಟಿದೆ, ಮಹೇಶ್‌ ತೀಕ್ಷಣ (mahesh theekshna) ಬದಲು ಸಹನ್ ಅರಾಚ್ಚಿಗೆ ತಂಡ ಸೇರಿಕೊಂಡಿದ್ದಾರೆ.

ಏಷ್ಯಾ ಕಪ್ 2023, ಭಾರತ ಹಾಗೂ ಶ್ರೀಲಂಕಾ ( IND vs SL ) ಫೈನಲ್ ಪಂದ್ಯ ನಾಳೆ ನಡೆಯಲಿದೆ. ಆದರೆ ಶ್ರೀಲಂಕಾ ತಂಡದ ಖ್ಯಾತ ಆಟಗಾರ ಮಹೇಶ್‌ ತೀಕ್ಷಣ ಮಂಡಿರಜ್ಜು ಗಾಯಗೊಂಡಿದ್ದಾರೆ. ಇದು ಶ್ರೀಲಂಕಾ ತಂಡಕ್ಕೆ ಭಾರೀ ಹೊಡೆತ ಕೊಟ್ಟಿದೆ, ಮಹೇಶ್‌ ತೀಕ್ಷಣ (mahesh theekshna) ಬದಲು ಸಹನ್ ಅರಾಚ್ಚಿಗೆ ತಂಡ ಸೇರಿಕೊಂಡಿದ್ದಾರೆ.

ಹೊಸದಿಲ್ಲಿ: ಏಷ್ಯಾಕಪ್‌ ಫೈನಲ್‌ ಪಂದ್ಯಕ್ಕಾಗಿ ಶ್ರೀಲಂಕಾ ಹಾಗೂ ಭಾರತ ತಂಡಗಳು ಸಜ್ಜಾಗುತ್ತಿವೆ. ಭಾರತ ಹಾಗೂ ಶ್ರೀಲಂಕಾ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದು, ಹೈವೋಲ್ಟೇಜ್‌ ಪಂದ್ಯವನ್ನು ನಿರೀಕ್ಷಿಸಬಹುದಾಗಿದೆ. ಈ ನಡುವಲ್ಲೇ ಶ್ರೀಲಂಕಾ ತಂಡದ ಖ್ಯಾತ ಆಟಗಾರ ಮಹೇಶ್‌ ತೀಕ್ಷಣ ಗಾಯಗೊಂಡಿರುವುದು ಶಾಕ್‌ ಕೊಟ್ಟಿದೆ.

Asia Cup 2023 Final Match India Sri Lanka injured Maheesh Theekshana Ruled Out
Image Credit tO Original Source

ಲಂಕಾ ಲಯನ್ಸ್‌ನ ಸ್ಟಾರ್ ಸ್ಪಿನ್ನರ್ ಮಹೇಶ್ ತೀಕ್ಷಣ ಅವರು ಪಾಕಿಸ್ತಾನ-ಶ್ರೀಲಂಕಾ ಏಷ್ಯಾ ಕಪ್ 2023, ಸೂಪರ್ 4 ಪಂದ್ಯದ ವೇಳೆ ಮಂಡಿರಜ್ಜು ಗಾಯಗೊಂಡಿದ್ದು, ಭಾನುವಾರದ ಭಾರತ ವಿರುದ್ಧದ ಏಷ್ಯಾಕಪ್ ಫೈನಲ್‌ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.

ಇದನ್ನೂ ಓದಿ : Times Emerging Leaders ಪಟ್ಟಿಯಲ್ಲಿ ಹರ್ಮನ್‌ ಪ್ರೀತ್‌ ಕೌರ್‌, ಆದರೆ ವಿರಾಟ್‌ ಕೊಹ್ಲಿಗಿಲ್ಲ ಸ್ಥಾನ

ಮಂಡಿರಜ್ಜು ಗಾಯಕ್ಕೆ ತುತ್ತಾಗಿರುವ ಮಹೇಶ್‌ ತೀಕ್ಷಣ ಅವರನ್ನು ಸ್ಕ್ಯಾನ್‌ಗೆ ಒಳಪಡಿಸಲಾಗಿದ್ದು, ಶ್ರೀಲಂಕಾ ತಂಡಕ್ಕೆ ಬದಲಿ ಆಟಗಾರನಾಗಿ ಸಹನ್‌ ಆರಾಚ್ಚಿ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಅಲ್ಲದೇ ಫೈನಲ್‌ ಪಂದ್ಯದಲ್ಲಿ ಮಹೇಶ್‌ ತೀಕ್ಷಣ ಅವರು ಆಡುವುದು ಅನುಮಾನ ಎನ್ನಲಾಗುತ್ತಿದೆ.

