Asia Cup 2023: ಆಗಸ್ಟ್ 23ರಿಂದ ಬೆಂಗಳೂರಲ್ಲಿ ಟೀಮ್ ಇಂಡಿಯಾ “ಏಷ್ಯಾ ಕಪ್ ಕ್ಯಾಂಪ್”, ಭಾನುವಾರ ಟೀಮ್ ಸೆಲೆಕ್ಷನ್

ಬೆಂಗಳೂರು: ಮುಂಬರುವ ಏಷ್ಯಾ ಕಪ್ ಏಕದಿನ (Asia Cup 2023) ಟೂರ್ನಿಗಾಗಿ ಭಾರತ ತಂಡದ ಆಯ್ಕೆ ಇದೇ ಭಾನುವಾರ (ಆಗಸ್ಟ್ 20) ಬೆಂಗಳೂರಿನಲ್ಲಿ ನಡೆಯಲಿದೆ. ಗಾಯದಿಂದ ಚೇತರಿಸಿಕೊಂಡಿರುವ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಟೀಮ್ ಇಂಡಿಯಾ ಕಂಬ್ಯಾಕ್’ಗೆ ರೆಡಿಯಾಗಿದ್ದು, ಏಷ್ಯಾ ಕಪ್ ಟೂರ್ನಿಗೆ ಆಯ್ಕೆಯಾಗುವುದು ಬಹುತೇಕ ಖಚಿತಗೊಂಡಿದೆ.

ಕಳೆದ ಐಪಿಎಲ್ ವೇಳೆ ಬಲತೊಡೆಯ ಸ್ನಾಯು ಸೆಳೆತಕ್ಕೊಳಗಾಗಿದ್ದ ರಾಹುಲ್, ನಂತರ ಲಂಡನ್’ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಕಳೆದ ಎರಡು ತಿಂಗಳುಗಳಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿರುವ (NCA) ರಾಹುಲ್, ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಎನ್’ಸಿಎನಲ್ಲಿ ರಾಹುಲ್ ಪ್ರತೀ ದಿನ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಅಭ್ಯಾಸ ನಡೆಸುತ್ತಿದ್ದು, ತಾವು ಫಿಟ್ ಆಗಿರುವ ಸಂದೇಶವನ್ನು ಬಿಸಿಸಿಐ ಆಯ್ಕೆ ಸಮಿಗೆ ರವಾನಿಸಿದ್ದಾರೆ.

ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆಗೊಳಗಾಗಿ ಚೇತರಿಸಿಕೊಂಡಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಶ್ರೇಯಸ್ ಅಯ್ಯರ್ ಫಿಟ್ನೆಸ್ ಬಗ್ಗೆ ಇನ್ನೂ ಗೊಂದಲ ಮುಂದುವರಿದಿದೆ. ಮೂಲಗಳ ಪ್ರಕಾರ ಅಯ್ಯರ್ ಏಷ್ಯಾ ಕಪ್ ಟೂರ್ನಿಗೆ ಲಭ್ಯವಾಗುವುದು ಅನುಮಾನ. ಇದನ್ನೂ ಓದಿ : Virat Kohli complets 15 years : ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕರಿಯರ್’ಗೆ 15 ವರ್ಷ, ಕ್ರಿಕೆಟ್ ಪಿಚ್’ನಲ್ಲಿ 500 ಕಿ.ಮೀ ಓಡಿದ್ದಾರೆ ರನ್ ಮಷಿನ್

ಏಷ್ಯಾ ಕಪ್ ಟೂರ್ನಿಗೆ ಪೂರ್ವಭಾವಿಯಾಗಿ ಭಾರತ ತಂಡ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಆಗಸ್ಟ್ 23ರಿಂದ ಅಭ್ಯಾಸ ಶಿಬಿರ ನಡೆಸಲಿದೆ. ಏಷ್ಯಾ ಕಪ್’ನಲ್ಲಿ ಆಡಲಿರುವ ಎಲ್ಲಾ ಆಟಗಾರರು, ತಂಡದ ಕೋಚ್, ಸಹಾಯಕ ಸಿಬ್ಬಂದಿ ಸೇರಿದಂತೆ ಇಡೀ ಟೀಮ್ ಇಂಡಿಯಾವೇ ಒಂದು ವಾರ ಬೆಂಗಳೂರಲ್ಲಿ ಟ್ರೈನಿಂಗ್ ಕ್ಯಾಂಪ್’ನಲ್ಲಿ ಭಾಗಿಯಾಗಲಿದೆ. ಏಷ್ಯಾ ಕಪ್ ಟೂರ್ನಿ ಆಗಸ್ಟ್ 31ರಂದು ಶ್ರೀಲಂಕಾದಲ್ಲಿ ಆರಂಭವಾಗಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಹೈವೋಲ್ಟೇಜ್ ಪಂದ್ಯ ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ತಂಡಗಳು ಭಾಗವಹಿಸಲಿವೆ.

ಏಷ್ಯಾ ಕಪ್ 2023 ಟೂರ್ನಿಯ ಲೀಗ್ ಪಂದ್ಯಗಳ ವೇಳಾಪಟ್ಟಿ (asia cup 2023 schedule)
ಆಗಸ್ಟ್ 30: ಪಾಕಿಸ್ತಾನ Vs ನೇಪಾಳ (ಬೆಳಗ್ಗೆ 10ಕ್ಕೆ, ಮುಲ್ತಾನ್)
ಆಗಸ್ಟ್ 31: ಶ್ರೀಲಂಕಾ Vs ಬಾಂಗ್ಲಾದೇಶ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
ಸೆಪ್ಟೆಂಬರ್ 2: ಭಾರತ Vs ಪಾಕಿಸ್ತಾನ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
ಸೆಪ್ಟೆಂಬರ್ 3: ಅಫ್ಘಾನಿಸ್ತಾನ Vs ಬಾಂಗ್ಲಾದೇಶ (ಬೆಳಗ್ಗೆ 9.30ಕ್ಕೆ, ಲಾಹೋರ್)
ಸೆಪ್ಟೆಂಬರ್ 4: ಭಾರತ Vs ನೇಪಾಳ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
ಸೆಪ್ಟೆಂಬರ್ 5: ಅಫ್ಘಾನಿಸ್ತಾನ Vs ಶ್ರೀಲಂಕಾ (ಬೆಳಗ್ಗೆ 9.30ಕ್ಕೆ, ಲಾಹೋರ್)

Asia Cup 2023: Team India “Asia Cup Camp” in Bangalore from August 23, Team Selection on Sunday asia cup 2023 schedule

Comments are closed.