ಪಾಕಿಸ್ತಾನ ವಿರುದ್ದ ಪಂದ್ಯದಲ್ಲಿ ಕುಸಾಲ್ ಮೆಂಡಿಸ್ (91) ಮತ್ತು ಸದೀರ ಸಮರವಿಕ್ರಮ (48) ಶತಕದ ಜೊತೆಯಾಟದ ಮೂಲಕ ಶ್ರೀಲಂಕಾಕ್ಕೆ ಉತ್ತಮ ಆರಂಭ ನೀಡಿದ್ರು. ನಂತರದಲ್ಲಿ ಚರಿತ್ ಅಸಲಂಕಾ ಅಜೇಯ 49 ರನ್ ಗಳಿಸಿದ್ದಾರೆ. ಅಂತಿಮವಾಗಿ ಶ್ರೀಲಂಕಾ ತಂಡ ಪಾಕಿಸ್ತಾನ ತಂಡವನ್ನು ಎರಡು ವಿಕೆಟ್‌ಗಳ ಅಂತರದಲ್ಲಿ ಜಯಗಳಿಸಿ ಫೈನಲ್‌ಗೆ ಪ್ರವೇಶಿಸಿದೆ.

Asia Cup 2023 Final Match India Sri Lanka injured Maheesh Theekshana Ruled Out
Image Credit tO Original Source

ಇದನ್ನೂ ಓದಿ : ಬೆನ್‌ಸ್ಟೋಕ್ಸ್‌ ನಿವೃತ್ತಿ ವಾಪಾಸ್‌ ಬೆನ್ನಲ್ಲೇ ದಾಖಲೆಯ ಶತಕ : 6,6,6,6,6,6,6,6,6 ಸಿಕ್ಸರ್ 124 ಎಸೆತಕ್ಕೆ 182 ರನ್‌

ಏಷ್ಯಾಕಪ್‌ ಆರಂಭದಿಂದಲೂ ಉತ್ತಮ ಆಟದ ಪ್ರದರ್ಶನ ನೀಡಿದ್ದ ಪಾಕಿಸ್ತಾನ ತಂಡ ಈ ಬಾರಿಯ ಏಷ್ಯಾಕಪ್‌ ಗೆಲ್ಲುವ ಫೇವರೇಟ್‌ ತಂಡ ಎನಿಸಿಕೊಂಡಿತ್ತು. ಆದರೆ ಶ್ರೀಲಂಕಾ ವಿರುದ್ದದ ಸೋಲು ಪಾಕಿಸ್ತಾನ ಅಭಿಮಾನಿಗಳಿಗೆ ನಿರಾಸೆ ಉಂಟಾಗಿತ್ತು. ಇದೀಗ ಪಾಕಿಸ್ತಾನ ವಿರುದ್ದ ಗೆಲುವು ದಾಖಲಿಸುವ ಮೂಲಕ ಶ್ರೀಲಂಕಾ 11ನೇ ಬಾರಿ ಫೈನಲ್ ಪ್ರವೇಶಿಸಿದ್ದು, ಫೈನಲ್ ನಲ್ಲಿ ಭಾರತವನ್ನು ಎದುರಿಸಲಿದೆ.‌

ಏಷ್ಯಾ ಕಪ್ 2023 ಫೈನಲ್ : ಭಾರತ vs ಶ್ರೀಲಂಕಾ ಸಂಭಾವ್ಯ ಪ್ಲೇಯಿಂಗ್ XI

ಭಾರತ (IND) : ರೋಹಿತ್ ಶರ್ಮಾ (ನಾಯಕ ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್‌ ಕೀಪರ್), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್

ಶ್ರೀಲಂಕಾ (SL) : ಪಾತುಮ್ ನಿಸ್ಸಾಂಕ, ಕುಸಲ್ ಪೆರೇರಾ, ಕುಸಲ್ ಮೆಂಡಿಸ್ (ವಿಕೆಟ್‌ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದಸುನ್ ಶನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೇಶ್ ತೀಕ್ಷಣ, ಪ್ರಮೋದ್ ಮದುಶನ್, ಮತೀಶ ಪತಿರಣ

Asia Cup 2023 Final Match India Sri Lanka injured Maheesh Theekshana Ruled Out

Comments are closed.